ತೆರೆಯ ಮೇಲೆ ಬ್ಯಾಡ್ಮಿಂಟನ್ ಲೋಕ ತೋರಿಸುವ 'ಸೈನಾ'

saina
Published on

ಮುಂಬೈ : ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೇಹ್ವಾಲ್ ಅವರ ಜೀವನಗಾಥೆಯಾದ ಹಿಂದಿ ಚಲನಚಿತ್ರ "ಸೈನಾ" ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಬ್ಯಾಡ್ಮಿಂಟನ್​ನ ಮಿನಿಜಗತ್ತನ್ನೇ ಸೃಷ್ಟಿಸುವ ಈ ಚಿತ್ರದಲ್ಲಿ ನಟಿ ಪರಿಣೀತಿ ಚೋಪ್ರಾ ಅವರನ್ನು ಮುಖ್ಯ ಪಾತ್ರದಲ್ಲಿ ನೋಡಬಹುದು.

'ತಾರೆ ಜಮೀನ್ ಪರ್​', 'ಹವಾ ಹವಾಯಿ' ಚಿತ್ರಗಳ ಖ್ಯಾತಿಯ ಅಮೋಲ್ ಗುಪ್ತೆ ಈ ಚಿತ್ರಕ್ಕೆ ಚಿತ್ರಕಥೆ ಒದಗಿಸಿ, ನಿರ್ದೇಶನ ನೀಡಿದ್ದಾರೆ. ಟಿ-ಸಿರೀಸ್ ಮತ್ತು ಫ್ರಂಟ್ ಫೂಟ್ ಪಿಕ್ಚರ್ಸ್​ ನಿರ್ಮಿಸಿರುವ ಈ ಚಿತ್ರದಲ್ಲಿ ಮಾನವ್​ ಕೌಲ್ ಸೈನಾರ ಕೋಚ್ ಪಾತ್ರ ವಹಿಸಿದ್ದಾರೆ. ಈಶಾನ್ ನಖ್ವಿ ಮತ್ತು ಮೇಘನಾ ಮಲಿಕ್ ಕೂಡ ನಟಿಸಿದ್ದಾರೆ.

ಚಿತ್ರದಲ್ಲಿ ಜಿಲ್ಲಾ ಮಟ್ಟದ ಬಾಡ್ಮಿಂಟನ್ ಆಟಗಾರ್ತಿಯಾಗಿದ್ದ ಸೈನಾರ ತಾಯಿ ಉಷಾರಾಣಿ ಅವರ ಪಾತ್ರಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಜೊತೆಗೆ ಕ್ರೀಡೆ ಕುರಿತಾದ ಈ ಸಿನಿಮಾದಲ್ಲಿ ಆಟಗಾರರು ಮತ್ತು ಅವರ ಕುಟುಂಬಗಳಿಗೆ ಅಗತ್ಯವಾದ ಬದ್ಧತೆ ಮತ್ತು ತ್ಯಾಗಗಳ ಬಗ್ಗೆ ತೋರಿಸಿದ್ದಾರೆ. ತರಬೇತಿಯಿಂದ ಹಿಡಿದು ಮುಖ್ಯವಾದ ಪಂದ್ಯಾವಳಿಗಳನ್ನು ತೆರೆಯ ಮೇಲೆ ಕ್ರಿಯಾಶೀಲವಾಗಿ ಚಿತ್ರಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net