ಹುಟ್ಟುತ್ತಲೇ ಗರ್ಭಾಶಯವಿಲ್ಲದಿದ್ದರೂ ಮಗುವಿಗೆ ಜನ್ಮ ನೀಡಿದ ಮಹಿಳೆ- ಈ ಅದ್ಭುತ ಸಾಧ್ಯವಾದದ್ದು ಹೀಗೆ...

baby
Published on

ಕ್ಯಾಲಿಫೋರ್ನಿಯಾ: ಹುಟ್ಟುವಾಗ ಗರ್ಭಾಶಯ ಇಲ್ಲದಿದ್ದರೂ ಮಹಿಳೆಯೊಬ್ಬರು ಮಗುವಿಗೆ ಜನ್ಮನೀಡಿರುವ ಅದ್ಭುತವೊಂದು ಅಮೆರಿಕದ ಉಟಾಹ್‌ನಲ್ಲಿ ನಡೆದಿದೆ. ಅಮಂಡಾ ಗ್ರುನೆಲ್ ಎಂಬ ಮಹಿಳೆ ಸುಂದರ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದು, ಇಬ್ಬರೂ ಚೆನ್ನಾಗಿ ಇದ್ದಾರೆ.

32 ವರ್ಷ ವಯಸ್ಸಿನ ಅಮಂಡಾ ಅವರಿಗೆ ತಮಗೆ ಗರ್ಭಾಶಯ ಇಲ್ಲ ಎಂದು ತಿಳಿದದ್ದು 17ನೇ ವಯಸ್ಸಿನಲ್ಲಿ. ಏಕೆಂದರೆ ವಯಸ್ಸು 17 ಆದರೂ ಅವರಿಗೆ ಮಾಸಿಕ ಋತುಸ್ರಾವ ಆಗುತ್ತಿರಲಿಲ್ಲ. ಇದರಿಂದ ಅವರು ಆಸ್ಪತ್ರೆಗೆ ಹೋದಾಗ ಪರೀಕ್ಷೆ ಮಾಡಿದಾಗಲಷ್ಟೇ ತಿಳಿದುಬಂದದ್ದು, ಅವರಿಗೆ ಗರ್ಭಾಶಯವಿಲ್ಲವೆಂದು. ಆದ್ದರಿಂದ ಅವರಿಗೆ ಮಗುವನ್ನು ಹೆರಲು ಸಾಧ್ಯವಿಲ್ಲ ಎನ್ನುವುದನ್ನು ವೈದ್ಯರು ಹೇಳಿದರು.

ಆದರೆ ಹೆಣ್ಣಾಗಿ ಮಗು ಹೆರದಿದ್ದರೆ ಹೇಗೆ ಎಂದು ಚಿಂತಿಸಿದ ಅಮಂಡಾ, ಈ ಬಗ್ಗೆ ವೈದ್ಯರಲ್ಲಿ ಚರ್ಚಿಸಿದರು. ನಂತರ ಅವರಿಗೆ ಗರ್ಭಾಶಯದ ಕಸಿಯ ಬಗ್ಗೆ ವಿವರಣೆ ನೀಡಲಾಯಿತು. ಈ ವೇಳೆ ಮೃತಪಟ್ಟ ಮಹಿಳೆಯೊಬ್ಬರ ಗರ್ಭಾಶಯವನ್ನು ಇವರಿಗೆ ಕಸಿ ಮಾಡಲಾಯಿತು.

ಈಗ ಆ ಗರ್ಭದಿಂದ ಮಗುನ್ನು ಪಡೆದಿದ್ದಾರೆ ಅಮಂಡಾ. ಮುದ್ದಾದ ಮಗುವಿಗೆ ಗ್ರೇಸ್‌ ಎಂದು ಹೆಸರು ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net