

ಡಿಸೆಂಬರ್ 22 ಭಾರತೀಯ ಚಿತ್ರರಂಗದ ಇಬ್ಬರು ದೊಡ್ಡ ತಾರೆಯರ ಸಿನಿಮಾಗಳು ತೆರೆ ಕಾಣಲಿದೆ. ಶಾರುಖ್ ಖಾನ್ ನಟನೆಯ ʼಡುಂಕಿʼ ಮತ್ತು ಪ್ರಭಾಸ್ ನಾಯಕತ್ವದ ʼಸಲಾರ್ʼ ಎರಡೂ ಈ ವರ್ಷ ಡಿಸೆಂಬರ್ 22 ರಂದು ಥಿಯೇಟರ್‌ಗಳಲ್ಲಿ ಬರಲಿವೆ.
ನಟ ಶಾರುಖ್ ಖಾನ್ ಮತ್ತು ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ʼಡುಂಕಿʼ ಸಿನಿಮಾದ ರಿಲೀಸ್ ಡೇಟ್ ಘೋಷಿಸಿದ್ದರು. ಇಂದು ಸಲಾರ್ ಚಿತ್ರತಂಡ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.
ಸಲಾರ್ ರಿಲೀಸ್ ಕುರಿತು ನಟ ಪ್ರಭಾಸ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಚಿತ್ರ ವಿಶ್ವಾದ್ಯಂತ ಡಿಸೆಂಬರ್ 22, 2023 ರಂದು ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ಕಾರಣರಾಂತದಿಂದ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಆದ್ರೆ ಇದೀಗ ಡಿಸೆಂಬರ್ 22ರಂದು ಸಲಾರ್ ತೆರೆ ಕಾಣಲಿದೆ.
ಸಲಾರ್ ಸಿನಿಮಾದ ಪ್ರೀಮಿಯರ್ ಗಳನ್ನು ಅಮೆರಿಕದಲ್ಲಿ 1979ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ. ಅಲ್ಲಿ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ. ತೀರಾ ಬಿಡುಗಡೆ ಮುಂದೂಡಲ್ಪಟ್ಟಿರುವುದರಿಂದ ಕೆಲವು ಟಿಕೆಟ್‌ದಾರರ ಬಿಡುಗಡೆ ದಿನಾಂಕಕ್ಕೆ ಟಿಕೆಟ್ ಹೊಂದಾಣಿಕೆ ಮಾಡಲಾಗುತ್ತದೆ.
ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಡುಂಕಿಯಲ್ಲಿ ತಾಪ್ಸಿ ಪನ್ನು ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಗೌರಿ ಖಾನ್ ನಿರ್ಮಿಸಲಿದ್ದಾರೆ. ಇನ್ನು ಹೊಂಬಾಳೆ ಫಿಲ್ಮಂಸ್ ನಿರ್ಮಾಣದ ಸಲಾರ್ ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.