More

    ಕೇಶವಾನಂದ ಭಾರತಿ ಪ್ರಕರಣದ ಐತಿಹಾಸಿಕ ತೀರ್ಪಿಗೆ 50 ವರ್ಷ: ಸುಪ್ರೀಂ ವೆಬ್​ಸೈಟ್​ನಲ್ಲಿ ಕನ್ನಡ ಸೇರಿ 10 ಭಾಷೆಗಳಲ್ಲಿ ತೀರ್ಪು ಲಭ್ಯ

    ನವದೆಹಲಿ: ಸಂವಿಧಾನದ ಮೂಲ ರಚನೆ ಸಿದ್ಧಾಂತವನ್ನು ರೂಪಿಸಿದ ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಈಗ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ರಾಷ್ಟ್ರವು ಈ ತೀರ್ಪಿನ 50ನೇ ವರ್ಷವನ್ನು ಸ್ಮರಿಸುತ್ತಿರುವ ಈ ಸಂದರ್ಭದಲ್ಲಿ ಈ ಭಾಷಾಂತರ ಸೌಲಭ್ಯ ಲಭ್ಯವಾಗಿದೆ.

    ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರೇ ಗುರುವಾರ ಈ ವಿಷಯ ತಿಳಿಸಿದ್ದಾರೆ.

    “ಮೂಲ ರಚನೆ” ಸಿದ್ಧಾಂತದ ಬಗ್ಗೆ ಮೆಚ್ಚುಗೆ ಪಡೆದ 1973 ರ ಈ ತೀರ್ಪು ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ ವಿಶಾಲವಾದ ಅಧಿಕಾರವನ್ನು ಎತ್ತಿಹಿಡಿಯಿತು. ಇದೇ ವೇಳೆ, ಸಂವಿಧಾನದ ಉಲ್ಲಂಘನೆಯ ಆಧಾರದ ಮೇಲೆ ಯಾವುದೇ ತಿದ್ದುಪಡಿಯನ್ನು ಪರಿಶೀಲಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಿತು. ಕೇಶವಾನಂದ ಭಾರತಿ ಪ್ರಕರಣದಲ್ಲಿ ತೀರ್ಪು ಬಂದು ಈಗ 50 ವರ್ಷ ಸಂದಿದೆ.

    ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಾಂವಿಧಾನಿಕ ಪೀಠವು 7-6ರ ಬಹುಮತದ ಮೂಲಕ ತೀರ್ಪು ನೀಡಿತು, ಸಂವಿಧಾನದ ಮೂಲಭೂತ ರಚನೆ ಅಥವಾ ಅಗತ್ಯ ಲಕ್ಷಣಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆಯೇ ಸಂವಿಧಾನ ತಿದ್ದುಪಡಿಯನ್ನು ಸಂಸತ್ತು ಮಾಡಬಹುದು ಎಂದು ತೀರ್ಪು ನೀಡಲಾಗಿದೆ.

    ಈ ತೀರ್ಪಿಗಾಗಿ ನಾವು ವೆಬ್-ಪುಟವನ್ನು ಮಾಡಿದ್ದೇವೆ. ಸಮಾಜದ ವಿಶಾಲ ವರ್ಗವನ್ನು ತಲುಪಲು ನಾವು ಇದನ್ನು ಭಾರತೀಯ ಭಾಷೆಗಳಿಗೆ ಭಾಷಾಂತರಿಸಬಹುದು ಎಂದು ನಾವು ಭಾವಿಸಿದ್ದೇವು. ಏಕೆಂದರೆ ಭಾಷೆಯ ಅಡೆತಡೆಗಳು ನ್ಯಾಯಾಲಯದ ಕೆಲಸವನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳುವುದನ್ನು ತಡೆಯುತ್ತವೆ ಎಂದು ಚಂದ್ರಚೂಡ್​ ಅವರು ಅಸ್ಸಾಂನಲ್ಲಿ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಪೌರತ್ವ ಕಾಯ್ದೆಯ ಸೆಕ್ಷನ್ 6A ರ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಸಲ್ಲಿಸಲಾದ ಅರ್ಜಿಯ ವಿಚಾರಣೆ ಪ್ರಾರಂಭಿಸುವ ಮೊದಲು ಹೇಳಿದರು.

    20,000 ತೀರ್ಪುಗಳ ಭಾಷಾಂತರ:

    ಈಗ ತೀರ್ಪು ಹಿಂದಿ, ತೆಲುಗು, ತಮಿಳು, ಒಡಿಯಾ, ಮಲಯಾಳಂ, ಗುಜರಾತಿ, ಕನ್ನಡ, ಬೆಂಗಾಲಿ, ಅಸ್ಸಾಮಿ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಿದೆ. 20,000 ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಭಾರತೀಯ ಭಾಷೆಗಳಲ್ಲಿ ಅನುವಾದಿಸಲಾಗಿದೆ ಮತ್ತು ಇ-ಎಸ್‌ಸಿಆರ್ (ಸುಪ್ರೀಂ ಕೋರ್ಟ್ ವರದಿಗಳ ಎಲೆಕ್ಟ್ರಾನಿಕ್ ಆವೃತ್ತಿ) ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಸಿಜೆಐ ಹೇಳಿದರು

    ವಕೀಲರು ಮತ್ತು ಜಿಲ್ಲಾ ನ್ಯಾಯಾಲಯಗಳು, ಮುಖ್ಯವಾಗಿ ಹಿಂದಿಯಲ್ಲಿ ಕೆಲಸ ಮಾಡುತ್ತಿದ್ದು, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಹಿಂದಿಯಲ್ಲಿ ಉಲ್ಲೇಖಿಸಬಹುದು. ಈಗ ಎಲ್ಲಾ ನಿಗದಿತ ಭಾರತೀಯ ಭಾಷೆಗಳಲ್ಲಿ ಅನುವಾದವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಿಜೆಐ ಹೇಳಿದರು.

    ಮದುವೆಯಲ್ಲಿ ಹಲ್ಲೆ ನಡೆಸಿ ವೇಟರ್​ ಕೊಲೆ: ಹೀಗೂ ಇರಬಹುದೇ ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts