

ಗದಗ: ಗದಗ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದ್ದು, ಕೋವಿಡ್ ಕಾರಣದಿಂದಾಗಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.
ಹುದ್ದೆ, ಸಂಖ್ಯೆ ವಿವರ
* ಸ್ಟೆನೋಗ್ರಾಫರ್ - 2
* ಟೈಪಿಸ್ಟ್ - 1
* ಟೈಪಿಸ್ಟ್-ಕಾಪಿಯಿಸ್ಟ್ - 1
ಸ್ಟೆನೋಗ್ರಾಫರ್ ಹುದ್ದೆಯಲ್ಲಿ ತಲಾ ಒಂದು ಹುದ್ದೆಗಳನ್ನು ಎಸ್‍ಸಿ ಹಾಗೂ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಟೈಪಿಸ್ಟ್ ಹುದ್ದೆಯನ್ನು ಸಾಮಾನ್ಯ ವರ್ಗದ ಅಂಗವಿಕಲ ಅಭ್ಯರ್ಥಿಗೆ ಹಾಗೂ ಟೈಪಿಸ್ಟ್-ಕಾಪಿಯಿಸ್ಟ್ ಹುದ್ದೆಯನ್ನು ಸಾಮಾನ್ಯವರ್ಗದ ಗ್ರಾಮೀಣ ಅಭ್ಯರ್ಥಿಗೆ ಮೀಸಲಿರಿಸಲಾಗಿದೆ.
ಏನು ಓದಿರಬೇಕು?: ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ. ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಸೀನಿಯರ್ ಟೈಪ್ ರೈಟಿಂಗ್ ಮತ್ತು ಸೀನಿಯರ್ ಷಾರ್ಟ್‍ಹ್ಯಾಂಡ್ ಆಗಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್‍ಸಿ, ಎಸ್‍ಟಿಗೆ ಗರಿಷ್ಠ 40, ಪ್ರವರ್ಗ 2ಎ, 2ಬಿ, 3ಎ, 3ಬಿ ಮತ್ತು ಇತರ ಹಿಂದುಳಿದ ವರ್ಗಕ್ಕೆ ಗರಿಷ್ಠ 38 ವರ್ಷ.
ಆಯ್ಕೆ ಪ್ರಕ್ರಿಯೆ: ಕ್ವಾಲಿಫೈಯಿಂಗ್ ಟೆಸ್ಟ್- ಹುದ್ದೆಗೆ ಅನುಗುಣವಾಗಿ 5 ರಿಂದ 15 ನಿಮಿಷ ಡಿಕ್ಟೇಷನ್ ಮಾಡಲಾಗುವುದು. ನಿಮಿಷಕ್ಕೆ 120 ಪದಗಳ ಟೈಂಪಿಂಗ್ ವೇಗ ಅಗತ್ಯ. ನಂತರ ಸಂದರ್ಶನ ನಡೆಸಲಾಗುವುದು.
ಅರ್ಜಿ ಶುಲ್ಕ: ಪ್ರವರ್ಗ 1, ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳು 50 ರೂ, ಇನ್ನುಳಿದ ಅಭ್ಯರ್ಥಿಗಳು 100 ರೂ. ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೇ ದಿನ: 15.12.2020
ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿರುವ ಅಧಿಸೂಚನೆ: https://bit.ly/3mUGSTn
ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ: https://bit.ly/3n0jQdS
ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: https://districts.ecourts.gov.in/
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