

ಪಾಟ್ನಾ: ಚಿಕನ್ ಸಾಂಬಾರ್ನಲ್ಲಿ ಉಪ್ಪು (Salt ) ಕಡಿಮೆ ಇದೆ ಅಂತ ಹೇಳಿದ್ದಕ್ಕೆ ಗಂಡನಿಗೆ ಕಬ್ಬಿಣದ ರಾಡ್ನಿಂದ ಹೊಡೆದು ಹೆಂಡತಿ ಕೊಲೆ ಮಾಡಿದ್ದಾಳೆ. ಬಿಹಾರದ ಚಂಪಾರಣ್ ಜಿಲ್ಲೆಯ ಚೌತರ್ವದ ಕೊಲ್ಹುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು 35 ವರ್ಷದ ಶಂಶೇರ್ ಆಲಂ ಅಲಿಯಾಸ್ ಲಾಲು ಎಂದು ಗುರುತಿಸಲಾಗಿದೆ. ಆತನ ಪತ್ನಿ ಶಹನಾಜ್ ಬೇಗಂ ಮತ್ತು ಈಕೆ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಂಶೇರ್ ಮತ್ತು ಶಹನಾಜ್ ಅವರಿಗೆ ಮೂವರು ಮಕ್ಕಳಿದ್ದಾರೆ. ಕೋಳಿಯಲ್ಲಿ ಉಪ್ಪಿನಂಶ ಹೆಚ್ಚಿತ್ತು ಎಂದು ಸಂಶೇರ್ ಹೇಳಿದ ಬಳಿಕ ಪತಿ-ಪತ್ನಿಯ ನಡುವೆ ಜಗಳ ಶುರುವಾಗಿದೆ.
ನಡೆದಿದ್ದೇನು?: ಹೆಂಡತಿ ರಾತ್ರಿಯ ಊಟಕ್ಕೆ ಕೋಳಿ ಮಾಂಸವನ್ನು ಬೇಯಿಸಿದ್ದಳು. ಗಂಡ ಕೈಕಾಲು ತೊಳೆದು ಊಟಕ್ಕೆ ಕೂತು, ಮೊದಲ ತುತ್ತು ಬಾಯಿಗೆ ಹಾಕುವಷ್ಟರಲ್ಲಿ ಚಿಕನ್ ನಲ್ಲಿ ಉಪ್ಪು ಕಡಿಮೆ ಇರುವುದು ಗಮನಕ್ಕೆ ಬಂತು. ಗಂಡನ ದೂರನ್ನು ಕೇಳಿ ಹೆಂಡತಿಗೆ ಕೋಪ ಬಂತು. ಅವಳು ಅಸಮಾಧಾನಗೊಂಡಳು.
ಕಬ್ಬಿಣದ ರಾಡ್ ತಂದು ಗಂಡನಿಗೆ ಹೊಡೆಯತೊಡಗಿದಳು. ಇದಕ್ಕೆ ಆಕೆಯ ಸಹೋದರಿಯೂ ಬೆಂಬಲ ನೀಡಿದ್ದಾಳೆ. ಇಬ್ಬರೂ ಅವನನ್ನು ಹಿಡಿದು ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ತುಂಬಾ ಹೊಡೆದರು. ಸಂಶೇರ್ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಬ್ಬರ ಮುಂದೆ ಪ್ರಾರ್ಥಿಸಲು ಪ್ರಾರಂಭಿಸಿದನು. ಜೀವ ಭಿಕ್ಷೆ ಬೇಡುತ್ತಿದ್ದ. ಆದರೆ, ಇಬ್ಬರೂ ಸೇರಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಕೊಲೆ ಕೊಲೆ ಮಾಡಿದ್ದಾರೆ.
ಕಿರುಚಾಟ ಕೇಳಿ ಸುತ್ತಮುತ್ತಲಿನವರೂ ಅವರ ಮನೆಗೆ ಬಂದು ನೋಡಿದಾಗ ಒಳಗಿನ ದೃಶ್ಯ ಕಂಡು ಎಲ್ಲರೂ ಬೆಚ್ಚಿಬಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಶೇರ್‌ನನ್ನು ನೋಡಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಸಂಶೇರ್ ಸಾವನ್ನಪ್ಪಿದ್ದ. ಪೊಲೀಸರು ಸ್ಥಳಕ್ಕೆ ತಲುಪಿದರು. ಆರೋಪಿ ಸಹೋದರಿಯರಿಬ್ಬರನ್ನೂ ಬಂಧಿಸಲಾಗಿದೆ. ಸದ್ಯ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕೊಲೆ ಆರೋಪದ ಮೇಲೆ ಇಬ್ಬರು ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಚೌತರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಹುವಾ ಗ್ರಾಮದಲ್ಲಿ ನಡೆದಿದೆ