ಆಗ ಇದ್ದ 22 ಇಂಚಿನ ಸೊಂಟ ಈಗಿಲ್ಲ…ಹಳೆಯ ಫೋಟೋ ಸಮೇತ ಇಂಟರೆಸ್ಟಿಂಗ್ ಪೋಸ್ಟ್ ಹಾಕಿದ ನಟಿ!

sairabanu
Published on

ಮುಂಬೈ: ಸಿನಿಮಾ ನಟ, ನಟಿಯರು ತಮ್ಮ ಬ್ಯೂಟಿ, ಫಿಟ್ನೆಸ್​​ಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಎಷ್ಟೇ ವರ್ಷ ಕಳೆದರು ಅವರ ಸೌಂದರ್ಯ ಮಾತ್ರ ಕುಗ್ಗುವುದಿಲ್ಲವೆಂದು ಅಭಿಮಾನಿಗಳು ಹೇಳುತ್ತಾರೆ. ಆದರೆ ಇಲ್ಲೊಬ್ಬರು ನಟಿ ಅಂದು- ಇಂದಿಗೂ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಸೈರಾ ಭಾನು 1960 ಮತ್ತು 70ರ ದಶಕದಲ್ಲಿ ಬಾಲಿವುಡ್ ಸ್ಟಾರ್ ಹೀರೋಯಿನ್ ಆಗಿದ್ದರು. ಆ ಸಮಯದಲ್ಲಿ ಆಕೆಯ ಫ್ಯಾನ್ ಫಾಲೋಯಿಂಗ್ ಸಾಮಾನ್ಯವಾಗಿರಲಿಲ್ಲ. ಅಂದಿನ ಸ್ಟಾರ್ ಹೀರೋ, ದಿವಂಗತ ನಟ ದಿಲೀಪ್ ಕುಮಾರ್ ಅವರನ್ನು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಮದುವೆಯ ನಂತರವೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ವೃತ್ತಿಜೀವನವನ್ನು ಮುಗಿಸಿದ ನಂತರ, ಅವರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಸದ್ಯ ಸಿನಿಮಾದಿಂದ ದೂರ ಉಳಿದಿದ್ದಾರೆ.

78 ವರ್ಷದ ಸೈರಾ ಭಾನು ಇತ್ತೀಚೆಗೆ ಇನ್​ಸ್ಟಾಗ್ರಾನ್​ ಖಾತೆಯನ್ನು ತೆರೆದಿದ್ದಾರೆ. ಅವರ ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ಅವರನ್ನು ಅನುಸರಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾಗೆ ಪ್ರವೇಶಿಸಿದಾಗಿನಿಂದ, ಅವರು ಹಳೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾ ಆಸಕ್ತಿದಾಯಕ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಸೈರಾ ಭಾನು ತನ್ನ ಚಿಕ್ಕ ವಯಸ್ಸಿನ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸೈರಾ ಭಾನು ಪಂಜಾಬಿ ಡ್ರೆಸ್ ಧರಿಸಿದ್ದು, ಈ ಫೋಟೋದಲ್ಲಿ ತುಂಬಾ ಸುಂದರವಾಗಿ ಮತ್ತು ಮುದ್ದಾಗಿ ಕಾಣುತ್ತಿದ್ದಾರೆ. ಈ ಫೋಟೋವನ್ನು ಶೇರ್ ಮಾಡುತ್ತಾ.. 22 ಇಂಚಿನ ಸೊಂಟವನ್ನು ಹೊಂದುವ ದಿನಗಳು ಹೋಗಿವೆ. ಆ ದಿನಗಳಲ್ಲಿ ಕಳೆದ ಸಮಯ ಮತ್ತು ನೆನಪುಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಸೈರಾ ಭಾನು ಅಂದು ಎಷ್ಟು ಸುಂದರಿಯಾಗಿದ್ದಳೋ, ಸ್ಟಾರ್ ಹೀರೋಯಿನ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net