

ನ್ಯೂಯಾರ್ಕ್: ರೋಬೋಗಳ ಸೃಷ್ಟಿ ಇದೀಗ ಹಳತೇ ಆಗಿದೆ ಬಿಡಿ. ಆದರೆ ಇನ್ನೂ ಮುಂದುವರೆದಿರುವ ವಿಜ್ಞಾನಿಗಳು ಜೀವಂತ ರೋಬೋ ಸೃಷ್ಟಿ ಮಾಡಿದ್ದಾರೆ, ಇದರ ವಿಶೇಷತೆ ಎಂದರೆ ಇವು ಸಂತಾನೋತ್ಪತ್ತಿಯನ್ನು ಮಾಡಬಲ್ಲುವು. ಅಂದರೆ ತಮ್ಮದೇ ಪ್ರತಿರೂಪಗಳನ್ನು ತಾವೇ ಸೃಷ್ಟಿ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿವೆ!
ತಮ್ಮದೇ ಪ್ರತಿರೂಪವನ್ನು ತಮ್ಮ ಬಾಯಲ್ಲಿ ಸೃಷ್ಟಿಸಿಕೊಳ್ಳಬಲ್ಲ ಶಕ್ತಿ ಈ ರೋಬೀಗೆ ಇದೆ. ಭ್ರೂಣದಂಥ ಈ ಸೆಲ್‌ಗಳು ಚರ್ಮವಾಗಿ ಅಭಿವೃದ್ಧಿ ಹೊಂದುತ್ತವೆ.
ಇದನ್ನು ಯಾರೇ ಆದರೂ ನಂಬುವುದು ಕಷ್ಟವೇ. ಆದರೆ ಅಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ ಅಮೆರಿಕದ ವರ್ಮೌಂಟ್ ವಿಶ್ವವಿದ್ಯಾಲಯ, ಟಫ್ಸ್ ವಿಶ್ವವಿದ್ಯಾಲಯ ಮತ್ತು ಬಯಾಲಾಜಿಕಲ್ಲಿ ಇನ್‌ಸ್ಪೈರ್ಡ್ ಇಂಜಿನೀಯರಿಂಗ್‌ನ ವಿಜ್ಞಾನಿಗಳು!
ಇದಕ್ಕೂ ಮುನ್ನ ಈ ತಂಡ ಜಿನೋಬಾಟ್ಸ್ ಎಂದು ಹೆಸರಿಸುವ ವಿಶ್ವದ ಪ್ರಪ್ರಥಮ ಜೀವಂತ ರೋಬೋ ಸೃಷ್ಟಿಸಿದ್ದರು. ಆದರೆ ಅದರಲ್ಲಿ ಸಂತಾನೋತ್ಪತ್ತಿ ಗುಣ ಇರಲಿಲ್ಲ. ಆದರೆ ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಮ್ಮ ಪ್ರತಿರೂಪ ಸೃಷ್ಟಿಸುವ ಜೀವಂತ ರೋಬೋ ಆವಿಷ್ಕರಿಸಿದ್ದಾರೆ. ಕಪ್ಪೆಯೊಂದರ ಜಿನೋಮ್ ಉಪಯೋಗಿಸಿ ಪ್ರಯೋಗಾಲಯವೊಂದರಲ್ಲಿ ಈ ಸೆಲ್‌ಗಳನ್ನು ವಿನ್ಯಾಸಗೊಳಿಸಲಾಗಿತ್ತು.
ಕಪ್ಪೆ ಭ್ರೂಣಗಳಿಂದ ಜೀವಂತ ಕಾಂಡಕೋಶಗಳನ್ನು ಕೊರೆದು ಜಿನೋಬೋಟ್‌ಗಳನ್ನು ರಚಿಸಿದ ನಂತರ ಅವುಗಳನ್ನು ಕಾವುಕೊಡಲು ಬಿಡಲಾಗಿತ್ತು. ನಂತರ, ಜೀವಕೋಶಗಳನ್ನು ಕತ್ತರಿಸಿ ನಿರ್ದಿಷ್ಟ ದೇಹ ರಚನೆ ಮರುರೂಪಿಸಲಾಗಿದೆ. ನಂತರ ಮೊದಲು ಕಂಡುಹಿಡಿದಿದ್ದ ಜಿನೋಬಾಟ್ಸ್ ಸೆಲ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಶೇಖರಿಸಿಕೊಂಡು, ತಮ್ಮದೇ ಪ್ರತಿರೂಪವನ್ನು ತಮ್ಮ ಬಾಯಲ್ಲಿ ಸೃಷ್ಟಿಸಿಕೊಳ್ಳಬಲ್ಲ ಶಕ್ತಿ ಈ ರೋಬೀಗೆ ಇದೆ. ಭ್ರೂಣದಂಥ ಈ ಸೆಲ್‌ಗಳು ಚರ್ಮವಾಗಿ ಅಭಿವೃದ್ಧಿ ಹೊಂದುತ್ತವೆ.
ಜೀವವನ್ನು ಮರುಸೃಷ್ಟಿಸುವ ಅಥವಾ ಪ್ರತಿರೂಪವನ್ನು ತಯಾರಿಸುವ ಎಲ್ಲಾ ವಿಧಾನಗಳಲ್ಲಿ ನಾವು ಕೆಲಸ ಮಾಡಿದ್ದೇವೆ. ಆದರೆ ಇದು ಇಷ್ಟೊಂದು ಪರಿಣಾಮ ಬೀರುತ್ತದೆ ಎಂಬುದು ಗೊತ್ತಿರಲಿಲ್ಲ. ಇದು ನಮಗೂ ಅಚ್ಚರಿಯಾಗಿದೆ ಎಂದಿದ್ದಾರೆ ಹಿರಿಯ ವಿಜ್ಞಾನಿ ಡೌಗ್ಲಾಸ್ ಬ್ಲಾಕಿಸ್ಟನ್.
ಇನ್ನು ಏನೇನು ಬರುವುದೋ, ಏನೇನು ಸೃಷ್ಟಿಯಾಗಲಿವೆಯೋ ಎನ್ನುವುದು ಕಾಲವಷ್ಟೇ ನಿರ್ಧರಿಸಬೇಕಿದೆ.
ಇಲ್ಲಿದೆ ನೋಡಿ ಅದರ ವಿಡಿಯೋ: (ಕೃಪೆ ನ್ಯೂ ಸೈಂಟಿಸ್ಟ್ಟ್)