ಇಂಜಿನಿಯರಿಂಗ್‌ ಪದವೀಧರರಿಗೆ ಭಾರತೀಯ ಸೇನೆಯಲ್ಲಿದೆ 189 ಹುದ್ದೆಗಳು- 56 ಸಾವಿರ ರೂ. ಸ್ಟೈಪೆಂಡ್

udyoga-army
Published on

ಇಂಜಿನಿಯರಿಂಗ್​ ಪದವೀಧರರಾಗಿರುವ ಅವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಮತ್ತು ರಕ್ಷಣಾ ಸಿಬ್ಬಂದಿಯ ವಿಧವಾ ಅಭ್ಯರ್ಥಿಗಳನ್ನು ಶಾರ್ಟ್​ ಸವಿರ್ಸ್​ ಕಮಿಷನ್​ (ಎಸ್​ಎಸ್​ಸಿ) ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಲು ಭಾರತೀಯ ಸೇನೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರು 2022ರ ಏಪ್ರಿಲ್​ನಲ್ಲಿ ತರಬೇತಿ ಕೋರ್ಸ್​ಗೆ ಹಾಜರಾಗಬೇಕಿದೆ.

ಒಟ್ಟು ಸ್ಥಾನಗಳು: 189

ಎಸ್​ಎಸ್​ಸಿ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚೆನ್ನೈನ ಆಫೀಸರ್ಸ್​ ಟೆನಿಂಗ್​ ಅಕಾಡೆಮಿಯಲ್ಲಿ (ಒಟಿಎ) ತರಬೇತಿ ನೀಡಲಾಗುವುದು. ಇಂಡಿಯನ್​ ಮಿಲಿಟರಿ ಅಕಾಡೆಮಿಯಲ್ಲಿ ನೀಡಲಾಗುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಲೆಫ್ಟಿನೆಂಟ್​ ಹಂತದ ಹುದ್ದೆಗಳನ್ನು ನೀಡಲಾಗುವುದು. ತರಬೇತಿಯ ಅವಧಿಯು 49 ವಾರವಾಗಿರುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ವಿವಾಹವಾಗುವಂತಿಲ್ಲ.

ಯಾವ ವಿಭಾಗಗಳಲ್ಲಿ ತರಬೇತಿ, ಎಷ್ಟು ಸ್ಥಾನ?

*ಸಿವಿಲ್​/ ಬಿಲ್ಡಿಂಗ್​ ಕನ್​ಸ್ಟ್ರಕ್ಷನ್​ ಟೆಕ್ನಾಲಜಿ - 41

*ಆಕಿರ್ಟೆಕ್ಚರ್​ - 2

*ಮೆಕ್ಯಾನಿಕಲ್​ - 20

*ಎಲೆಕ್ಟ್ರಿಕಲ್​/ ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ - 14

*ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​/ ಕಂಪ್ಯೂಟರ್​ ಟೆಕ್ನಾಲಜಿ/ ಎಂಎಸ್ಸಿ ಕಂಪ್ಯೂಟರ್​ ಸೈನ್ಸ್​ - 32

*ಇನ್​ಮೇರ್ಷನ್​ ಟೆಕ್ನಾಲಜಿ - 9

*ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿಕಮ್ಯುನಿಕೇಷನ್​ - 5

*ಟೆಲಿಕಮ್ಯುನಿಕೇಷನ್​ ಇಂಜಿನಿಯರಿಂಗ್​ - 3

*ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ - 8

*ಸ್ಯಾಟಲೈಟ್​ ಕಮ್ಯುನಿಕೇಷನ್​ - 2

*ಎಲೆಕ್ಟ್ರಾನಿಕ್ಸ್​ - 2

*ಮೈಕ್ರೋ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಮೈಕ್ರೋವೇವ್​ - 2

*ಏರೋನಾಟಿಕಲ್​ /ಏರೋಸ್ಪೇಸ್​/ಎವಿಯೋನಿಕ್ಸ್​ - 5

*ರಿಮೋಟ್​ ಸೆನ್ಸಿಂಗ್​ - 1

*ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಇನ್​ಸ್ಟ್ರುಮೆಂಟೇಷನ್​/ ಇನ್​ಸ್ಟ್ರುಮೆಂಟೇಷನ್​ - 4

