ರಿ ಶೂಟ್​ ಆಗಲಿದೆ ಬಹುನಿರೀಕ್ಷಿತ 'ಸಲಾರ್'​ ಕ್ಲೈಮ್ಯಾಕ್ಸ್​?

Untitled design - 2023-09-25T202814.437
Published on

ಮುಂಬೈ: ಟಾಲಿವುಡ್​ನ ರೆಬೆಲ್​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಮತ್ತು 'ಕೆಜಿಎಫ್'​ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿಬರಲು ಸಜ್ಜಾಗಿರುವ ಬಹುನಿರೀಕ್ಷಿತ 'ಸಲಾರ್​' ಕುರಿತು ಇದೀಗ ಹೊಸ ಮಾಹಿತಿಯೊಂದು ಲಭಿಸಿದೆ.

'ಸಲಾರ್​ ಭಾಗ 1 ಸೀಜ್​ ಫೈರ್​' ಟೈಟಲ್​ ಘೋಷಣೆಯಾದ ಮರು ದಿನದಿಂದಲೂ ಚಿತ್ರದ ಬಗ್ಗೆ ಒಂದಲ್ಲ ಒಂದು ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಇದೀಗ ಚಿತ್ರದ ಕ್ಲೈಮ್ಯಾಕ್ಸ್​ ಸೀನ್​ನ ಕೆಲ ಭಾಗಗಳನ್ನು ಮರು ಚಿತ್ರೀಕರಿಸಲು ನಿರ್ದೇಶಕ ಪ್ರಶಾಂತ್​ ನಿರ್ಧರಿಸಿದ್ದು, ತಮ್ಮ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಮತ್ತೊಮ್ಮೆ ಕರೆಸಿದ್ದಾರೆ ಎಂದು ಇತ್ತೀಚಿನ ಸಿನಿ ವರದಿ ತಿಳಿಸಿದೆ.

ವರದಿಗಳ ಪ್ರಕಾರ, ಉನ್ನತ ಸಿನಿಮಾ ಅನುಭವ ನೀಡಲು ಹೆಚ್ಚು ಶ್ರಮಿಸುತ್ತಿರುವ ಚಿತ್ರತಂಡ ಇದೀಗ ರಿ ಶೂಟ್​ ಮಾಡುವ ಮೂಲಕ 'ಸಲಾರ್'​ಗೆ ಮತ್ತಷ್ಟು ಮೆರುಗು ನೀಡಲು ಸಕಲ ತಯಾರಿಗಳನ್ನು ನಡೆಸುತ್ತಿದೆ. ಈ ಹಿಂದೆ ಸೆ.28 ರಂದು ಬಿಡುಗಡೆಗೊಳಿಸಲು ನಿಗಡಿಪಡಿಸಲಾಗಿದ್ದ ದಿನಾಂಕವನ್ನು ಚಿತ್ರ ತಯಾರಕರು ವಿಎಫ್​ಎಕ್ಸ್​ ಕಾರ್ಯಗಳಿಂದ ಮೂಂದೂಡಿದ್ದರು. ಸದ್ಯ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆಯೇ? ಎಂಬ ಅನುಮಾನ ಸೃಷ್ಟಿಯಾಗಿದೆ.

ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಮೀನಾಕ್ಷಿ ಚೌಧರಿ, ಸರಣ್ ಶಕ್ತಿ, ಈಶ್ವರಿ ರಾವ್​, ಜಗಪತಿ ಬಾಬು ಮುಂತಾದವರ ತಾರಗಣವಿದೆ. 'ಕಾಂತಾರ' ಸಿನಿಮಾಗಳಂತಹ ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ​ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net