ಅಬ್ಬಬ್ಬಾ ಇದೆಂಥ ಆಚರಣೆಯಪ್ಪಾ! ಕುಟುಂಬದ ಸದಸ್ಯರು ಸತ್ತರೆ ಬೆರಳು ಕಟ್​ ಮಾಡಬೇಕು!

tribes
Published on

ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದು ಎಲ್ಲಾ ಧರ್ಮದಲ್ಲಿಯೂ ಇದೆ. ಆದರೆ ವಿಚಿತ್ರ ಹಾಗೂ ಅಷ್ಟೇ ಭಯಾನಕ ಎನ್ನುವ ಪದ್ಧತಿಯೊಂದು ಡ್ಯಾನಿ ಎಂಬ ಬುಡಕಟ್ಟು ಜನಾಂಗದಲ್ಲಿ ಇದೆ.

ಅದೇನೆಂದರೆ ಈ ಜನಾಂಗದಲ್ಲಿ ಯಾರಾದರೂ ಸತ್ತರೆ ಅವರ ಕುಟುಂಬಸ್ಥರು ಬೆರಳುಗಳನ್ನು ಕತ್ತರಿಬೇಕು! ಕೇಳಿದರೇನೇ ಮೈ ಝುಂ ಎನ್ನುವ ವಿಚಾರವಿದು. ಆದರೆ ವಿಚಿತ್ರ ಎಂದರೆ ಈ ರೀತಿ ಸಂಪ್ರದಾಯಕ್ಕೆ ಒಳಗಾಗುವುವರು ಹೆಣ್ಣುಮಕ್ಕಳು. ಇದರರ್ಥ ಯಾರೇ ಸಾಯಲಿ, ಬೆರಳನ್ನು ಕತ್ತರಿಸಿಕೊಳ್ಳಬೇಕಾದವರು ಹೆಂಗಸರು ಮತ್ತು ಮಕ್ಕಳು. ಹೆಣ್ಣು ಮಕ್ಕಳು ಚಿಕ್ಕವರಾಗಿದ್ದರೂ ಅವರ ಬೆರಳು ಕತ್ತರಿಸಲಾಗುತ್ತದೆ!

ಸತ್ತಾಗ ಕಣ್ಣೀರು ಹಾಕುವ ಮೂಲಕ ಸಾವಿನ ನೋವನ್ನು ಮರೆಯು ಬಿಡುತ್ತೇವೆ. ಆದರೆ ದೈಹಿಕ ನೋವನ್ನು ಮರೆಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಈ ನೋವಂತೆ, ಆದರೆ ಇಂಥದ್ದೊಂದು ಕೆಟ್ಟ ಸಂಪ್ರದಾಯ ಹೆಣ್ಣುಮಕ್ಕಳಿಗೆ ಮಾತ್ರ ಏಕೆ ಎಂಬ ಬಗ್ಗೆ ಇದುವರೆಗೂ ಅವರಿಂದ ಉತ್ತರವಿಲ್ಲ.

ಹೀಗೆ ಬೆರಳು ಕಟ್​ ಮಾಡುವ ಮುನ್ನ ಬಿಸಿಯಾಗಿ ಕಟ್ಟಲಾಗುತ್ತದೆ. ಇದು ನೋವು ತಡೆಯಲು ಈ ರೀತಿ ವಿಧಾನವಂತೆ. ನಂತರ ಕುಟುಂಬ ಸದಸ್ಯರು, ಒಡಹುಟ್ಟಿದವರು, ಪಾಲಕರು ಬೆರಳನ್ನು ಬಿಗಿಯಾಗಿ ಕಟ್ಟಲು ಸಹಾಯ ಮಾಡುತ್ತಾರೆ.

ಅಂದಹಾಗೆ ಡ್ಯಾನಿ ಬುಡಕಟ್ಟು ಜನರು ಹೆಚ್ಚಾಗಿ ಕಾಣಿಸಿಕೊಳ್ಳುವುದು ಆಫ್ರಿಕಾದಲ್ಲಿ ಹಾಗೂ ಇವರು ಹೆಚ್ಚಾಗಿ ಪಪುವಾ ಪ್ರಾಂತ್ಯದ ವಮೇನಾ ಎಂಬ ಪ್ರದೇಶದಲ್ಲಿ ವಾಸಿಸುತ್ತಾರೆ. ಇಂಡೋನೇಷ್ಯಾದ ಸೈಕ್ಲೋಪ್ಸ್ ಪರ್ವತಗಳಲ್ಲಿರುವ ಈ ಸ್ಥಳವನ್ನು ನೋಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net