ರಾಮಮಂದಿರ ನೆಲಸಮ ಮಾಡಿ ಮಸೀದಿ ಕಟ್ಟುವೆವು- ಮುಸ್ಲಿಂ ಸಂಘದ ಟ್ವೀಟ್‌

maseedi
Published on

ನವದೆಹಲಿ: ರಾಮಮಂದಿರಕ್ಕೆ ಭೂಮಿಪೂಜೆ ನೆರವೇರಿದ ನಂತರ ಶತ ಶತಮಾನದ ಕನಸುಗಳು ನನಸಾಗಿರುವ ಬೆನ್ನಲ್ಲೇ ಕೆಲವು ಮುಸ್ಲಿಂ ಸಂಘಟನೆಗಳಿಂದ ಪ್ರಚೋದನಕಾರಿ ಹೇಳಿಕೆಗಳು ಶುರುವಾಗಿದೆ.

ನಿನ್ನೆಯಷ್ಟೇ ಅಲ್ಲಿ ಹಿಂದೆಯೂ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ- ಯಾವ ತೀರ್ಪೂ ಲೆಕ್ಕಕ್ಕಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಟ್ವೀಟ್‌ ಮಾಡಿರುವ ಬೆನ್ನಲ್ಲೇ ಇದೀಗ ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ರಾಮಮಂದಿರವನ್ನು ನೆಲಸಮ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟುವುದಾಗಿ ಟ್ವಿಟರ್‌ನಲ್ಲಿ ಸಾಜಿದ್‌ ರಶೀದಿ ಹೇಳಿದ್ದಾರೆ.

ಮಸೀದಿಯ ಯಾವಾಗಲೂ ಮಸೀದಿಯಾಗಿಯೇ ಇರಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಸೀದಿ ಜಾಗದಲ್ಲಿ ಬೇರೆ ಏನನ್ನೇ ನಿರ್ಮಿಸಲು ನಮ್ಮ ಧರ್ಮ ಬಿಡುವುದಿಲ್ಲ. ಇಲ್ಲಿ ನೀಡಿರುವ ಹೇಳಿಕೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಸದಾ ಇದ್ದುದು ಮಸೀದಿಯೇ ಆದ್ದರಿಂದ ಮುಂದೆಯೂ ಅದು ಮಸೀದಿ ಆಗಿಯೇ ಇರಲಿದೆ ಎಂದಿದ್ದಾರೆ.

ಈ ಹಿಂದೆ ಬಾಬರಿ ಮಸೀದಿಯನ್ನು ಕಟ್ಟುವಾಗ ದೇವಾಲಯವನ್ನು ನೆಲಸಮಗೊಳಿಸಿರಲಿಲ್ಲ. ಆದರೆ ಈಗ ಮಸೀದಿ ಕಟ್ಟಲು ರಾಮಮಂದಿರವನ್ನು ನೆಲಸಮಗೊಳಿಸುತ್ತೇವೆ ಎಂದಿದ್ದಾರೆ ಸಾಜಿದ್‌.

ಅಯೋಧ್ಯೆಯಲ್ಲಿ ನಡೆದ ರಾಮ ದೇವಾಲಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net