

ಹೈದರಾಬಾದ್: ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಸಾಯಿ ಪಲ್ಲವಿ ಸಿಕ್ಕ ಅವಕಾಶಕ್ಕಿಂತ ಮೆಚ್ಚಿದ ಪಾತ್ರಗಳಿಗಲ್ಲಿ ನಟಿಸುತ್ತ ಜನಮನ್ನಣೆ ಗಳಿಸಿದವರು. ಇತ್ತೀಚೆಗೆ ಕೆಲವು ಅವಕಾಶಗಳನ್ನು ತಿರಸ್ಕರಿಸಿ ಚಿತ್ರಗಳಲ್ಲಿ ನಟಿಸುವುದರಿಂದ ದೂರ ಉಳಿದಿದ್ದಾರೆ.
ಆದರೆ ಈ ಪ್ರತಿಭಾವಂತ, ಸಹಜ ನಟಿಗೆ ಅದ್ಭುತ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಅದೂ ಸಹ ಪಾನ್ ಇಂಡಿಯಾ ಮಟ್ಟದಲ್ಲಿ ಬೃಹತ್ ಬಜೆಟ್ನಲ್ಲಿ ತಯಾರಾಗಲಿರುವ "ರಾಮಾಯಣ" ದಲ್ಲಿ ನಟಿಸುವ ಅವಕಾಶ ಒದಗಿ ಬಂದಿರುವುದು ಆಕೆಯ ಅದೃಷ್ಟವೆಂದೇ ಹೇಳಬಹುದು.
ನಿತೀಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತಾ ದೇವಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಬಗ್ಗೆ ಸಾಕಾಷ್ಟು ಪ್ರಚಾರ ನಡೆದಿದ್ದು, ನಿತೀಷ್ ತಿಯಾರಿ ನನ್ನನ್ನು ಸೀತಾಮಾತೆಯ ಪಾತ್ರಕ್ಕೆ ಹೇಗೆ ಆರಿಸಿದರೋ ತಿಳಿಯದು. ಆದರೆ ಇದು ಬಹಳ ಸಂತೋಷಕರ ಸಂಗತಿ ಎಂದಿದ್ದಾರೆ.
ಇದು ನಿಜಕ್ಕೂ ನನ್ನ ಪಾಲಿನ ಅದೃಷ್ಟವೇ ಸರಿ. ಈ ಚಿತ್ರದ ಚಿತ್ರೀಕರಣಕ್ಕೆ ಯಾವಾಗ ಕರೆ ಬರುತ್ತದೆಯೋ ಎಂದು ಅತ್ಯಾಸಕ್ತಿಯಿಂದ ಎದುರು ನೋಡುತ್ತಿದ್ದೇನೆ. ಇದು ಖಂಡಿತ ನನಗೆ ಸವಾಲಿನ ಪಾತ್ರ. ಅದೆಷ್ಟೋ ಮಂದಿ ಪ್ರತಿಭಾವಂತ ನಟಿಯರು ನಿರ್ವಹಿಸಿದ ಪಾತ್ರವದು. ಅವರು ನಟಿಸಿರುವುದರಲ್ಲಿ ಶೇ.10ರಷ್ಟು ಅಭಿನಯ ಮಾಡಲು ನನ್ನಿಂದ ಸಾಧ್ಯವಾದರೆ ಅಷ್ಟೇ ಸಾಕು. ಈ ಚಿತ್ರಕತೆ ಕೇಳಲು ಶೀಘ್ರದಲ್ಲೇ ಮುಂಬೈಗೆ ಹೋಗುತ್ತಿದ್ದೇನೆ ಎಂದರು.
ಇನ್ನು ಭಾರತೀಯ ಚಿತ್ರರಂಗದಲ್ಲಿ ಹಲವು ರಾಮಾಯಣಗಳ ಕಥೆಗಳು ಚಿತ್ರಗಳಾಗಿವೆ. ಇ್ಲಿತನಕ ವಾಲ್ಮೀಕಿ ರಾಮಾಯಣವನ್ನು ಯಾರೂ ಸಹ ಸಂಪೂರ್ಣವಾಗಿ ತೆರೆಗೆ ತರಲಿಲ್ಲ. ಈ ಕೊರತೆಯನ್ನು ನಮ್ಮ ರಾಮಾಯಣ ತೀರಿಸುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಈ ರಾಮಾಯಣ ಚಿತ್ರವು ಮೂರು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.