

Saif Ali Khan attack: ಬಾಲಿವುಡ್ ನಟ ಸೈಫ್ ಅಲಿಖಾನ್ ದುಷ್ಕರ್ಮಿಯೊರ್ವ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಸೈಫ್ ಪ್ರಾಣಪಾಯದಿಂದ ಪಾರಗಿದ್ದು. ಲೀಲಾವತಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಈ ಕೇಸ್ನ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದ ಒಂದೊಂದು ಮಾಹಿತಿಗಳು ಹೊರ ಬರುತ್ತಿದ್ದು, ಆರೋಪಿ ಮನೆಯೊಳಗೆ ನುಗ್ಗಿದ ಬಳಿಕ 30 ನಿಮಿಷಗಳ ಕಾಲ ಏನೆಲ್ಲಾ ಘಟನೆ ನಡಯಿತು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಈ ಎಲ್ಲ ಪ್ರಕರಣ ನಡೆಯುವ ವೇಳೆ ಇಬ್ಬರಿ ದಾದಿಗಳು ಸೈಫ್ ಪಕ್ಕದಲ್ಲಿಯೆ ಇದ್ದರು. ಹೀಗಾಗಿ, ಈ ದಾದಿಯರ(ಎಲಿಯಮ್ಮ, ಫಿಲೀಫ್) ಹೇಳಿಕೆಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ, ಈ ಹೇಳಿಕೆಗಳು ದೂರಿನಲ್ಲಿ ಉಲ್ಲೇಖವಾಗಿದೆ.
ಈ ದೂರಿನ ಪ್ರಕಾರ(ದಾದಿಯರ ಹೇಳಿಕೆ), ಬಾಂದ್ರದಲ್ಲಿರುವ ಅಪಾರ್ಟಮೆಂಟ್ನ 11 ಮತ್ತು 12ನೇ ಮಹಡಿಯಲ್ಲಿ ಸೈಫ್ ಕುಟುಂಬ ವಾಸಿಸುತ್ತಿದೆ. ಈ ಮಹಡಿಯಲ್ಲಿ ಮೂರು ಕೊಠಡಿಗಳು ಇವೆ. ಒಂದು ಕೋಣೆಯಲ್ಲಿ ಸೈಫ್ ಮತ್ತು ಪತ್ನಿ ಕರೀನಾ ಕಪೂರ್ ಇದ್ದಾರೆ. ಇನ್ನೊಂದು ಕೊಠಡಿಯಲ್ಲಿ ಸೈಫ್ ಪುತ್ರ ತೈಮೂರ್ ಮತ್ತು ದಾದಿ ಇದ್ದಾರೆ, ಇನ್ನು ಕೊನೆಯ ರೂಮ್ನಲ್ಲಿ ಮತ್ತೊಬ್ಬ ಪುತ್ರರಾದ ಜಂಹಗೀರ್ ಮತ್ತು ದಾದಿ ಇದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕ ಆಯ್ಕೆ
ಸುಮಾರು 11 ಗಂಟೆಗೆ ಮಕ್ಕಳನ್ನು ಮಲಗಿಸಿದ ದಾದಿ ಪಿಲೀಫ್, 11.30ರ ಬಳಿಕ ತಾನು ಮಲಗಿದ್ದಾಳೆ. ಸುಮಾರು 2 ಗಂಟೆಗೆ ಸೈಫ್ ಮನೆಗೆ ನುಗ್ಗಿದ ಕಳ್ಳ ಯಾವುದೇ ಲೈಟ್ ಆನ್ ಮಾಡಿಕೊಳ್ಳದೇ ತಾನು ತಂದಿದ್ದ ಚಿಕ್ಕ ಬ್ಯಾಟರಿ(ಲೈಟ್)ಯಿಂದ ಮನೆಯ ಹಾಲ್ನಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಬಳಿಕ ಸೈಫ್ ಪುತ್ರ ಜಹಂಗೀರ್ ಮತ್ತು ಪಿಲೀಫ್ ಇದ್ದ ರೂಮ್ಗೆ ಕಳ್ಳ ನುಗ್ಗಿದ್ದಾನೆ. ಏನೋ ಶಬ್ಧದಿಂದ ಎಚ್ಚರಗೊಂಡ ದಾದಿ ಪಿಲೀಫ್, ಬಾತ್ರೂಮ್ನಲ್ಲಿ ಲೈಟ್ ಆನ್ ಆಗಿರುವುದ ಕಂಡಿದ್ದಾರೆ. ತಾಯಿ ಕರೀನಾ ಎಂದು ಸುಮ್ಮನಾಗಿದ್ದಾಳೆ. ಆದರೆ, ಅನುಮಾನಗೊಂಡ ದಾದಿ ಬೆಡ್ನಿಂದ ಮೇಲೆದ್ದು, ಲೈಟ್ ಆನ್ ಮಾಡಿದ್ದಾಳೆ. ಕಳ್ಳ, ಮಗು(ಜಹಂಗೀರ್) ಬಳಿ ಇರುವುದನ್ನು ನೋಡಿದ್ದಾಳೆ. ಇದರಿಂದ ಭಯಗೊಂಡ ಪಿಲೀಫ್ ಮತ್ತು ಮಕ್ಕಳು ಕಿರಿಚಿದ್ದಾರೆ.
ಬಳಿಕ ರೂಮ್ಗೆ ದೌಡಯಿಸಿ ಸೈಫ್ ಮತ್ತು ಕರಿನಾ ಕಳ್ಳನನ್ನು ನೋಡಿ ಹೆದರಿದ್ದಾರೆ. ಕರಿನಾ ಮೊದಲಿಗೆ ಕಳ್ಳನನ್ನು ಹೊಡೆಯಲು ಹೋಗಿದ್ದಾಳೆ. ಕಳ್ಳ 1 ಕೋಟಿ ರೂ.ಬೇಡಿಕೆ ಇಟ್ಟಿದ್ದ. ಇದನ್ನು ನಿರಾಕರಿಸಿದ್ದರಿಂದ ಸೈಫ್ ಮೇಲೆ ದಾಳಿ ಮಾಡಿದ್ದಾನೆ. ಏಕಾಏಕಿ ಆರು ಬಾರಿ ಚುಚ್ಚಿ ಅಲ್ಲಿದ್ದವರಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಕೂಡಲೇ ಮಗ ತೈಮೂರ್ ಅಪ್ಪ ಸೈಫ್ನನ್ನು ಪಕ್ಕದ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ದೂರಿನಲ್ಲಿನ ಉಲ್ಲೇಖಿಸಲಾಗಿದೆ.(ಏಜೆನ್ಸೀಸ್)