ಮನೆ ಮನೆಗೆ ಭಾರತದ ಧ್ವಜ ಹಂಚಿದ್ದಕ್ಕೆ ಕುಟುಂಬಕ್ಕೆ ಕೊಲ್ಲುವ ಬೆದರಿಕೆ: ಗೋಡೆಗೆ ಅಂಟಿಸಿದ ಪತ್ರ

threat
Published on

ಬಿಜ್ನೋರ್ (ಉತ್ತರ ಪ್ರದೇಶ): ಕೋಮುದ್ವೇಷದ ಜ್ವಾಲೆ ಎಲ್ಲೆಡೆ ಹರಡಿರುವ ಮಧ್ಯೆಯೇ ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮನೆಮನೆಗೆ ಧ್ವಜವನ್ನು ಹಂಚಿರುವ ಕಾರಣಕ್ಕೆ ಹಿಂದೂ ಕುಟುಂಬವೊಂದಕ್ಕೆ ಪ್ರಾಣ ಬೆದರಿಕೆ ಹಾಕಲಾಗಿದೆ!

ಬಿಜ್ನೋರ್​ ಜಿಲ್ಲೆಯ ಕಿರಾತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರುಣ್ ಕುಮಾರ್ ಎಂಬವವರ ಕುಟುಂಬಕ್ಕೆ ಈ ಬೆದರಿಕೆ ಬಂದಿದೆ.

ಅರುಣ್​ ಅವರ ಪತ್ನಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಕರೆಯ ಮೇರೆಗೆ ಘರ್​ ಘರ್​ ಮೇ ತಿರಂಗಾ ಯೋಜನೆ ಹಿನ್ನೆಲೆಯಲ್ಲಿ ಮನೆಮನೆಗೆ ಧ್ವಜ ಹಂಚುವ ಕೆಲಸ ಅರುಣ್​ ಅವರಿಗೂ ನೀಡಲಾಗಿತ್ತು. ಅರುಣ್​ ಅವರ ಪತ್ನಿ ಪತಿಯ ಜತೆ ಧ್ವಜ ವಿತರಣೆ ಮಾಡಿದ್ದರು.

ಇದೇ ಕಾರಣಕ್ಕೆ ಅವರಿಗೆ ಜೀವ ಬೆದರಿಕೆ ಬಂದಿದೆ. ಅವರ ಮನೆಯ ಹೊರಗಡೆಯ ಗೋಡೆಗೆ ಜೀವ ಬೆದರಿಕೆ ಪತ್ರ ಅಂಟಿಸಲಾಗಿದೆ. ಸದ್ಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net