ಎರಡೂ ಹುದ್ದೆಯಿಂದ ಕೆಳಗಿಳಿದ ಬಳಿಕ ಒಂದೇ ಸಾಲಿನಲ್ಲಿ ಮನದ ಇಂಗಿತ ಹೇಳಿದ ಸಚಿನ್​ ಪೈಲಟ್​...

Sachin Pilot 3
Published on

ಜೈಪುರ: ಇಂದು ಬೆಳಗ್ಗೆ ನಡೆದ ಎರಡನೇ ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗದ ಸಚಿನ್​ ಪೈಲಟ್​ ಅವರನ್ನು ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಸ್ಥಾನದಿಂದ ಕಾಂಗ್ರೆಸ್​ ಕೆಳಗಿಳಿಸಿದೆ.

ಕಾಂಗ್ರೆಸ್ ವರಿಷ್ಠರು ತಮ್ಮನ್ನು ಎರಡೂ ಹುದ್ದೆಗಳಿಂದ ತೆಗೆದುಹಾಕುತ್ತಿದ್ದಂತೆ ಟ್ವೀಟ್​ ಮಾಡಿರುವ ಸಚಿನ್​ ಪೈಲಟ್​ ಅವರು ಒಂದೇ ಸಾಲಿನಲ್ಲಿ ತಮ್ಮ ಮನಸಿನಲ್ಲಿರುವುದನ್ನು ಹೊರಹಾಕಿದ್ದಾರೆ.

ಸತ್ಯಕ್ಕೆ ಭಂಗ ತರಬಹುದು, ಅದನ್ನು ಕದಡಬಹುದು ಆದರೆ ಎಂದಿಗೂ ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಚಿನ್​ ಪೈಲಟ್​ ಟ್ವೀಟ್​ ಮಾಡಿದ್ದಾರೆ.

ಸಚಿನ್​ ಪೈಲಟ್​ ಅವರಿಗೆ ಬೆಂಬಲ ನೀಡಿದ್ದ ಸಚಿವರಾದ ವಿಶ್ವೇಂದ್ರ ಸಿಂಗ್​ ಮತ್ತು ರಮೇಶ್​ ಮೀನಾ ಅವರನ್ನೂ ಹುದ್ದೆಯಿಂದ ಕೆಳಕ್ಕಿಳಿಸಿದ್ದಾಗಿ ಕಾಂಗ್ರೆಸ್​ ನಾಯಕ ರಣದೀಪ್​ ಸರ್ಜೇವಾಲಾ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net