

ಕುಂಬಳೆ: ಜುಲೈನಲ್ಲಿ ಮೂರು ಬಾರಿ ಎಂಟು ದಿನಗಳ ಕಾಲ ಶಬರಿಮಲೆ ದೇವಸ್ಥಾನ ತೆರೆಯಲಿದೆ. ಶಬರಿಮಲೆ ದೇವಸ್ಥಾನ ಒಂದು ತಿಂಗಳಲ್ಲಿ ಮೂರು ಬಾರಿ ತೆರೆಯುವುದು ಅಪೂರ್ವ. ನವಗ್ರಹ ಪೂಜೆ, ಕರ್ಕಾಟಕ ಮಾಸ ಪೂಜೆ ಮತ್ತು ನಿರಪುತ್ತರಿಗಾಗಿ ದೇವಸ್ಥಾನವನ್ನು ತೆರೆಯಲಾಗುತ್ತದೆ.
ಜನಸಂದಣಿ ನಿಯಂತ್ರಿಸಲು ವರ್ಚುವಲ್ ಕ್ಯೂ ಬುಕಿಂಗ್ ಪ್ರಾರಂಭಿಸಲಾಗಿದೆ. ಹೊಸದಾಗಿ ನಿರ್ವಿುಸಲಾದ ನವಗ್ರಹ ದೇವಸ್ಥಾನದ ಪ್ರತಿಷ್ಠಾಪನೆಗಾಗಿ ಜುಲೈ 11ರಂದು ಸಂಜೆ 5ಕ್ಕೆ ದೇವಸ್ಥಾನ ತೆರೆಯಲಾಗುತ್ತದೆ. 12ರಂದು ನಿಯಮಿತ ಪೂಜೆಗಳು ನಡೆಯಲಿವೆ. 13ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ನವಗ್ರಹ ದೇವಸ್ಥಾನ ಪ್ರತಿಷ್ಠಾಪನೆ ನಡೆಯಲಿದೆ. ರಾತ್ರಿ 10ಕ್ಕೆ ದೇವಸ್ಥಾನ ಮುಚ್ಚಲಿದೆ. ಕರ್ಕಾಟಕ ಮಾಸ ಪೂಜೆಗಾಗಿ 16ರಂದು ದೇವಾಲಯ ಮತ್ತೆ ತೆರೆಯಲಿದೆ. 21ರಂದು ರಾತ್ರಿ 10ಕ್ಕೆ ದೇವಸ್ಥಾನ ಮುಚ್ಚಲಿದೆ. 29ರಂದು ಸಂಜೆ 5ಕ್ಕೆ ನಿರಪುತ್ತರಿ ಉತ್ಸವಕ್ಕಾಗಿ ದೇವಸ್ಥಾನದ ಬಾಗಿಲು ಮತ್ತೆ ತೆರೆಯಲಿದೆ. 30ರಂದು ಬೆಳಗ್ಗೆ 5.30ರಿಂದ 6.30ರವರೆಗೆ ನಿರಪುತ್ತರಿ ಪೂಜೆ ನಡೆಯಲಿದ್ದು, ರಾತ್ರಿ 10ಕ್ಕೆ ದೇವಾಲಯ ಮುಚ್ಚಲಿದೆ.
<