

ಮುಂಬೈ: ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ಆರೋಪಿಯ ಬೆರಳಚ್ಚಿಗೂ ಅಪರಾಧ ಸ್ಥಳದಲ್ಲಿ ದೊರಕಿರುವ ಬೆರಳಚ್ಚಿಗೂ ಹೋಲಿಕೆಯಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಜನವರಿ 16ರಂದು ಕಳ್ಳತನಕ್ಕೆಂದು ಸೈಫ್ ಮನೆಗೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ನಟನನ್ನು ಚಾಕುವಿನಿಂದ ತಿವಿದು ಗಾಯಗೊಳಿಸಿದ್ದ. ಈ ಪ್ರಕರಣದ ಸಂಬಂಧ ಪೊಲೀಸರು ಷರೀುಲ್ ಇಸ್ಲಾಂ ಷೆಹಜಾದ್ ಎಂಬ ಬಾಂಗ್ಲಾದೇಶಿಯನನ್ನು ಬಂಧಿಸಿದ್ದರು. ಬೆರಳಚ್ಚು ಸಂಬಂಧ ರಾಜ್ಯದ ಕ್ರಿಮಿನಲ್ ತನಿಖಾ ವಿಭಾಗ (ಸಿಐಡಿ) ಸಲ್ಲಿಸಿರುವ ವರದಿಯು ಮುಂಬೈ ಪೊಲೀಸರಿಗೆ ಹಿನ್ನಡೆಯಾಗಿದೆ. ತಪ್ಪಾದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಅಭಿಪ್ರಾಯದ ನಡುವೆಯೇ ಹೊರಬಿದ್ದಿರುವ ಸಿಐಡಿ ವರದಿ ಕೂಡ ಅದನ್ನು ಸಮರ್ಥಿಸುವಂತಿದೆ.
ಷರೀುಲ್ನನ್ನು ಕೃತ್ಯ ನಡೆದ ಮೂರು ದಿನಗಳ ನಂತರ, ಮುಂಬೈ ಪೊಲೀಸರು ಮತ್ತು ಕೆಂ ಬ್ರಾಂಚ್ ಪೊಲೀಸರು ಥಾಣೆಯಲ್ಲಿ ಬಂಧಿಸಿದ್ದರು. ಅಪರಾಧ ಸ್ಥಳದಿಂದ ಒಟ್ಟು 19 ಫಿಂಗರ್ಪ್ರಿಂಟ್ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ಯಾವುದೂ ಷರೀುಲ್ ಬೆರಳಚ್ಚಿಗೆ ತಾಳೆಯಾಗುವುದಿಲ್ಲ ಎಂದು ವರದಿ ಹೇಳಿದೆ.
ವಿಮೆ ತ್ವರಿತ ಇತ್ಯರ್ಥ, ವಿವಾದ
ಇರಿತಕ್ಕೊಳಗಾದ ಸೈಫ್, ಇಲ್ಲಿನ ಪ್ರಖ್ಯಾತ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡು ಮನೆಗೆ ವಾಪಸಾಗಿದ್ದಾರೆ. ಚಿಕಿತ್ಸೆ ವೆಚ್ಚದ ಬಗ್ಗೆ ಸೈಫ್ ಕುಟುಂಬ ಸಲ್ಲಿಸಿರುವ ಮೆಡಿಕ್ಲೇಮ್ಗೆ ಖಾಸಗಿ ವಿಮಾ ಸಂಸ್ಥೆ ನಿವಾ ಬುಪಾ ತಕ್ಷಣವೇ ಅನುಮೋದನೆ ನೀಡಿರುವುದಕ್ಕೆ ಮುಂಬೈಯ ವೈದ್ಯಕಿಯ ವೃತ್ತಿಪರರ ಸಂಸ್ಥೆ ಅಸೋಸಿಯೇಷನ್ ಆ್ ಮೆಡಿಕಲ್ ಕನ್ಸಲ್ಟಂಟ್ಸ್ ಆಕ್ಷೇಪ ವ್ಯಕ್ತಪಡಿಸಿದೆ. ಸೆಲೆಬ್ರಿಟಿಗಳ "ಆದ್ಯತಾ ಚಿಕಿತ್ಸೆ' ಕುರಿತು ಅದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದೆ.