

ಕೆ.ಆರ್.ನಗರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಗೆ ಸೂಕ್ತ ದಾಖಲೆಗಳನ್ನು ತಾರದೆ ಕರ್ತವ್ಯ ನಿರ್ಲಕ್ಷೃದಿಂದ ಸಭೆಗಳಲ್ಲಿ ಪದೇ ಪದೆ ಗೊಂದಲ ಉಂಟಾಗಲು ಕಾರಣರಾದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಂ.ಅಶೋಕ್‌ಕುಮಾರ್ ಮತ್ತು ಅವರ ಕಚೇರಿ ಅಧೀಕ್ಷಕ ಕೃಷ್ಣಪ್ಪ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆಯಲಾಗುತ್ತದೆ ಎಂದು ತಹಸಿಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.
ಪಟ್ಟಣದ ತಾಲೂಕು ಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಗೆ ಮುನ್ನ ನಡೆದ ದಲಿತ ಮುಖಂಡರೊಂದಿಗಿನ ಚರ್ಚೆಯ ಸಂದರ್ಭ ಶಾಸಕರಿಗೆ ಹಾಗೂ ದಲಿತ ಮುಖಂಡರಿಗೆ ಸಭೆಗೆ ಆಹ್ವಾನಿಸಿರದ ಕುರಿತು ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆಯುವುದಾಗಿ ಹೇಳಿದರು.
ಸಭೆ ಮುಂದಕ್ಕೆ: ಸೋಮವಾರ ಬೆಳಗ್ಗೆ 11ಗಂಟೆಗೆ ಆರಂಭಗೊಳ್ಳಬೇಕಿದ್ದ ಸಭೆಗೂ ಮುನ್ನ ಗೊಂದಲ ಏರ್ಪಟ್ಟಿದ್ದರಿಂದ ಸಭೆಯನ್ನು ಮುಂದೂಡಲಾಯಿತು.