ವಿಜ್ಞಾನ ಪದವೀಧರರಿಗೆ ಉತ್ತಮ ಅವಕಾಶ: ವಾಡಿಯಾ ಸಂಸ್ಥೆಯಿಂದ ಅರ್ಜಿ ಆಹ್ವಾನ

wadia
Published on

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ವಾಡಿಯಾ ಇನ್​ಸ್ಟಿಟ್ಯೂಟ್​ ಆಫ್ ಹಿಮಾಲಯನ್​ ಜಿಯಾಲಜಿಯು ಸ್ವಾಯತ್ತ ಸಂಶೋಧನಾ ಸಂಸ್ಥೆಯಾಗಿದೆ. ಹಿಮಾಲಯದ ಜಿಯೋಸೈನ್ಸ್​ನ ಎಲ್ಲ ಅಂಶಗಳ ಬಗ್ಗೆ ಸಂಶೋಧನೆ ನಡೆಸುತ್ತದೆ. ಪೆಟ್ರೋಲಜಿ, ಭೂರಾಸಾಯನಶಾಸ್ತ್ರ, ಸೆಡಿಮೆಂಟಾಲಜಿ, ಕ್ವಾರ್ಟನರಿ ಜಿಯಾಲಜಿ, ಜಿಯೋಮಾಫಾರ್ಲಜಿ, ಗ್ಲೇಸಿಯಾಲಜಿ, ಎನ್ಮಿರಾನ್​ಮೆಂಟ್​ ಜಿಯಾಲಜಿ, ಜಿಪಿಎಸ್​ ಹಾಗೂ ಇತರ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಸಂಸ್ಥೆಯಾಗಿದೆ. ಪ್ರಸ್ತುತ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಮೀಸಲಾತಿ ನಿಗದಿಯಾಗಿದ್ದು, ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಮಾನ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಒಟ್ಟು ಹುದ್ದೆಗಳು: 34


ಹುದ್ದೆ ವಿವರ
* ಸೈಂಟಿಸ್ಟ್​ ಸಿ 2
* ಸೈಂಟಿಸ್ಟ್​ ಬಿ 9
* ಅಡ್ಮಿನಿಸ್ಟ್ರೆಟೀವ್​ ಆಫೀಸರ್​ 1
* ಟೆಕ್ನಿಕಲ್​ ಅಸಿಸ್ಟೆಂಟ್​ 3
* ಅಪ್ಪರ್​ ಡಿವಿಷನ್​ ಕ್ಲರ್ಕ್​ 4
* ಡ್ರ್ಟ್​ಾಸ್​ಮನ್​ 2
* ಲೋವರ್​ ಡಿವಿಷನ್​ ಕ್ಲರ್ಕ್​ 3
* ಡೆವರ್​ 3
* ಫೀಲ್ಡ್​ ಕಂ ಲ್ಯಾಬೊರೇಟರಿ ಅಟೆಂಡೆಂಟ್​ 5
* ಫೀಲ್ಡ್​ ಅಟೆಂಡೆಂಟ್​ 2

ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್​+ಐಟಿಐ ಪ್ರಮಾಣ ಪತ್ರ, ಪ್ರೌಢ ಶಿಕ್ಷಣ, ಎಸ್ಸೆಸ್ಸೆಲ್ಸಿ, ಇಂಟರ್​ಮೀಡಿಯೇಟ್​, ಯಾವುದೇ ಪದವಿ, ಇಂಜಿನಿಯರಿಂಗ್​ನಲ್ಲಿ ಬಿಎಸ್ಸಿ/ ಡಿಪ್ಲೊಮಾ, ಜಿಯೋಸೈನ್ಸ್​ನಲ್ಲಿ ಎಂಎಸ್ಸಿ, ಪಿಎಚ್​ಡಿ ಅಧ್ಯಯನ ಮಾಡಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಕಂಪ್ಯೂಟರ್​ ಜ್ಞಾನ, ವಾಹನ ಪರವಾನಗಿ, ವೃತ್ತಿ ಅನುಭವ ಕೇಳಲಾಗಿದೆ.

ವಯೋಮಿತಿ: 1.3.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 25 ರಿಂದ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಸೈಂಟಿಸ್ಟ್​ ಸಿ ಮತ್ತು ಬಿಗೆ ಮಾಸಿಕ 39,100 ರೂ., ಅಡ್ಮನಿಸ್ಟ್ರೆಟೀವ್​ ಅಧಿಕಾರಿಗೆ ಮಾಸಿಕ 34,800 ರೂ., ಉಳಿದ ಹುದ್ದೆಗಳಿಗೆ ಮಾಸಿಕ 20,200 ರೂ. ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಹುದ್ದೆಗಳಿಗೆ ಅನುಗುಣವಾಗಿ ಎಸ್ಸಿ ಮತ್ತು ಎಸ್ಟಿ ಆಭ್ಯರ್ಥಿಗಳಿಗೆ 100 ರೂ. ನಿಂದ 700 ರೂ, ವರೆಗೆ ಅರ್ಜಿ ಶುಲ್ಕ ಇದೆ. ಸಾಮಾನ್ಯವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿ, ಇತರ ಹಿಂದುಳಿದ ಅಭ್ಯರ್ಥಿಗಳಿಗೆ 200 ರೂ. ನಿಂದ 1400 ರೂ. ವರೆಗೆ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 16.8.2021
ಅಧಿಸೂಚನೆಗೆ: https://bit.ly/2UNBzfJ
ಮಾಹಿತಿಗೆ: http://wihg.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net