More

    ಕೋರ್ಟ್‌ನಲ್ಲಿ ಕೇಸ್‌ ಇರುವುದು ತಿಳಿಯದೇ ಭೂಮಿ ಕೊಂಡಾಗಿದೆ, ಈಗ ಕಾನೂನಿನಡಿ ದಾರಿಗಳೇನು?

    ಕೋರ್ಟ್‌ನಲ್ಲಿ ಕೇಸ್‌ ಇರುವುದು ತಿಳಿಯದೇ ಭೂಮಿ ಕೊಂಡಾಗಿದೆ, ಈಗ ಕಾನೂನಿನಡಿ ದಾರಿಗಳೇನು?ನಾವೊಂದು ಜಮೀನು ಕೊಂಡೆವು. ಕ್ರಯ ಮಾಡುವವರು ಆ ಜಮೀನಿನ ಮೇಲೆ ಅಣ್ಣ ತಮ್ಮಂದಿರ ವಿಭಾಗದ ಕೇಸು ಇರುವುದನ್ನು ನಮಗೆ ಹೇಳಿರಲಿಲ್ಲ. ನಾವು ಪೂರ್ತಿ ಹಣ ಕೊಟ್ಟು ಕೊಂಡಿದ್ದೇವೆ. ಕ್ರಯ ಮಾಡುವಾಗ ಇಂಜಂಕ್ಷನ್ ಆರ್ಡರ್‌ ಸಹ ಇರಲಿಲ್ಲ. ನಾವು ಕ್ರಯಕ್ಕೆ ಪಡೆದು ಖಾತೆ ನಮ್ಮ ತಂದೆ ಹೆಸರಿಗೆ ಬದಲಾದ ಮೇಲೆ, ಕ್ರಯಕ್ಕೆ ಮಾರಿದವರ ಅಣ್ಣ ತಮ್ಮಂದಿರು ನಮ್ಮ ತಂದೆಯನ್ನೂ ದಾವೆಯಲ್ಲ ಸೇರಿಸಿದ್ದಾರೆ. ಈಗ ನಮ್ಮ ತಂದೆ ಯಾರಿಗೂ ಮಾರಾಟ ಮಾಡಬಾರದೆಂದು ತಡೆ ಆಜ್ಞೆ ಇದೆ. ಕೇಸು ಬಾಕಿ ಇದ್ದಾಗ ನಾವು ಕೊಂಡಿದ್ದರಿಂದ ನಮಗೆ ಯಾವ ಹಕ್ಕೂ ಬರುವುದಿಲ್ಲವೇ? ಈಗ ನಾವೂ ಯಾರಿಗಾದರೂ ಮಾರಾಟ ಮಾಡಬಹುದೇ? ನಮ್ಮ ದುಡ್ಡೆಲ್ಲಾ ಹೋದಂತೆಯೇ ಆದರೆ ನಾವು ನೆಲ ಕಚ್ಚಬೇಕಾಗುತ್ತದೆ. ನಮಗೆ ಸಹಾಯ ಮಾಡಿ.

    ಉತ್ತರ: ನ್ಯಾಯಾಲಯದಲ್ಲಿ ನಿಮ್ಮ ತಂದೆ ಆಸ್ತಿಯನ್ನು ಮಾರಾಟ ಮಾಡಬಾರದೆನ್ನುವ ತಡೆ ಆಜ್ಞೆ ಇರುವಾಗ , ನಿಮ್ಮ ತಂದೆ ಮಾರಾಟ ಮಾಡುವುದು ತಪ್ಪಾಗುತ್ತದೆ. ಅದಕ್ಕೆ ಕೆಲವೊಮ್ಮೆ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ಹೀಗಾಗಿ ನಿಮ್ಮ ಈಗ ಆಸ್ತಿಯನ್ನು ಮಾರಾಟ ಮಾಡುವುದರಲ್ಲಿ ಅರ್ಥವಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಆಸ್ತಿಗಳನ್ನು ಮಾರುವುದನ್ನು ಮತ್ತು ಕೊಳ್ಳುವುದನ್ನು ತಪ್ಪಿಸಿದರೆ ಒಳ್ಳೆಯದು. ಆದರೆ, ಪ್ರಕರಣ ಬಾಕಿ ಇರುವಾಗ ಆಸ್ತಿ ಮಾರಾಟ ಮಾಡಲೇ ಬಾರದು ಎಂದು ಕಾನೂನಿನಲ್ಲಿ ಇಲ್ಲ. ತಡೆ ಆಜ್ಞೆ ಇಲ್ಲದೇ ಹೋದರೆ ಮಾರಲೂ ಬಹುದು. ಆದರೆ , ಪ್ರಕರಣ ಬಾಕಿ ಇರುವಾಗ ಯಾವುದಾದರೂ ಆಸ್ತಿಯನ್ನು ಕೊಂಡುಕೊಂಡರೆ, ಪ್ರಕರಣದಲ್ಲಿ ಆಗುವ ತೀರ್ಪಿಗೆ ಕ್ರಯದ ಸಿಂಧುತ್ವ ಒಳಪಟ್ಟಿರುತ್ತದೆ. ಟ್ರಾನ್ಸ್ಪರ್ ಆಫ್ ಪ್ರಾಪರ್ಟಿ ಕಾಯ್ದೆಯ ಸೆಕ್ಷನ್ 52 ಈ ಬಗ್ಗೆ ತಿಳಿಸುತ್ತದೆ.

