ಸೈಫ್​ಗೆ ಚಾಕು ಇರಿತ ಪ್ರಕರಣ : ದಾಳಿ ಬಗ್ಗೆ ಮೌನ ಮುರಿದ ಸಹೋದರಿ ಸೋಹ ಅಲಿಖಾನ್​​: ಹೇಳಿದ್ದೇನು? | Soha Ali Khan

dk - 2025-04-05T200319.241
Published on

Soha Ali Khan : ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇದೇ ಮೊದಲ ಬಾರಿಗೆ ಸೈಫ್​ ಸಹೋದರಿ ಸೋಹ ಅಲಿಖಾನ್​​ ದಾಳಿ ಬಗ್ಗೆ ಮೌನ ಮುರಿದಿದ್ದಾರೆ.

ಇದೇ ವರ್ಷದ ಜ.16ರಂದು ಸೈಫ್ ಅಲಿ ಖಾನ್​ಗೆ 6 ಬಾರಿ ಚಾಕು ಇರಿತವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋಹ ಅಲಿಖಾನ್​, "ಈ ದಾಳಿ ನಮ್ಮೆಲ್ಲರನ್ನೂ ತೊಂದರೆಗೊಳಿಸಿತು. ಅವರು ಚೆನ್ನಾಗಿದ್ದಾರೆ, ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಕೆಲಸಕ್ಕೆ ಮರಳಿದ್ದಾರೆ ಎಂಬುದು ನಮ್ಮ ಮುಖ್ಯ ಕಾಳಜಿಯಾಗಿತ್ತು. ಅದೇ ನಮ್ಮ ಗಮನವಾಗಿತ್ತು. ದೇವರಿಗೆ ಧನ್ಯವಾದಗಳು, ಅವರು ಚೆನ್ನಾಗಿದ್ದಾರೆ." ಭಯಾನಕ ಘಟನೆಯ ನಂತರ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸೋಹ ಅವರ ಮಾತುಗಳು ಸಮಾಧಾನವನ್ನು ನೀಡಿವೆ.

ಪ್ರಕರಣದ ಹಿನ್ನೆಲೆ..

ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಜ.16ರಂದು ಮಧ್ಯರಾತ್ರಿಯಲ್ಲಿ ಸೈಫ್ ಅಲಿ ಮಗನ ಜೆನ್‌ನ ಕೋಣೆಗೆ ನುಗ್ಗಿದ ಕಳ್ಳ, ಮಗುವನ್ನು ಹಿಡಿದುಕೊಂಡು 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಗನನ್ನು ಉಳಿಸಲು ಪ್ರಯತ್ನಿಸಿದಾಗ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ 6 ಬಾರಿ ಇರಿದು ಪರಾರಿಯಾಗಿದ್ದ.

ಆರೋಪಿಯನ್ನು ಶರಿಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಈತ ಬಾಂಗ್ಲಾದೇಶದ ನಿವಾಸಿ. ಅಷ್ಟೇ ಅಲ್ಲ, ಆತ ಬಾಂಗ್ಲಾದೇಶದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ಕೂಡ ಹೌದು. ಮಧ್ಯರಾತ್ರಿ ಸೈಫ್ ಮನೆಗೆ ನುಗ್ಗಿದ್ದ. ಸೈಫ್- ಕರೀನಾ ಅವರ ಕಿರಿಯ ಮಗನನ್ನು ಕಿಡ್ನಾಪ್ ಮಾಡಲು ಮನೆಗೆ ನುಗ್ಗಿದ್ದಾಗಿ ಸ್ವತಃ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಕಿಡ್ನಾಪ್ ಮಾಡಿ ಒಂದು ಕೋಟಿ ರೂಪಾಯಿ ಬೇಡಿಕೆ ಇಡುವುದು ಖದೀಮ ಉದ್ದೇಶವಾಗಿತ್ತು. ಈ ವೇಳೆ ಸೈಫ್ ಮಗನನ್ನು ಕಾಪಾಡಿದರು. ಆದರೆ, ಖದೀಮ ಮಾತ್ರ ಸೈಫ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net