'RC16': ರಾಮ್​ ಚರಣ್​ ಚಿತ್ರಕ್ಕೆ ನಾಯಕಿಯಾಗಿ ಸ್ಟಾರ್​ ನಟಿ ಎಂಟ್ರಿ!

Untitled design (73)
Published on

ಆಂಧ್ರಪ್ರದೇಶ: 'ಮಗಧೀರ', 'ಆರ್​ಆರ್​ಆರ್' ಖ್ಯಾತಿಯ ನಟ ರಾಮ್​ಚರಣ್​ ಅಭಿನಯಿಸಲಿರುವ ಬಹುನಿರೀಕ್ಷಿತ ಮುಂದಿನ ಸಿನಿಮಾ 'ಆರ್​ಸಿ16' ಚಿತ್ರದ ಬಗ್ಗೆ ಇದೀಗ ಹೊಸದೊಂದು ಮಾಹಿತಿ ಲಭಿಸಿದ್ದು, ರಾಮ್​ಗೆ ಜೋಡಿಯಾಗಿ ಟಾಲಿವುಡ್​ನ ಖ್ಯಾತ ನಟಿಯೊಬ್ಬರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ತಾತ್ಕಾಲಿಕವಾಗಿ 'RC16' ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರಕ್ಕೆ ನಾಯಕಿಯಾಗಿ ಟಾಲಿವುಡ್​ನ ನ್ಯಾಚುರಲ್​ ಬ್ಯೂಟಿ, ನಟಿ ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. ಸದ್ಯ ಈ ಸಂಗತಿ ಅವರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ತೆರೆ ಮೇಲೆ ರಾಮ್​ ಚರಣ್​ ಮತ್ತು ಪಲ್ಲವಿ ಅವರ ಜೋಡಿ ಹೇಗೆ ಮೋಡಿ ಮಾಡಲಿದೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರೊಟ್ಟಿಗೆ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಪ್ರಸ್ತುತ ರಾಮ್ ಚರಣ್ 'ಗೇಮ್ ಚೇಂಜರ್‌' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಈ ಚಿತ್ರವನ್ನು ತಮಿಳು ನಿರ್ದೇಶಕ ಎಸ್. ಶಂಕರ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಪೊಲಿಟಿಕಲ್​ ಆ್ಯಕ್ಷನ್​ ಜಾನರ್​ ಒಳಗೊಂಡ ಸಿನಿಮಾವಾಗಿದ್ದು, ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ರಾಮ್​ಚರಣ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ 2024ಕ್ಕೆ ತೆರೆ ಕಾಣಲಿದೆ ಎಂದು ಚಿತ್ರತಂಡ ತಾತ್ಕಾಲಿಕವಾಗಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net