

ಮುಂಬೈ: ಸಲ್ಮಾನ್ ಖಾನ್(Salman Khan) ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ಆಸಕ್ತಿದಾಯಕ ಸಂಗತಿಗಳ ಪುಟ ತೆರೆಯಲಿದೆ. ಮೋಸ್ಟ್ ಬ್ಯಾಚುಲರ್ ಸ್ಟಾರ್ ಸಲ್ಲು ಭಾಯ್ ತಮ್ಮನ ಮಗ ಅರ್ಹಾನ್ ಖಾನ್ ಜತೆ ಪಾಡ್ಕಾಸ್ಟ್ ಮಾಡಲಿದ್ದಾರೆ. ಇದರ ಮೊದಲ ಕ್ಲಿಪ್ ಸಲ್ಮಾನ್ ಖಾನ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಖುಷ್ ಆಗಿದ್ದಾರೆ. ಈ ಸಂದರ್ಶನದಲ್ಲಿ ಭಾಯಿಜಾನ್ ತನ್ನ ಮಗನಿಗೆ ವಿಶೇಷ ಸಲಹೆ ನೀಡುತ್ತಿರುವುದನ್ನು ನೋಡಬಹುದು.
ಅರ್ಹಾನ್ ಖಾನ್, ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಅವರ ಮಗ. ಸ್ಟಾರ್ ಕಿಡ್ ಆಗಿರುವುದರ ಜತೆಗೆ ಅವರು ಡಂಬ್ ಬಿರಿಯಾನಿ ಎಂಬ ಪಾಡ್ಕ್ಯಾಸ್ಟ್ ಅನ್ನು ನಡೆಸುತ್ತಾರೆ. ಈವರೆಗೂ ಮಲೈಕಾ ಅರೋರಾ, ಅರ್ಬಾಜ್ ಖಾನ್, ಸೊಹೈಲ್ ಖಾನ್ ಎಲ್ಲರು ಸಂದರ್ಶನ ನೀಡಿದ್ದು ಈಗ ಸಲ್ಮಾನ್ ಖಾನ್ ಅವರ ಸರದಿಯಾಗಿದೆ.
ಅರ್ಹಾನ್ ಖಾನ್ ಅವರು ಪಾಡ್ಕಾಸ್ಟ್ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವ ಪ್ರೊಮೊವನ್ನು ಸ್ವತಃ ಭಾಯಿಜಾನ್ ಹಂಚಿಕೊಂಡಿದ್ದಾರೆ. ಜನವರಿ 31 ರಂದು, ಸಲ್ಮಾನ್ ಖಾನ್ ಡಂಬ್ ಬಿರಿಯಾನಿಯ ಪ್ರೋಮೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮಗ ಅರ್ಹಾನ್ಗೆ ಜೀವನಕ್ಕೆ ಸಂಬಂಧಿಸಿದ ಉತ್ತಮ ಸಲಹೆಯನ್ನು ನೀಡುತ್ತಿದ್ದಾರೆ. ತನ್ನ ಆರಂಭಿಕ ಪ್ರಯಾಣದಿಂದ ತನ್ನ ಸೋದರಳಿಯನೊಂದಿಗೆ ಮೋಜು ಮಾಡುವವರೆಗಿನ ಸಲ್ಮಾಣ್ ಖಾನ್ ಅವರು ಹಳೆಯ ಕ್ಲಿಪ್ ಅನ್ನು ವಿಡಿಯೋದಲ್ಲಿ ನೋಡಬಹುದು.
ಇದರ ನಂತರ ಅರ್ಹಾನ್ ಖಾನ್ಗೆ ಕೌಟುಂಬಿಕ ಮೌಲ್ಯಗಳಿಗೆ ಸಂಬಂಧಿಸಿದ ಸಲಹೆಯನ್ನು ನೀಡುವುದರ ಜತೆಗೆ ಇತರರನ್ನು ಕ್ಷಮಿಸುವ ಸಲಹೆಯನ್ನು ನೀಡಿದ್ದಾರೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗಾಗಿ ನೀವು ಇರಬೇಕು, ಅವರೊಂದಿಗೆ ಸದಾ ನಿಲ್ಲಬೇಕು ಎಂದು ಹೇಳಿದ್ದಾರೆ. ಅಲ್ಲದೆ ನನ್ನೊಂದಿಗೆ ಹೇಗೆ ಮಾತನಾಡುತ್ತೇನೆ ಎಂದು ನಾನು ಒಂದು ಸಲಹೆ ನೀಡಿದರೆ, ಸರಿ? ನೀವು ನನ್ನನ್ನು ದ್ವೇಷಿಸುತ್ತೀರಿ. ಏಕೆಂದರೆ ನಾನು ನನ್ನೊಂದಿಗೆ ತುಂಬಾ ಕಠಿಣವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನೀವು ಒಬ್ಬ ವ್ಯಕ್ತಿಯನ್ನು ಒಮ್ಮೆ, ಎರಡು ಬಾರಿ ಕ್ಷಮಿಸಬಹುದು, ಆದರೆ ಮೂರನೇ ಬಾರಿಗೆ (ಕೈ ಒರೆಸುವ ಸಂಜ್ಞೆ ಮಾಡಿ) ಚಲೋ ಖಲ್ಲಾಸ್ (ಅಂತ್ಯ) ಎಂದು ನನಗೆ ಕಠಿಣವಾಗಿ ಕ್ಷಮಿಸಬಹುದು ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಸಲ್ಮಾನ್ ಖಾನ್ ಶೀರ್ಷಿಕೆಯಲ್ಲಿ ನಾನು ಒಂದು ವರ್ಷದ ಹಿಂದೆ ಹುಡುಗರೊಂದಿಗೆ ಮಾತನಾಡಿದ್ದೇನೆ. ಅವರಿಗೆ ಎಲ್ಲಾ ಸಲಹೆಗಳು ನೆನಪಿದೆಯೇ ಅಥವಾ ಇಲ್ಲವೇ ಎಂದು ನನಗೆ ಖಚಿತವಿಲ್ಲ. ನನ್ನ ಮೊದಲ ಪಾಡ್ಕಾಸ್ಟ್ ಡಂಬ್ ಬಿರಿಯಾನಿ ಶೀಘ್ರದಲ್ಲೇ ಬರಲಿದೆ ಎಂದು ಬರೆದಿದ್ದಾರೆ.
ಸಲ್ಮಾನ್ ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದ್ದು ಇಲ್ಲಿಯವರೆಗೆ 7, 22,585 ಮಂದಿ ವೀಕ್ಷಿಸಿದ್ದಾರೆ. ಸುಲ್ತಾನ್ ಆಫ್ ಬಾಲಿವುಡ್. ಭಾಯಿಜಾನ್ ಪೂರ್ಣ ಸಂಚಿಕೆ ಯಾವಾಗ ಬರುತ್ತದೆ? ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.(ಏಜೆನ್ಸೀಸ್)