ಶ್ರೀ ಸಾಯಿಬಾಬಾ ಮಂದಿರದಲ್ಲಿ ಸಂಭ್ರಮದ ಗುರು ಪೂಣಿರ್ಮೆ ಉತ್ಸವ

21-RNR-07A
Published on

ಹಾವೇರಿ: ಇಲ್ಲಿನ ಅಶ್ವಿನಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಗುರು ಪೂಣಿರ್ಮೆ ಮಹೋತ್ಸವ ವಿಜೃಂಭಣಿಯಿಂದ ಜರುಗಿತು.
ಬೆಳಗ್ಗೆ ಸಾಯಿಬಾಬಾ ಮೂತಿರ್ಗೆ ವಿಶೇಷ ಕಾಕಡಾರತಿ, ಕ್ಷೀರಾಭಿಷೇಕ ನಡೆಯಿತು. ನಂತರ ಶ್ರೀ ಗಣಪತಿ ಪೂಜೆ, ಶ್ರೀ ಸತ್ಯ ನಾರಾಯಣ ಪೂಜೆ, ನೇವೇದ್ಯಾರತಿ, ಮಧ್ಯಾಹ್ನ ಪ್ರಸಾದ ಸೇವೆ ಜರುಗಿತು. ಸಂಜೆ ಧೂಪಾರತಿ, ಪಾಲಕಿ ಉತ್ಸವ ನೆರವೇರಿತು. ಬೆಳಗ್ಗೆಯಿಂದ ರಾತ್ರಿವರೆಗೆ ಸಹಸ್ರಾರು ಭಕ್ತರು ದೇಗುಲಕ್ಕೆ ಆಗಮಿಸಿ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ಹರಸೂರ ಬಣ್ಣದ ಮಠದ ಸ್ವಾಮೀಜಿಯವರ ಪಾದಪೂಜೆಯನ್ನು ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ನೆರವೇರಿಸಿದರು. ಶಿರಡಿ ಸಾಯಿಬಾಬಾ ಭಜನಾ ಮಂಡಳಿ ಹಾಗೂ ಹುಕ್ಕೇರಿ ಮಠದ ಅಕ್ಕನ ಬಳಗದ ಸದಸ್ಯೆಯರು ಭಜನಾ ಪದಗಳ ಮೂಲಕ ಸಾಯಿಬಾಬಾರಿಗೆ ಪ್ರಾರ್ಥನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net