*ಪ್ರೊಡಕ್ಷನ್​ - 1

*ಆಟೋಮೊಬೈಲ್​ ಇಂಜಿನಿಯರಿಂಗ್​ - 3

*ಇಂಡಸ್ಟ್ರಿಯಲ್​/ ಮ್ಯಾನು್ಯಾಕ್ಚರಿಂಗ್​/ ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​ - 2

*ಬ್ಯಾಲಿಸ್ಟಿಕ್ಸ್​ ಇಂಜಿನಿಯರಿಂಗ್​ - 1

*ಬಯೋ ಮೆಡಿಕಲ್​ - 1

*ಟ್ರಾನ್ಸ್​ಪೋರ್ಟೇಷನ್​ ಇಂಜಿನಿಯರಿಂಗ್​ - 1

*ಟೆಕ್ಸ್​ಟೈಲ್​ - 1

*ಅಗ್ರಿಕಲ್ಚರ್​ - 1

*ಮೆಟಲಜಿರ್ಕಲ್​; ಮೆಟಲಜಿರ್ ಆ್ಯಂಡ್​ ಎಕ್ಸ್​ಪ್ಲೋಸಿವ್​ - 1

*ನ್ಯೂಕ್ಲಿಯರ್​ ಟೆಕ್ನಾಲಜಿ - 1

*ಓಪ್ಟೋ ಎಲೆಕ್ಟ್ರಾನಿಕ್ಸ್​ - 2

*ಫೈಬರ್​ ಆಪ್ಟಿಕ್ಸ್​ - 2

*ವರ್ಕ್​ಶಾಪ್​ ಟೆಕ್ನಾಲಜಿ - 2

*ಲೇಸರ್​ ಟೆಕ್ನಾಲಜಿ - 2

*ಬಯೋ ಟೆಕ್ನಾಲಜಿ - 1

*ರಬ್ಬರ್​ ಟೆಕ್ನಾಲಜಿ - 1

*ಕೆಮಿಕಲ್​ ಇಂಜಿನಿಯರಿಂಗ್​ - 1

ಶೈಕ್ಷಣಿಕ ಅರ್ಹತೆ

ಇಂಜಿನಿಯರಿಂಗ್​ ಪದವಿ ಪಡೆದಿರುವ ಅಥವಾ ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ (1.4.2022ಕ್ಕೆ ಪದವಿ ಪ್ರಮಾಣಪತ್ರ ಪಡೆಯುವಂತಿರಬೇಕು) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿಧವಾ ಅಭ್ಯರ್ಥಿಗಳು ನಾನ್​ ಟೆಕ್ನಿಕಲ್​ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ಟೆಕ್ನಿಕಲ್​ ಹುದ್ದೆಗೆ ಬಿಇ/ಬಿ.ಟೆಕ್​ ಪದವಿ ಪಡೆದಿರಬೇಕು.

ವಯೋಮಿತಿ

1.10.2021ಕ್ಕೆ ಅನ್ವಯವಾಗುವಂತೆ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ(2.4.1994-1.10.2001ರ ನಡುವೆ ಜನಿಸಿರಬೇಕು). ವಿಧವಾ ಅಭ್ಯರ್ಥಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಸ್ಟೈಪೆಂಡ್​: ಐಎಂಎ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ 56,100 ರೂ. ಸ್ಟೈಪೆಂಡ್ ​ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 27.10.2021

ಅಧಿಸೂಚನೆಗೆ: https://bit.ly/2Yis75o

ಮಾಹಿತಿಗೆ: http://www.joinindianarmy.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net