

ಪಣಜಿ (ಗೋವಾ): ವಾಸ್ಕೋ ಡಿ ಗಾಮಾ- ಹೌರಾ ಅಮರಾವತಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿರುವ ಘಟನೆ ಇಂದು ಬೆಳಗ್ಗೆ 8.56ಕ್ಕೆ ನಡೆದಿದೆ.
ದೂಧ್‌ಸಾಗರ್ ಮತ್ತು ಗೋವಾದ ಕಾರಂಜೋಲ್ ನಡುವೆ ಈ ಘಟನೆ ನಡೆದಿದೆ. ರೈಲಿನ ಇಂಜಿನ್‌ನ ಮುಂಭಾಗದ ಜೋಡಿ ಚಕ್ರಗಳು ಹಳಿತಪ್ಪಿರುವುದಾಗಿ ಹೇಳಲಾಗುತ್ತಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ.