ವಾಯುಪಡೆಯಲ್ಲಿ ಖಾಲಿ ಇವೆ ಗ್ರೂಪ್ ಸಿ ಹುದ್ದೆಗಳು: 83 ಹುದ್ದೆಗಳಿಗೆ ಅರ್ಜಿ ಆಹ್ವಾನ

vayupade1
Published on

ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ‘ಸಿ’ ಸಿವಿಲಿಯನ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 7ನೇ ವೇತನ ಆಯೋಗದ ಅನ್ವಯ ಹುದ್ದೆಗೆ ಅನುಗುಣವಾಗಿ ಹಂತ 1 ರಿಂದ 4ರ ವರೆಗೆ ವೇತನ ಇದೆ. ಆಸಕ್ತ ಅಭ್ಯರ್ಥಿಗಳು ಯಾವುದೇ ಸ್ಟೇಷನ್​ಗೆ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಸೂಚನೆ ಜತೆ ನೀಡಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ 10 ರೂ. ಸ್ಟಾಂಪ್ ಅಂಟಿಸಿ ಆರ್ಡಿನರಿ ಪೋಸ್ಟ್ ಮೂಲಕ ಆಯ್ಕೆ ಮಾಡಿಕೊಳ್ಳುವ ಸ್ಟೇಷನ್/ ಕೇಂದ್ರಕ್ಕೆ ಅರ್ಜಿಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆ ವಿವರ

* ಸೂಪರಿಟೆಂಡೆಂಟ್ (ಸ್ಟೋರ್) - 1

* ಲೋವರ್ ಡಿವಿಷನ್ ಕ್ಲರ್ಕ್ (ಎಲ್​ಡಿಸಿ) - 12

* ಕುಕ್ (ಆರ್ಡಿನರಿ ಗ್ರೇಡ್) - 5

* ಕಾರ್ಪೆಂಟರ್ (ಸ್ಕಿಲ್ಡ್) - 1

* ಸಿವಿಲಿಯನ್ ಮೆಕಾನಿಕಲ್ ಟ್ರಾನ್ಸ್​ಪೋರ್ಟ್ ಡ್ರೖೆವರ್ (ಸಿಎಂಟಿಡಿ - ಆರ್ಡಿನರಿ ಗ್ರೇಡ್) - 45

* ಫೈರ್​ವ್ಯಾನ್ - 1

* ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) - 18

ಎಲ್ಲೆಲ್ಲಿ ನೇಮಕಾತಿ?: ಬೆಳಗಾವಿಯ ಸ್ಟೇಷನ್ ಕಮಾಂಡರ್ ಏರ್​ವುನ್ ಟ್ರೇನಿಂಗ್ ಸ್ಕೂಲ್​ನಲ್ಲಿ ಸಿಎಂಟಿಡಿಗೆ 1 ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಉಳಿದಂತೆ ಆಗ್ರಾ, ಅಸ್ಸಾಂ, ರಾಜಸ್ಥಾನ, ಚೆನ್ನೈ, ಸಿಕಂದರಾಬಾದ್, ದೆಹಲಿ, ಪಂಜಾಬ್, ಚಂಡೀಗಢ, ಶ್ರೀನಗರ, ಡೆಹ್ರಾಡೂನ್, ಕಾನ್ಪುರ, ತಮಿಳುನಾಡು, ಗುವಾಹಟಿ, ಅಲಹಾಬಾದ್, ನಾಸಿಕ್, ಮಧ್ಯಪ್ರದೇಶ, ಹರಿಯಾಣದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ವಿದ್ಯಾರ್ಹತೆ: ಪ್ರೌಢ ಶಿಕ್ಷಣ, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು. ಹುದ್ದೆಗೆ ಅನುಗುಣವಾಗಿ ಸ್ಟೋರ್ ಹಾಗೂ ಅಕೌಂಟ್ಸ್​ನಲ್ಲಿ ಅನುಭವ, ನಿಮಿಷಕ್ಕೆ 35 ಪದ ಇಂಗ್ಲಿಷ್, 30 ಪದ ಹಿಂದಿ ಟೈಪಿಂಗ್ ತಿಳಿದಿರಬೇಕು, ಕೇಟರಿಂಗ್​ನಲ್ಲಿ ಡಿಪ್ಲೊಮಾ, ಕಾರ್​ಪೆಂಟರ್ ವಿಷಯದಲ್ಲಿ ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್​ಸ್ಟಿಟ್ಯೂಟ್​ನಿಂದ ಪ್ರಮಾಣಪತ್ರ, ಸಿವಿಲ್ ಡ್ರೈವಿಂಗ್ ಲೈಸೆನ್ಸ್ ಜತೆ ವೃತ್ತಿ ಅನುಭವ, ಫೈರ್ ಫೈಟಿಂಗ್​ನಲ್ಲಿ ತರಬೇತಿ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ವಯಸ್ಸು, ಕನಿಷ್ಠ ವಿದ್ಯಾರ್ಹತೆ, ದಾಖಲೆ, ಪ್ರಮಾಣಪತ್ರ, ಅರ್ಹತೆಗಳನ್ನು ಆಧರಿಸಿ ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಇದರಲ್ಲಿ 1:10ರ ಅನುಪಾತದಲ್ಲಿ ಆಯ್ಕೆಮಾಡಲಾದ ಅಭ್ಯರ್ಥಿಗಳನ್ನು ಕೌಶಲ/ ದೈಹಿಕ/ ಪ್ರಾಕ್ಟಿಕಲ್ ಪರೀಕ್ಷೆಗೆ ಒಳಪಡಿಸಲಾಗುವುದು. ಇದರಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಿ ಅಂತಿಮ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 1.12.2021 (ಎಂಪ್ಲಾಮೆಂಟ್ ನ್ಯೂಸ್​ನಲ್ಲಿ ಜಾಹೀರಾತು ಪ್ರಕಟವಾದ 30ದ ದಿನದ ಒಳಗೆ)

ಅಧಿಸೂಚನೆಗೆ: https://bit.ly/3BZmM0N  (ಎಂಪ್ಲಾಮೆಂಟ್ ನ್ಯೂಸ್​ನ ಅ.30ರ ಸಂಚಿಕೆ ಪುಟ 24)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net