    ನಿಮ್ಮ ವಿಷಯದಲ್ಲಿ ನಿಮ್ಮ ತಂದೆಗೆ ದಾವೆ ಬಾಕಿ ಇರುವ ವಿಷಯವೇ ತಿಳಿದಿರಲಿಲ್ಲ ಎನ್ನುವುದು ಒಂದು ಅಂಶ. ನಿಮ್ಮ ಕ್ರಯದಾರರು ಮತ್ತು ಅವರ ಕುಟುಂಬದವರ ಮಧ್ಯೆ ಇರುವ ವಿಭಾಗದ ದಾವೆ ತೀರ್ಮಾನ ಆದಾಗ, ನಿಮಗೆ ಮಾರಿದ ಆಸ್ತಿ ನಿಮಗೆ ಕ್ರಯಮಾಡಿದವರ ಸ್ವಯಾರ್ಜಿತ ಆಸ್ತಿ ಎಂದಾದರೆ ನಿಮ್ಮ ತಂದೆಗೆ ಆಗಿರುವ ಕ್ರಯ ಊರ್ಜಿತ ಆಗುತ್ತದೆ. ಹಾಗಲ್ಲದೆ ಅದೂ ಸಹ ಒಟ್ಟು ಕುಟುಂಬದ ಆಸ್ತಿ ಎಂದಾದರೆ, ಆಗ ದಾವೆ ಡಿಕ್ರೀ ಆದ ಮೇಲೆ ಎಫ್.ಡಿ.ಪಿಯಲ್ಲಿ ನಿಮ್ಮ ತಂದೆ ಅರ್ಜಿ ಸಲ್ಲಿಸ ಬಹುದು.

    ನೀವು ಕೊಂಡ ಆಸ್ತಿಯನ್ನು ನಿಮ್ಮ ಕ್ರಯದಾರರ ಭಾಗಕ್ಕೆ ತೆಗೆದು, ಅದನ್ನು ತದನಂತರ ನಿಮಗೆ ಸರಿಹೊಂದಿಸುವಂತೆ ಕೇಳಿಕೊಳ್ಳಬಹುದು. ಒಟ್ಟಿನಲ್ಲಿ ನಿಮ್ಮ ತಂದೆಯ ಕ್ರಯಪತ್ರದ ಸಿಂಧುತ್ವ ಹಾಲೀ ಬಾಕೀ ಇರುವ ವಿಭಾಗದ ಕೇಸಿನ ತೀರ್ಪಿನ ಮೇಲೆ ಆಧಾರ ಪಟ್ಟಿರುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟಿನ ಮಧುಕರ್ ನಿವೃತ್ತಿ ಜಗ್ತಾಪ್ ಮತ್ತು ಇತರರು ವಿರುದ್ಧ ಪ್ರಮೀಳಾ ಬಾಯಿ ಚಂದೂಲಾಲ್ ಪರಂದೇಕರ್ ಮತ್ತು ಇತರರು ಎ.ಐ.ಆರ್. 2019 ಎಸ್.ಸಿ. 4252 ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ.

    ಪತಿ ಗುಟ್ಟಾಗಿ ಪರಸ್ತ್ರೀ ಜತೆ ಲೈಂಗಿಕ ಸಂಬಂಧ ಹೊಂದಿದಾಗ ಪತ್ನಿ ಕೇಸ್‌ ಹಾಕಿದ್ರೆ ಏನಾಗುತ್ತೆ?

    ಪತಿ ಸಂಸಾರ ಮಾಡಲು ಒಪ್ತಿಲ್ಲ, ನನಗೆ ಅವರು ಬೇಕು, ಮನಸ್ಸನ್ನು ಹೇಗೆ ಪರಿವರ್ತಿಸಲಿ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts