ಪಠ್ಯಕ್ರಮದ ಅಭ್ಯಾಸಕ್ಕೆ ಕಲೆಗಳು ಪ್ರೇರಕವಾಗಿವೆ

ಬೆಂಗಳೂರಿನ ಶ್ರೀ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಹಮ್ಮಿಕೊಂಡಿದ್ದ ‘ ಚಾರ್ವಿ ಶ್ರೀ ರೆಡ್ಡಿ ರಂಗಾರೋಹಣ’ ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ  ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ವಿದ್ವಾನ್ ವಿನಯ್ ಶರ್ವ, ಎಸ್ ವ್ಯಾಸ ವಿವಿಯ ಪ್ರೊ. ಕರುಣಾ ವಿಜೇಂದ್ರ,  ಎಚ್.ಎನ್. ಇಂಜಿನಿಯರಿಂಗ್ ಕಾಲೇಜು ಚೇರ್ಮನ್ ವೆಂಕಟಶಿವಾರೆಡ್ಡಿ,ವಿದುಷಿ ಡಾ. ಸುಪರ್ಣಾ ವೆಂಕಟೇಶ್, ಯುವ ಕಲಾವಿದೆ ಚಾರ್ವಿಶ್ರೀ, ಆರ್.ಕೆ. ಶಿಲ್ಪಾ ಮತ್ತು ಚನ್ನ ಕೇಶವ ರೆಡ್ಡಿ ಹಾಜರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ವಿದ್ವಾನ್ ವಿನಯ್ ಶರ್ವ ಸಲಹೆ
ಬೆಂಗಳೂರು: ಶಾಲೆ ಮತ್ತು ಕಾಲೇಜು ಶಿಕ್ಷಣದ ನೆಪದಲ್ಲಿ ಸಂಗೀತ ಮತ್ತು ನೃತ್ಯ ಕಲಿಕೆಯಿಂದ ಯುವಜನರು ದೂರವಾಗಬಾರದು ಎಂದು  ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ವಿದ್ವಾನ್ ವಿನಯ್ ಶರ್ವ ಹೇಳಿದರು. ನಗರದ ಮಲ್ಲೇಶ್ವರಂ   ಶ್ರೀ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಹಮ್ಮಿಕೊಂಡಿದ್ದ ಚಾರ್ವಿಶ್ರೀ ರೆಡ್ಡಿ ರಂಗಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಪಠ್ಯಕ್ರಮದ ಅಭ್ಯಾಸಕ್ಕೆ ಕಲೆಗಳು ಪ್ರೇರಕ ವಾಗಿವೆ. ಇವೆರಡೂ ಜತೆಯಾಗಿಯೇ ಮುಂದುವರಿದರೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿದೆ ಎಂದು ಅವರು ಅಭಿಪ್ರಾಯಿಸಿದರು. ಚಾರ್ವಿಶ್ರೀ ಪ್ರದರ್ಶನ ರಂಜನೀಯವಾಗಿದೆ. ಈಕೆ ಒಬ್ಬ ಭರವಸೆ ಕಲಾವಿದೆಯಾಗಿ ಬೆಳೆಯಲಿ ಎಂದು ಅವರು ಹಾರೈಸಿದರು. 
ಉತ್ತಮ ಕಲಾವಿದರಾಗಿ:  ಎಸ್ ವ್ಯಾಸ ವಿವಿಯ ಪ್ರೊ. ಕರುಣಾ ವಿಜೇಂದ್ರ ಮಾತನಾಡಿ, ಕಲೆ ಎಂಬುದು ಮಹಾಸಾಗರ. ಕಲಿತದ್ದನ್ನು ಸಮರ್ಥವಾಗಿ ಹೊರ ಹೊಮ್ಮಿಸಿ ರಸಿಕರ ಮನಕ್ಕೆ ಮುದ ನೀಡುವವರು ಉತ್ತಮ ಕಲಾವಿದರಾಗಲು ಸಾಧ್ಯ ಎಂದು ಹೇಳಿದರು.  ವೇದಿಕೆಯಲ್ಲಿ ನೈಪುಣ್ಯ ಪ್ರದರ್ಶನ ಮಾಡುವ ಮುನ್ನ ಯುವ ಕಲಾವಿದರಿಗೆ ಧೈರ್ಯ ಬಹಳ ಮುಖ್ಯ. ನಿಜವಾದ ಕಲಿಕೆ ಹೊರಹೊಮ್ಮುವಿಕೆ ನಿಟ್ಟಿನಲ್ಲಿ ಭರವಸೆ ಇರಿಸಿಕೊಂಡಿದ್ದರೆ ಪ್ರದರ್ಶನ ಸಾರ್ಥಕವಾಗುತ್ತದೆ. ಇಂಥ ಕಲಾವಿದರ ಸಂಖ್ಯೆ ಹೆಚ್ಚಾಗಲಿ ಎಂದು ಅವರು ಆಶಿಸಿದರು. ಎಚ್.ಎನ್. ಇಂಜಿನಿಯರಿಂಗ್ ಕಾಲೇಜು ಚೇರ್ಮನ್ ವೆಂಕಟಶಿವಾರೆಡ್ಡಿ, ಗುರು ಸುಪರ್ಣಾ ವೆಂಕಟೇಶ್, ಸಂಸ್ಥೆಯ ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಇತರರು ಹಾಜರಿದ್ದರು. ಅತಿಥಿಗಳು ಮತ್ತು ಹಿರಿಯ ವಿದ್ವಾಂಸರನ್ನು  ಆರ್.ಕೆ. ಶಿಲ್ಪಾ ಮತ್ತು ಚನ್ನ ಕೇಶವ ರೆಡ್ಡಿ ದಂಪತಿ ಗೌರವಿಸಿದರು.  ನಂತರ ಚಾರ್ವಿ ತಮ್ಮ ಕಲಾ ಪ್ರದರ್ಶನದಲ್ಲಿ ಸಭಿಕರನ್ನು ರಂಜಿಸಿದರು. ನಟುವಾಂಗದಲ್ಲಿ ವಿದುಷಿ ಡಾ. ಸುಪರ್ಣಾ ವೆಂಕಟೇಶ್, ಗಾಯನದಲ್ಲಿ ವಿದ್ವಾನ್ ಬಾಲ ಸುಬ್ರಹ್ಮಣ್ಯ ಶರ್ಮಾ, ಕೊಳಲಿನಲ್ಲಿ ವಿದ್ವಾನ್ ರಘು ಸಿಂಹ, ವೀಣೆಯಲ್ಲಿ ವಿದ್ವಾನ್ ಪ್ರಶಾಂತ್ ಅವರ ಸಹಕಾರ ಪೂರಕವಾಗಿತ್ತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net