ಸ್ಟಾರ್ ಹೀರೋಯಿನ್ ಜೊತೆ ಸಾಯಿಧರಮ್ ತೇಜ್ ಮದುವೆ..?

sai
Published on

ಹೈದರಾಬಾದ್​: ಮೆಗಾಸ್ಟಾರ್​ ಚಿರಂಜೀವಿ ಕುಟುಂಬದಲ್ಲಿ ಮತ್ತೊಮ್ಮೆ ಮದುವೆ ಸಂಭ್ರಮ ಮನೆಮಾಡಲಿದೆ. ಇತ್ತೀಚೆಗೆ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಪ್ರೀತಿಸಿ ಮದುವೆಯಾಗಿದ್ದು, ಈಗ ಸಾಯಿಧರಮ್ ತೇಜ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ತೇಜ್ ಒಬ್ಬ ಸ್ಟಾರ್ ಹೀರೋಯಿನ್ ಜೊತೆ ಲವ್ ಮಾಡುತ್ತಿದ್ದಾನೆ ಎಂಬ ಮಾತುಗಳು ಸಿನಿ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿವೆ. ಆ ನಾಯಕಿ ಮತ್ತಾರು ಅಲ್ಲ, ಮೆಹ್ರೀನ್ ಜೊತೆ ತೇಜ್ ಲವ್ವಲ್ಲಿ ಬಿದ್ದಿದ್ದಾನಂತೆ.

ಇವರಿಬ್ಬರೂ ಜವಾನ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎನ್ನಲಾಗಿದೆ. ಈ ಹಿಂದೆ ತೇಜ್ ಬೇರೆ ನಾಯಕಿಯರ ಜೊತೆ ಮದುವೆಯ ಸುದ್ದಿಗಳು ಬಂದಿದ್ದವು.

ಇದಕ್ಕೆ ಮೆಹ್ರೀನ್ ಪ್ರತಿಕ್ರಿಯಿಸಿದ್ದು, ಸಾಯಿ ಧರಮ್ ತೇಜ್ ಜೊತೆ ಮದುವೆ ಬಗ್ಗೆ ಬರುತ್ತಿರುವ ಸುದ್ದಿಗಳೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲವೂ ವದಂತಿ ಎಂದು ಆಕೆ ತಳ್ಳಿ ಹಾಕಿದ್ದಾಳೆ. ಈ ಮೂಲಕ ಸಾಯಿ ಧರಂ ತೇಜ್ ಮದುವೆ ಸುದ್ದಿ ಮತ್ತೊಮ್ಮೆ ಸ್ಪಷ್ಟವಾಗಿದೆ.

ಸಾಯಿ ಧರಮ್ ತೇಜ್ ಅಂತಿಮವಾಗಿ ಬ್ರೋ ಚಿತ್ರದಲ್ಲಿ ತನ್ನ ಚಿಕ್ಕಪ್ಪ ಪವನ್ ಕಲ್ಯಾಣ್ ಜೊತೆ ನಟಿಸಿದರು. ಈ ಸಿನಿಮಾದ ಮೂಲಕ ಅವರಿಗೆ ಸೂಪರ್ ಹಿಟ್ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net