

ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಮತ್ತು ನೀರಾವರಿ ಬೇಡಿಕೆ ನೀಗಿಸಲು ಸ್ಥಾಪಿತವಾಗಿರುವ ವಿಶ್ವೇಶ್ವರಯ್ಯ ಜಲ ನಿಗಮದ ಬೆಂಗಳೂರು ಹಾಗೂ ಚಿತ್ರದುರ್ಗ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 67
ಹುದ್ದೆ ವಿವರ
- ಬೆಂಗಳೂರು ಕಚೇರಿಯಲ್ಲಿನ ವಿವರ - 59
* ಡೆಪ್ಯುಟಿ ಮ್ಯಾನೇಜರ್-ಸಕ್ರೇಟರಿಯಲ್ ಆ್ಯಂಡ್ ಲೀಗಲ್ - 1
* ಸಿಸ್ಟಂ ಇಂಜಿನಿಯರ್ - 1
* ಸೀನಿಯರ್ ಅಕೌಂಟ್ಸ್ ಎಕ್ಸಿಕ್ಯೂಟಿವ್ - 1
* ಅಕೌಂಟ್ಸ್ ಅಸಿಸ್ಟೆಂಟ್ - 4
* ಆಫೀಸ್ ಅಸಿಸ್ಟೆಂಟ್ - 12
* ಪರ್ಸನಲ್ ಅಸಿಸ್ಟೆಂಟ್ - 5
* ಡೇಟಾ ಎಂಟ್ರಿ ಆಪರೇಟರ್ - 8
* ರಿಸೆಪ್ಷನಿಸ್ಟ್ ಕಂ ಟೆಲಿಫೋನ್ ಆಪರೇಟರ್ - 1
* ಡೆವರ್ - 11
* ಅಟೆಂಡರ್ - 10
* ಪ್ಯೂನ್ - 5
- ಚಿತ್ರದುರ್ಗ ಕಚೇರಿ ವಿವರ - 9
* ಅಸಿಸ್ಟೆಂಟ್ ಮ್ಯಾನೇಜರ್ (ಅಕೌಂಟ್ಸ್) - 1
* ಅಕೌಂಟ್ಸ್ ಅಸಿಸ್ಟೆಂಟ್ - 1
* ಪರ್ಸನಲ್ ಅಸಿಸ್ಟೆಂಟ್ - 1
* ಡೇಟಾ ಎಂಟ್ರಿ ಆಪರೇಟರ್ - 2
* ಡೆವರ್ - 1
* ಅಟೆಂಡೆಂಟ್ - 2
ವಿದ್ಯಾರ್ಹತೆ: 7ನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್ನಲ್ಲಿ ಡಿಪ್ಲೊಮಾ, ಕಾಮರ್ಸ್ ಪದವಿ, ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಾನಿಕ್ಸ್ನಲ್ಲಿ ಬಿಇ, ಇಂಟರ್ ಸಿಎ/ ಇಂಟರ್ ಐಸಿಡಬ್ಲು/ ಎಂಬಿಎ/ ಎಂಕಾಂ, ಇಂಟರ್ ಸಿಎಸ್ ಅಧ್ಯಯನ ಮಾಡಿದ್ದು, ಕಂಪ್ಯೂಟರ್ ಜ್ಞಾನ ಅವಶ್ಯ. ಡೆವರ್ ಹುದ್ದೆಗೆ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ ನಿಗದಿಪಡಿಸಿದ್ದು, ಗರಿಷ್ಠ ವಯೋಮಿತಿಯು, ಹುದ್ದೆ ಹಾಗೂ ಮೀಸಲಾತಿಗೆ ಅನುಗುಣವಾಗಿ ಬದಲಾಗಿದೆ.
ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 18,600 ರೂ. ನಿಂದ 97,100 ರೂ. ವರೆಗೆ ಇದೆ.
ಸೂಚನೆ: ಆಸಕ್ತ ಅಭ್ಯರ್ಥಿಗಳು ವಿಜೆಎನ್ಎಲ್ ವೆಬ್ಸೈಟ್ನಲ್ಲಿರುವ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳ ಜತೆ, ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತವಾಗಿದ್ದೇನೆ ಎಂದು ಒಂದು ಪುಟ ಟಿಪ್ಪಣಿ ಬರೆದು ಪ್ರಧಾನ ವ್ಯವಸ್ಥಾಪಕರು- ಆರ್ಥಿಕ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ನೆಲ ಮಹಡಿ, ಸಂ.148, ಎಂಬೆಸ್ಸಿ ಚೌಕ, ಇನ್ಫೆಂಟ್ರಿ ರಸ್ತೆ, ಬೆಂಗಳೂರು-560001 ವಿಳಾಸಕ್ಕೆ ಅರ್ಜಿ ಸಲ್ಲಿಕೆ ಅಂತಿಮ ದಿನದ ಸಂಜೆ 5 ಗಂಟೆ ಒಳಗೆ ಕಳುಹಿಸಬೇಕು. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್/ ಪತ್ರದ ಮೂಲಕ ಸಂದರ್ಶನದ ಮಾಹಿತಿ ರವಾನಿಸಲಾಗುವುದು. ವಿಡಿಯೋ ಸಂವಾದ/ ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 22.7.2021
ಅಧಿಸೂಚನೆಗೆ: https://bit.ly/3kph8QL
ಮಾಹಿತಿಗೆ: http://www.vjnl.in