More

    ಅಲ್ಲಿ ಹಿಂದೆಯೂ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ- ಯಾವ ತೀರ್ಪೂ ಲೆಕ್ಕಕ್ಕಿಲ್ಲ ಎಂದು ಟ್ವೀಟ್‌

    ನವದೆಹಲಿ: ಅತ್ತ ಅಯೋಧ್ಯೆಯ ರಾಮಮಂದಿರದ ಭೂಮಿಪೂಜೆಗೆ ಪೂಜಾ ವಿಧಿವಿಧಾನಗಳು ನಡೆಯುತ್ತಿದ್ದರೆ ಇತ್ತ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕ್ಯಾತೆ ತೆಗೆದೆದ್ದು ತನ್ನ ಟ್ವಿಟರ್‌ ಖಾತೆಯಲ್ಲಿ ಆ ಜಾಗದಲ್ಲಿ ಇದ್ದುದು ಬಾಬರಿ ಮಸೀದಿಯೇ ಎಂದು ಹೇಳಿಕೊಂಡಿದೆ.

    ಮಂಡಳಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಕುರಿತು ಟ್ವೀಟ್‌ ಮಾಡಲಾಗಿದ್ದು, ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿದೆ. ಅಲ್ಲಿ ಸದಾ ಇದ್ದುದು ಬಾಬರಿ ಮಸೀದಿಯೇ, ಹಿಂದೆಯೂ ಅಲ್ಲಿ ಬಾಬರಿ ಮಸೀದಿಯೇ ಇತ್ತು, ಮುಂದೆಯೂ ಇರಲಿದೆ ಎಂದು ಹೇಳಿದೆ.

    ಅಯೋಧ್ಯೆಯಲ್ಲಿನ ರಾಮಮಂದಿರ ಜಾಗದ ಕುರಿತಾಗಿ ಶತ ಶತಮಾನಗಳಿಂದ ಇದ್ದ ಕಾನೂನು ಸಮರದ ನಂತರ ಸುಪ್ರೀಂಕೋರ್ಟ್‌ ರಾಮಮಂದಿರದ ಪರವಾಗಿ ತೀರ್ಪು ಕೊಟ್ಟಿರುವುದನ್ನು ಪ್ರಶ್ನಿಸುವ ರೀತಿಯಲ್ಲಿ ಈ ಟ್ವೀಟ್‌ ಮಾಡಲಾಗಿದೆ.

    ಅನ್ಯಾಯದ, ದಬ್ಬಾಳಿಕೆಯ, ನಾಚಿಕೆಗೇಡಿನ ಮತ್ತು ಬಹುಸಂಖ್ಯಾತರ ತುಷ್ಟಿಕರಣದ ನಿರ್ಧಾರಗಳು ಯಾವುವೂ ಇಲ್ಲಿ ಉಳಿಯುವುದಿಲ್ಲ. ಈ ರೀತಿ ಮಾಡಿ ನಿಜಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲ. ದುಃಖಿಸುವ ಅಗತ್ಯವಿಲ್ಲ. ಏಕೆಂದರೆ ಯಾವುದೇ ಪರಿಸ್ಥಿತಿ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಟ್ವಿಟರ್‌ನಲ್ಲಿ ತಿಳಿಸಲಾಗಿದ್ದು, ಅದಕ್ಕೆ ಹಗಿಯಾ ಸೋಫಿಯಾ ಮಸೀದಿಯ ಉದಾಹರಣೆಯನ್ನು ನೀಡಲಾಗಿದೆ.

    ಬಾಬರಿ ಮಸೀದಿ ಇತ್ತು ಮತ್ತು ಯಾವಾಗಲು ಮಸೀದಿಯಾಗಿಯೇ ಇರಲಿದೆ. ಹಗಿಯಾ ಸೋಫಿಯಾ ಇದಕ್ಕೆ ಉತ್ತಮ ಉದಾಹರಣೆ ಎಂದಿದೆ.
    ಏನಿದು ಹಗಿಯಾ ಸೋಫಿಯಾ?: ಟರ್ಕಿಯ ಇಸ್ಟಾನ್‌ಬುಲ್‌ನಲ್ಲಿ ಇರುವ ಹಗಿಯಾ ಸೋಫಿಯಾ ಮಸೀದಿಯಾಗಿತ್ತು . 1434 ರಲ್ಲಿ ಇಸ್ತಾಂಬುಲ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಹಗಿಯಾ ಸೋಫಿಯಾವನ್ನು ಉಸ್ಮಾನಿ ಸುಲ್ತಾನರು ಮಸೀದಿಯಾಗಿ ಪರಿವರ್ತಿಸಿದ್ದರು,

    ನಂತರ ಅದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಶಾಮೀಲು ಮಾಡಲಾಯಿತು. ನಂತರ ಅಲ್ಲಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. 1934ರಲ್ಲಿ ಅಂದಿನ ಅಧ್ಯಕ್ಷ ಎರ್ಡೊಗನ್ ಈ ನಿರ್ಧಾರ ತೆಗೆದುಕೊಂಡಿದ್ದರು.

    ಇದನ್ನೂ ಓದಿ: ಒಂದು ಗ್ರಾಂ ಚಿನ್ನದಲ್ಲಿ ತಯಾರಾಯ್ತು ಒಂದಿಂಚಿನ ಶ್ರೀರಾಮಚಂದ್ರ

    ಈ ಐತಿಹಾಸಿಕ ಕಟ್ಟಡವು ಅದರ ಬಣ್ಣಗಳನ್ನು ಹಲವು ಬಾರಿ ಬದಲಾಯಿಸಿದೆ. ಈ ಕಟ್ಟಡವನ್ನು ನಿರ್ಮಿಸಿದಾಗ, ಇದು ಭವ್ಯವಾದ ಚರ್ಚ್ ಆಗಿತ್ತು ಮತ್ತು ಇದು ಶತಮಾನಗಳವರೆಗೆ ಅದು ಚರ್ಚ್ ಆಗಿಯೇ ಉಳಿದಿತ್ತು. ನಂತರ ಅದನ್ನು ಮಸೀದಿಯಾಗಿ ಪರಿವರ್ತಿಸಲಾಗಿತ್ತು.

    ಇದೇ ಜುಲೈ ತಿಂಗಳಿನಲ್ಲಿ ಟರ್ಕಿಯ ಅಧ್ಯಕ್ಷ ರೆಚೇಪ್ ತಯಾಬ್ ಎರ್ಡೋಗನ್ ಅವರು, ಐತಿಹಾಸಿಕ ವಸ್ತುಸಂಗ್ರಹಾಲಯವನ್ನು ಮತ್ತೆ ಮಸೀದಿಯಾಗಿ ಪರಿವರ್ತಿಸಲು ಆದೇಶಿಸಿದ್ದಾರೆ. ಅದನ್ನೇ ಈಗ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಉದಾಹರಣೆಯಾಗಿ ಕೊಟ್ಟಿದೆ.

    ಸಮುದ್ರಮಥನದಲ್ಲಿ ಹುಟ್ಟಿದ ‘ದೇವ ವೃಕ್ಷ’ ರಾಮಮಂದಿರದ ಅಂಗಳದಲ್ಲಿ….

    ರಾಮಮಂದಿರದ ‘ರಘುಪತಿ ಲಡ್ಡು’ವಿನಲ್ಲಿ ಕರ್ನಾಟಕದ ಘಮಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts