ಲಾಭದಲ್ಲಿ ಸಹ್ಯಾದ್ರಿ ಅಡಕೆ ಬೆಳೆಗಾರರ ಸಂಘ

28-tth-01-h.n.vijyadev
ಎಚ್.ಎನ್.ವಿಜಯದೇವ್
Published on

ತೀರ್ಥಹಳ್ಳಿ: ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಸಂಘವು 2023-24ನೇ ಸಾಲಿನಲ್ಲಿ 1,337 ಕೋಟಿ ರೂ. ವ್ಯವಹಾರ ನಡೆಸಿದ್ದು, 10 ಕೋಟಿ ರೂ.ಗೂ ಅಧಿಕ ಲಾಭ ಗಳಿಸಿದೆ ಎಂದು ಸಹ್ಯಾದ್ರಿ ಸಮೂಹ ಸಂಸ್ಥೆ ಅಧ್ಯಕ್ಷ ಎಚ್.ಎನ್.ವಿಜಯದೇವ್ ಹೇಳಿದರು.

2003ರಲ್ಲಿ ಆರಂಭವಾದ ಸಂಸ್ಥೆಯಲ್ಲಿ ಪ್ರಸ್ತುತ 10 ಸಾವಿರಕ್ಕೂ ಅಧಿಕ ಷೇರುದಾರರು ಇದ್ದಾರೆ. ಆಡಿಟ್‌ನಲ್ಲಿ ಸತತ ಎ ಗ್ರೇಡ್ ಪಡೆಯುತ್ತಿದೆ. ರಾಜ್ಯದ 29 ಜಿಲ್ಲೆಗಳಿಗೆ ಕಾರ್ಯಕ್ಷೇತ್ರ ವಿಸ್ತರಿಸಿದೆ. ಈ ವರ್ಷ ವಿವಿಧ ಬಾಬ್ತುಗಳಿಗೆ ಹಣ ಕಾಯ್ದಿರಿಸಿ ಉಳಿದ 2.75 ಕೋಟಿ ರೂ.ನಲ್ಲಿ ಷೇರುದಾರರಿಗೆ ಶೇ.10 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಡಕೆ ಮಾರುಕಟ್ಟೆಯಲ್ಲಿ ಪೈಪೋಟಿ ವ್ಯವಹಾರದ ಮೂಲಕ ರೈತರಿಗೆ ಉತ್ತಮ ಧಾರಣೆ ನೀಡಿದೆ. ಈ ವರ್ಷ ದಾಖಲೆಯ 28 ಸಾವಿರ ಮೂಟೆ ಅಡಕೆ ವ್ಯವಹಾರ ನಡೆಸಲಾಗಿದೆ. ಸೆ.17ರಂದು ವಾರ್ಷಿಕ ಮಹಾಸಭೆ ನಡೆಯಲಿದೆ ಎಂದರು.
ಷೇರು ಬಂಡವಾಳ 14.10 ಕೋಟಿ ರೂ. ಇದ್ದು, 65.52 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 84.54 ಕೋಟಿ ರೂ. ಠೇವಣಿ ಹೊಂದಲಾಗಿದೆ. 134.42 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. 16.15 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಇದೆ. ಕಾಯ್ದಿರಿಸಿದ ನಿಧಿಯಲ್ಲಿ 19 ಕೋಟಿ ರೂ.ಗೂ ಅಧಿಕ ಹಣ ಇದೆ. ಕಟ್ಟಡ ನಿಧಿಯಲ್ಲಿ 13.80 ಕೋಟಿ ರೂ. ಹಣ ಕಾಯ್ದಿರಿಸಿದೆ. ಸಾಲ ವಸೂಲಾತಿಯಲ್ಲಿ ಶೇ.84ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು. ಸಂಘದ ನಿರ್ದೇಶಕ ಬಿದರಗೋಡು ಅರುಣಕುಮಾರ್, ಸಂಸ್ಥೆಯ ಕಾವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net