VIDEO: ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಕ್ರೀಡಾ ಸಚಿವ! ವಿಡಿಯೋ ವೈರಲ್

1230624
Published on

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಅವರು ಓಡಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.

ಬಿಜೆಪಿ ಅಭ್ಯರ್ಥಿಯಾಗಿರುವ ತಿವಾರಿಯವರು ಲಖನೌನ ಫೆಫ್ನಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಲ್ಲಿಯಾ ಕಲೆಕ್ಟರೇಟ್‍ನಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಹೋಗಿದ್ದ ಅವರು ಓಡೋಡಿ ಬಂದಿದ್ದರು. ಕೇಸರಿ ಶಾಲು ಹಾಗೂ ಹಾರವನ್ನು ಧರಿಸಿ ಬಲ್ಲಿಯಾ ಕಲೆಕ್ಟರೇಟ್ ಕಚೇರಿಯ ಮುಖ್ಯ ಗೇಟ್‍ನಿಂದ ನಾಮನಿರ್ದೇಶನ ಸಭಾಂಗಣಕ್ಕೆ ಓಡಿದರು. ಇದರ ವಿಡಿಯೋ ವೈರಲ್ ಆಗಿದ್ದು ಥಹರೇವಾರಿ ಕಮೆಂಟ್‌ಗಳು ಬಂದಿವೆ..

ಫೆಫ್ನಾ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಫೆ.11 ಕೊನೆಯ ದಿನ. ಆದರೆ ಶುಭ ಮುಹೂರ್ತದ ಲೆಕ್ಕಾಚಾರವೋ ಗೊತ್ತಿಲ್ಲ. ಶುಕ್ರವಾರದ (ಫೆ.4) ಮಧ್ಯಾಹ್ನ 3 ಗಂಟೆಗೆ ನಾಮಪತ್ರ ನೀಡಲು ಅವರು ಬಯಸಿದ್ದರು. ಆದರೆ ಆ ವೇಳೆಗಾಗಲೇ ಟೈಂ ಆಗಿಬಿಟ್ಟಿತ್ತು. ಆದ್ದರಿಂದ ಓಡೋಡಿ ಬಂದು ನಾಮಪತ್ರ ಸಲ್ಲಿಸಿದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫೆ. 10ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

ಸಚಿವರು ಓಡೋಡಿ ಬಂದಿರುವ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net