

ಉತ್ತರಪ್ರದೇಶ: ಬಹುತೇಕ ಜನರಿಗೆ ಸೀಮಾ ಹೈದರ್ ಯಾರೆಂಬುದು ನೆನಪಿದೆ. ಯಾಕಂದರೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಈ ಹೆಸರು ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು ಹಾಗೂ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು.
ಪಾಕಿಸ್ತಾನದಲ್ಲಿದ್ದ ಈ ಮಹಿಳೆ, ಭಾರತದ ಯುವಕ ಸಚಿನ್ ಎಂಬಾತನನ್ನು ಪ್ರೀತಿಸಿ, ಆತನಿಗೋಸ್ಕರ ಭಾರತದ ಗಡಿಯನ್ನು ದಾಟಿ ಬಂದಿದ್ದೇ ರೋಚಕ! ತನ್ನ ನಾಲ್ಕು ಮಕ್ಕಳೊಂದಿಗೆ ಪ್ರೇಮಿ ಸಚಿನ್‌ನೊಂದಿಗೆ ಜೀವಿಸಲು ಭಾರತಕ್ಕೆ ಬಂದ ಸೀಮಾ ಹೈದರ್, ಸಚಿನ್ನನ್ನು ವಿವಾಹವಾಗಿ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲಿದ್ದಾರೆ ಎಂಬ ಸುದ್ದಿ ಸದ್ಯ ಜಾಲತಾಣಗಳನ್ನು ಸುತ್ತವರೆದಿದೆ.
ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡುವ ಮೂಲಕ ತಂದೆ-ತಾಯಿಯಾಗಲಿರುವ ಸೀಮ್ ಹೈದರ್ ಮತ್ತು ಸಚಿನ್, ಅತೀವ ಸಂತಸದಿಂದ ನಿರೀಕ್ಷಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಸೀಮಾ ಮಾತನಾಡಿದ್ದು, 2024ರ ವರ್ಷ ನಮಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂದು ಹೇಳಿದ್ದಾರೆ.
ಇವರಿಬ್ಬರ ಲವ್ಸ್ಟೋರಿ ಸಂಭವಿಸಿದ್ದೇಗೆ? ಪಾಕಿಸ್ತಾನದಲ್ಲಿ ವಾಸವಿದ್ದ ಸೀಮಾ ಹೈದರ್ 2019ರಲ್ಲಿ ಆನ್‌ಲೈನ್ ಗೇಮ್ ಪಬ್ಜಿಯ ಮೂಲಕ ಸಚಿನ್ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಸೀಮಾ ಮತ್ತು ಸಚಿನ್ ಅವರು ನಡುವೆ ಆಗಾಗ್ಗೆ ಸಂಭಾಷಣೆಗಳು ನಡೆಯುತ್ತಿತ್ತು. ಇಬ್ಬರಲ್ಲೂ ಸ್ನೇಹ ಬೆಳೆದು, ನಂತರ ಸ್ನೇಹ ಪ್ರೀತಿಗೆ ತಿರುಗಿ ಅಂತಿಮವಾಗಿ ಸೀಮಾ ಸಚಿನ್ಗಾಗಿ 2023ರಲ್ಲಿ ಭಾರತಕ್ಕೆ ಬರುವಂತೆ ಆಯಿತು,(ಏಜೆನ್ಸೀಸ್).