ಊಟಕ್ಕೂ ಮೊದಲು ಪ್ರಾರ್ಥನೆ ಮಾಡುವ ನಾಯಿ- ಸಕತ್‌ ವೈರಲ್‌ ಆಗ್ತಿದೆ ಈ ವಿಡಿಯೋ

dog
Published on

ನವದೆಹಲಿ: ನಾಯಿಗಳ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ನಿಷ್ಠೆ, ತ್ಯಾಗ, ಪ್ರೇಮ, ಸ್ನೇಹ ಎಲ್ಲದ್ದಕ್ಕೂ ಸಾಕುನಾಯಿಗಳಿಗೆ ಭಾರಿ ಹೆಸರು ಇದೆ. ಮಾತ್ರವಲ್ಲದೇ ಸೈನ್ಯದಿಂದ ಹಿಡಿದು, ಪೊಲೀಸ್‌ ಇಲಾಖೆಯವರೆಗೂ ಇದರ ಕಾರ್ಯಗಳು ಅಷ್ಟಿಷ್ಟಲ್ಲ.

ಇವೆಲ್ಲವುಗಳಿಗಿಂತಲೂ ಡಿಫರೆಂಟ್‌ ಆಗಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಅದೇನೆಂದರೆ ವೈಶಾಲಿ ಮಾಥುರ್ ಎನ್ನುವವರು ತಮ್ಮ ಸ್ನೇಹಿತೆಯೊಬ್ಬರ ಮನೆಯ ಎರಡು ನಾಯಿಗಳ ವಿಡಿಯೋ ಶೇರ್‌ ಮಾಡಿದ್ದಾರೆ. ಅದರಲ್ಲಿ ಈ ನಾಯಿಗಳು ತನ್ನ ಒಡತಿಯ ಜತೆ ದೇವರ ಭಜನೆಯಲ್ಲಿ ಪಾಲ್ಗೊಂಡು ಭಜನೆಯ ಬಳಿಕವಷ್ಟೇ ಊಟ ಮಾಡುತ್ತದೆ.

ಮಹಿಳೆ ಕೈಮುಗಿದು ಮಹಿಳೆ ಪ್ರಾರ್ಥನೆ ಪಠಿಸುವ ಸಮಯದಲ್ಲಿ ನಾಯಿಗಳು ಶ್ರದ್ಧೆಯಿಂದ ಕುಳಿತುಕೊಂಡಿರುವುದು ಹಾಗೂ ಭಜನೆ ಮುಗಿದ ಮೇಲೆ ಆಹಾರವನ್ನು ಸೇವಿಸುವಂತೆ ಮಹಿಳೆ ಸೂಚಿಸಿದಾಗ, ಅವು ಜಿಗಿದು ಆಹಾರದ ಬಟ್ಟಲಿನತ್ತ ಧಾವಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net