'ಶೀಲಾ ಕಿ ಜವಾನಿ' ಹಾಡಿಗೆ ಸಾಯಿ ಪಲ್ಲವಿ ಮಸ್ತ್​ ಡ್ಯಾನ್ಸ್​; ನಟಿಯ ವಿಡಿಯೋ ನೋಡಿದ್ರೆ ಬೆರಗಾಗ್ತೀರಾ!

WhatsApp-Image-2024-04-17-at-8.40.33-PM
Published on

ಬೆಂಗಳೂರು: ತೆಲುಗು, ತಮಿಳು ಚಿತ್ರರಂಗದಲ್ಲಿ ನಟಿಸಿ, ಸೈಎನಿಸಿಕೊಂಡಿರುವ ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ತಮ್ಮ ಕಾಲೇಜು ದಿನಗಳಲ್ಲಿ ಬಾಲಿವುಡ್​ ಚಿತ್ರದ 'ಶೀಲಾ...ಶೀಲಾ ಕೀ ಜವಾನಿ' ಹಾಡಿಗೆ ಸ್ಟೇಜ್ ಮೇಲೆ ಕುಣಿದು ಕುಪ್ಪಳಿಸಿದ್ದ ಹಳೇ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಚ್ಚಿನ ನಟಿಯ ಡ್ಯಾನ್ಸ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪ್ರಸ್ತುತ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವ ಅತ್ಯಂತ ಪ್ರತಿಭಾವಂತ ಮತ್ತು ಭರವಸೆಯ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ನಟಿಯ ಸಹಜ, ಸುಂದರ ನಟನೆ ಮೆಚ್ಚಿ ಮಾತನಾಡುವ ಸಿನಿಪ್ರಿಯರು, ಅವರ ಮುಂಬರುವ ಪ್ರಾಜೆಕ್ಟ್​ಗಳ ಮಾಹಿತಿ ಪಡೆಯಲು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಇದೆಲ್ಲದರ ಮಧ್ಯೆ ನಟಿ ತಮ್ಮ ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಬಾಲಿವುಡ್​ ತಾರೆ ಕತ್ರಿನಾ ಕೈಫ್​ ಅವರ 'ಶೀಲಾ ಕಿ ಜವಾನಿ' ಚಿತ್ರಕ್ಕೆ ಮಸ್ತ್​ ಸ್ಟೆಪ್ಸ್​ ಹಾಕಿರುವ ಹಳೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ನಟಿಯ ಥ್ರೋಬ್ಯಾಕ್ ವೀಡಿಯೊ ಇದೀಗ ಆನ್‌ಲೈನ್‌ನಲ್ಲಿ ಸುತ್ತುವರೆದಿದ್ದು, ಸಾಯಿ ಪಲ್ಲವಿ ಅವರ ಸಖತ್​ ಸ್ಟೆಪ್ಸ್​ ನೋಡುಗರ ಹುಬ್ಬೇರುವಂತೆ ಮಾಡಿದೆ. ಇದು​ ಸಾಯಿ ಪಲ್ಲವಿ ಅವರ ಕಾಲೇಜು ಫೆಸ್ಟ್‌ನಲ್ಲಿ ನಡೆದ ಡ್ಯಾನ್ಸ್​ ಎಂದು ಹೇಳಲಾಗಿದ್ದು, ನಟಿ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಸಾಯಿ ಪಲ್ಲವಿ ಅವರ ಡ್ಯಾನ್ಸ್​ ನೋಡುತ್ತಿದ್ದಂತೆ ಅವರ ಸಹಪಾಠಿಗಳು ಸಹ ಸ್ಟೇಜ್​ ಮೇಲೆ ಬಂದು ಕುಣಿದಿರುವುದು ವಿಡಿಯೋದಲ್ಲಿ ಕಾಣಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net