18 ವರ್ಷ ಮೇಲ್ಪಟ್ಟವರಿಗೆ ಜೂ.21ರಿಂದ ಲಸಿಕೆ: ಬೆಲೆ ನಿಗದಿ ಹೇಗೆ? ಪರಿಷ್ಕೃತ ಮಾರ್ಗಸೂಚಿ ಇಲ್ಲಿದೆ ನೋಡಿ..

vaccine
Published on

ನವದೆಹಲಿ: ಕೋವಿಡ್‌-19 ಲಸಿಕೆಯ ಕಾರ್ಯಕ್ರಮಕ್ಕೆ ಕೆಲವೊಂದು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದೆ. ಈಗಾಗಲೇ ಇರುವ ಮಾರ್ಗಸೂಚಿಗೆ ಕೆಲವೊಂದು ಪರಿಷ್ಕರಣೆ ಮಾಡಿದ್ದು ಈಗ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಕಾರ್ಯ ನಡೆಯಲಿದೆ. ಎಲ್ಲರಿಗೂ ಚುಚ್ಚುಮದ್ದು ನೀಡಲು ರಾಜ್ಯಗಳಿಗೆ ಉಚಿತ ಲಸಿಕೆಯನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಲಸಿಕೆಯ ಡೋಸ್‌ಗಳನ್ನು ಆಯಾ ರಾಜ್ಯಗಳಿಗೆ ಮುಂಚೆಯೇ ಸರ್ಕಾರ ತಿಳಿಸಲಿದ್ದು, ಲಸಿಕೆಗಳಿಗೆ ಆದ್ಯತೆ ಮೇರೆಗೆ ಅವುಗಳನ್ನು ನೀಡುವ ವೇಳಾಪಟ್ಟಿಯ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ರಾಜ್ಯಗಳಲ್ಲಿನ ಜನಸಂಖ್ಯೆ, ಕರೊನಾ ಸೋಂಕಿತರ ಸಂಖ್ಯೆ ಇನ್ನಿತರ ಆಧಾರದ ಮೇಲೆ ಲಸಿಕೆಗೆ ಆದ್ಯತೆ ನೀಡಲಾಗುತ್ತದೆ.

ಅದೇ ರೀತಿ ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಎಷ್ಟು ಬೆಲೆ ನಿಗದಿ ಮಾಡಬೇಕು ಎಂಬುದನ್ನು ಲಸಿಕೆ ತಯಾರಕರು ನಿರ್ಧರಿಸಲಿದ್ದಾರೆ. ಖಾಸಗಿ ಆಸ್ಪತ್ರೆಗಳು ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ ಲಸಿಕೆಯ ಹಣ ಸೇರಿದಂತೆ 150 ರೂ.ಗಳನ್ನು ಅಷ್ಟೇ ಸೇವಾ ಶುಲ್ಕವಾಗಿ ಪಡೆಯಬೇಕು. ರಾಜ್ಯ ಸರ್ಕಾರಗಳು ವಿಧಿಸುವ ಬೆಲೆಯನ್ನು ಮೇಲ್ವಿಚಾರಣೆ ಮಾಡಬಹುದು. ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ದರವನ್ನು ನಿಗದಿ ಮಾಡಲಾಗಿದ್ದು, ಸರ್ಕಾರಗಳು ಮೇಲ್ವಿಚಾರಣೆ ಮಾಡುವಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net