ಚಿಂಟು ಹೆಸರಿನ ಪ್ರೀತಿಯ ಕೋತಿ ಅಂತ್ಯ ಸಂಸ್ಕಾರಕ್ಕೆ ವಿದೇಶಿ ಪ್ರವಾಸ ಮೊಟಕುಗೊಳಿಸಿದ ಮಾಜಿ ಸಚಿವ ಸಾ.ರಾ.ಮಹೇಶ್​

s.r.mahesg jan 05 2020
Published on

ಮೈಸೂರು: ಮಾಜಿ ಸಚಿವ ಸಾ.ರಾ.ಮಹೇಶ್​ ಅವರು ತಮ್ಮ ನೆಚ್ಚಿನ ಕೋತಿಯ ಅಂತ್ಯ ಸಂಸ್ಕಾರಕ್ಕೆ ವಿದೇಶಿ ಪ್ರವಾಸ  ಮೊಟಕುಗೊಳಿಸಿ ಹಿಂದಿರುಗಿದ್ದಾರೆ.

ಸಾಲಿಗ್ರಾಮದ ತೋಟದ ಮನೆಯಲ್ಲಿ ಇದ್ದ ಚಿಂಟು ಹೆಸರಿನ ಕೋತಿಯ ಅಂತ್ಯಸಂಸ್ಕಾರಕ್ಕೆ ಅವರು ವಿದೇಶದಿಂದ ಮರಳಿದರು.

ಮೂರು ವರ್ಷಗಳ ಹಿಂದೆ ಕೋತಿ ಸಾ.ರಾ.ಮಹೇಶ್​ ಅವರ ತೋಟದ ಮನೆ ಸೇರಿಕೊಂಡಿತ್ತು. ಕೋತಿಗೆ ಆಶ್ರಯ ನೀಡಿ ಅದಕ್ಕೆ ಚಿಂಟು ಎಂದು ಮಹೇಶ್​ ಅವರು ಹೆಸರು ನಾಮಕರಣ ಮಾಡಿದ್ದರು. ಸಾಲಿಗ್ರಾಮಕ್ಕೆ ಬಂದರೆ ತಪ್ಪದೆ ತೋಟದ ಮನೆಗೆ ತೆರಳಿ ಚಿಂಟು ಜೊತೆ ಹಲವು ನಿಮಿಷ ಕಾಲ ಕಳೆದು ತೆರಳುತ್ತಿದ್ದರು. ಸಾ.ರಾ.ಮಹೇಶ್​ ತೋಟದ ಮನೆಯ ಗೇಟ್​ ಬಳಿ ಬರುತ್ತಿದ್ದಂತೆ ಚಿಂಟು ಓಡೋಡಿ ಬಂದು ಅವರ ಹೆಗಲ ಮೇಲೆ ಕುಳಿತುಕೊಳ್ಳುತ್ತಿತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net