

ಕೀವ್: ತಿಂಗಳುಗಳೇ ಕಳೆದರೂ ರಷ್ಯಾ-ಯೂಕ್ರೇನ್ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ರಷ್ಯಾ ಅಂತೂ ಬೆಂಬಡದೇ ಯೂಕ್ರೇನ್ನನ್ನು ಕಾಡುತ್ತಿತ್ತು, ಬಹುತೇಕ ಯೂಕ್ರೇನ್ನಲ್ಲಿ ಸ್ಮಶಾನ ವಾತಾವರಣ ಸೃಷ್ಟಿಯಾಗಿದೆ. ಅಲ್ಲಿನ ಎಲ್ಲಾ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆಯಲು ರಷ್ಯಾ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಇದೆ.
ಇವುಗಳ ನಡುವೆ, ಚಿಕ್ಕಪ್ರದೇಶ ಯೂಕ್ರೇನ್ ರಷ್ಯಾ ಪಡೆಗಳನ್ನು ಎದುರಿಸಲು ಹೊಸ ಪ್ಲ್ಯಾನ್ ಮಾಡಿದೆ, ಅದೇನೆಂದರೆ ಪ್ರವಾಹ ಸೃಷ್ಟಿ! ರಷ್ಯಾ ಸೈನಿಕರನ್ನು ಓಡಿಸುವ ಸಲುವಾಗಿ ಬೃಹತ್ ಆಣೆಕಟ್ಟನ್ನೇ ತೆರೆದು ಅಗಾಧ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಯೂಕ್ರೇನ್ನ ರಾಜಧಾನಿ ಕೀವ್‌ನ ಉತ್ತರದ ಒಂದು ಸಣ್ಣ ಹಳ್ಳಿಯಲ್ಲಿ ಈ ಪ್ರವಾಹ ಸೃಷ್ಟಿ ಮಾಡಲಾಗಿದೆ.
ಹೀಗೆ ಮಾಡಿದ್ದರಿಂದ ಪ್ರವಾಹ ಉಂಟಾಗಿದ್ದು, ನೆಲಮಾಳಿಗೆಗಳು ಮತ್ತು ಹೊಲಗಳು ಮುಳುಗಿಹೋಗಿವೆ. ಆದರೆ ಈ ಪ್ರವಾಹಕ್ಕೆ ಸಿಲುಕಿ ರಷ್ಯಾದ ಸೈನಿಕರು ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ ಎಂದು ವರದಿಯಾಗಿದೆ. ಡೆಮಿಡಿವ್ ಎಂಬಲ್ಲಿ ಕೂಡ ಯೂಕ್ರೇನ್ ಪಡೆಗಳು ಅಣೆಕಟ್ಟನ್ನು ತೆರೆದಿದ್ದರಿಂದ ಇರ್ಪಿನ್ ಎಂಬ ನದಿಯ ನೀರು ಸುತ್ತಮುತ್ತಲಿನ ಹಳ್ಳಿಗಳನ್ನು ಮತ್ತು ಸಾವಿರಾರು ಎಕರೆಗಳನ್ನು ಮುಳುಗಿಸಿದೆ.
ಈ ಪ್ರವಾಹದಿಂದಾಗಿ ರಷ್ಯಾದ ಸೈನಿಕರು ಮತ್ತು ಟ್ಯಾಂಕ್‌ಗಳು ಇನ್ನೂ ಮುನ್ನುಗ್ಗಿ ಬರಲು ಸಾಧ್ಯವಾಗಲಿಲ್ಲ. ತಮಗೆ ಒಂದಿಷ್ಟು ಹಾನಿ ಮಾಡಿಕೊಂಡು ರಷ್ಯಾ ಆಕ್ರಮಣವನ್ನು ತಡೆಯಲು ಇದು ಅಗತ್ಯವಾಗಿತ್ತು ಎಂದೇ ಹೇಳಲಾಗುತ್ತಿದೆ.