ಟ್ರೇಲರ್​ ಪೈಫೋಟಿ! 'ಸಲಾರ್'​ನ ಹಿಂದಿಕ್ಕಲಿದ್ಯಾ 'ಡಂಕಿ', ಎರಡೇ ದಿನಕ್ಕೆ ಶಾರುಖ್ ಚಿತ್ರ ಮುಂದು?

Untitled design (38)
Published on

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಇದೀಗ ಸ್ಟಾರ್​ ಸಿನಿಮಾಗಳ ಅಬ್ಬರ ಜೋರಾಗಿದ್ದು, ಟಾಪ್ ನಟರ ಚಿತ್ರಗಳ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ಕಳೆದ ಹಲವು ತಿಂಗಳಿನಿಂದ ಟಾಲಿವುಡ್​ನ ರೆಬೆಲ್ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ 'ಸಲಾರ್​' ಟ್ರೇಲರ್​ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿತ್ತು. ಅದಕ್ಕೆ ತಕ್ಕಂತೆ ಚಿತ್ರತಂಡ ಡಿ.01 ರಂದು ಚಿತ್ರದ ಅಧಿಕೃತ ಟ್ರೇಲರ್​ ಅನ್ನು ರಿಲೀಸ್ ಮಾಡಿತು. ಆಯಾ ಭಾಷೆಗಳಲ್ಲಿ ಅಧಿಕ ವೀಕ್ಷಣೆ ಪಡೆದ ಸಲಾರ್​ ಇದೀಗ ಆರನೇ ದಿನಕ್ಕೆ ಕೇವಲ ಹಿಂದಿ ಭಾಷೆಯಲ್ಲಿ 65 ಮಿಲಿಯನ್ ವೀಕ್ಷಣೆ ಗಳಿಸಿದೆ.

ಪ್ಯಾನ್ ಇಂಡಿಯಾ 'ಸಲಾರ್'​ ರಿಲೀಸ್​ ಆಗುವ ದಿನದಂದೇ ಬಿಡುಗಡೆಯಾಗಲಿರುವ ಶಾರುಖ್ ಖಾನ್​ ಅಭಿನಯದ 'ಡಂಕಿ' ಸಿನಿಮಾ, ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಪೈಪೋಟಿ ಎಂಬ ದೊಡ್ಡ ಅಲೆಯನ್ನೇ ಹುಟ್ಟುಹಾಕಿದೆ. ಸದ್ಯ ಕಿಂಗ್​ ಖಾನ್ ಮತ್ತು ಪ್ರಭಾಸ್​​ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿದ್ದು, ಎರಡು ಚಿತ್ರಗಳ ನಡುವೆ ಭಾರೀ ಹಣಾಹಣಿ ಇರಲಿದೆ ಎಂಬುದು ಇದೀಗ ಸಿನಿಪ್ರೇಕ್ಷಕರ ಲೆಕ್ಕಾಚಾರವಾಗಿದೆ. 'ಸಲಾರ್'​ ಟ್ರೇಲರ್​ ಬೆನ್ನಲ್ಲೇ ಹೊರಬಿದ್ದ 'ಡಂಕಿ' ಹಿಂದಿ ಟ್ರೇಲರ್​ ಇದೀಗ ವೀಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ.

ಬಿಡುಗಡೆಗೊಂಡ ಬಳಿಕ 6ನೇ ದಿನಕ್ಕೆ 'ಸಲಾರ್'​ನ ಹಿಂದಿ ಟ್ರೇಲರ್​ 65 ಮಿಲಿಯನ್ ವೀಕ್ಷಣೆ ಪಡೆದುಕೊಂಡರೆ, ಇತ್ತ 'ಡಂಕಿ' ಎರಡನೇ ದಿನಕ್ಕೆ 67 ಮಿಲಿಯನ್ ವ್ಯೂಸ್​ ಗಳಿಸಿದೆ. ಈ ಮೂಲಕ ಹಿಂದಿ ಟ್ರೇಲರ್​ನಲ್ಲಿ ಅಬ್ಬರಿಸುತ್ತಿರುವ ಶಾರುಖ್ ಸಿನಿಮಾ, ಮುಂದಿನ ದಿನಗಳಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net