

ಬೆಂಗಳೂರು: 'ಕೆಜಿಎಫ್' ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ನ ರೆಬೆಲ್ ಸ್ಟಾರ್, ನಟ ಪ್ರಭಾಸ್ ಕಾಂಬಿನೇಷನ್ನಲ್ಲಿ ತಯಾರಾದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಸಲಾರ್' ಬಿಡುಗಡೆಗೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ಸದ್ಯ ಟಿಕೆಟ್ ಖರೀದಿಯಲ್ಲಿ ಅಬ್ಬರಿಸಿದೆ. ಯಾವ ರಾಜ್ಯಗಳಲ್ಲಿ ಎಷ್ಟು ಟಿಕೆಟ್‌ಗಳು ಸೇಲ್ ಆಗಿವೆ ಎಂಬುದರ ವಿವರ ಹೀಗಿದೆ.
ಇದನ್ನೂ ಓದಿ: ವಿಶ್ವ ಮಾನವ ದಿನಾಚರಣೆ : ಪೂರ್ವಭಾವಿ ಸಭೆ
ಗ್ಯಾಂಗ್ಸ್ಟರ್, ಆ್ಯಕ್ಷನ್ ಜಾನರ್ ಹೊಂದಿರುವ 'ಸಲಾರ್', ನಾಳೆ ಜಾಗತಿಕವಾಗಿ ಬಿಡುಗಡೆಗೊಳ್ಳಲಿದ್ದು, ಮೊದಲ ದಿನವೇ ಚಿತ್ರ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿರುವ ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಖರೀದಿ ಮಾಡಿದ್ದಾರೆ. ಡಿಸೆಂಬರ್ 20, 2023ರ ಅಂತ್ಯದ ವೇಳೆಗೆ, ದೇಶದಾದ್ಯಂತ ಒಟ್ಟು 30.25 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಅದರ ಡಿಟೇಲ್ಸ್ ಈ ಕೆಳಕಂಡಂತಿದೆ.
ಆಂಧ್ರಪ್ರದೇಶ: 13.25 ಲಕ್ಷ
ಕರ್ನಾಟಕ: 3.25 ಲಕ್ಷ
ಉತ್ತರ ಭಾರತ: 5.25 ಲಕ್ಷ
ನಿಜಾಮ್ (ತೆಲಂಗಾಣ): 6 ಲಕ್ಷ
ತಮಿಳುನಾಡು: 1 ಲಕ್ಷ
ಕೇರಳ: 1.5 ಲಕ್ಷ
ಈ ಅಂಕಿಅಂಶಗಳು ದೇಶದ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಾದ ಪಿವಿಆರ್, INOX ಮತ್ತು ಸಿನಿಪೋಲಿಸ್ ಹೊರತುಪಡಿಸಿ ನೀಡಲಾಗಿದೆ. ಮಲ್ಟಿಪ್ಲೆಕ್ಸ್ಗಳನ್ನು ಲೆಕ್ಕಿಸದೆ 'ಸಲಾರ್' ಈ ಸಾಧನೆಯನ್ನು ಮಾಡಿರುವುದು ಅದ್ಬುತ ಎಂದು ಸಿನಿ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಜಗಪತಿ ಬಾಬು, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಬಾಬಿ ಸಿಂಹ, ಜಾನ್ ವಿಜಯ್ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).