ನೀವು ಕ್ರೀಡಾಪಟುಗಳೆ? ಹಾಗಿದ್ದರೆ ರೈಲ್ವೆಯಲ್ಲಿ ನಿಮಗಿದೆ ಉದ್ಯೋಗಾವಕಾಶ

udyoga- sports
Published on

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿರುವ ಸೌತ್ ವೆಸ್ಟ್ರನ್ ರೈಲ್ವೇ ಪರ್ಸೋನೆಲ್ ಡಿಪಾರ್ಟ್‍ಮೆಂಟ್‍ನಿಂದ (ನೈರುತ್ಯ ರೈಲ್ವೆ) ಕ್ರೀಡಾಪಟುಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ನೈರುತ್ಯ ರೈಲ್ವೆ ವಲಯದಲ್ಲಿ ಲೆವೆಲ್ 2/3 ದರ್ಜೆಯ ಉದ್ಯೋಗ ಒದಗಿಸಲಾಗುತ್ತಿದೆ. 2020-21ನೇ ಸಾಲಿನ ನೇಮಕಾತಿ ಇದಾಗಿದ್ದು, ಹುದ್ದೆಗಳಲ್ಲಿ ಮೀಸಲಾತಿ ಇಲ್ಲ. 21 ಹುದ್ದೆಗಳಲ್ಲಿ 2 ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ಇದೆ.

ಯಾವ ಕ್ರೀಡಾಪಟುಗಳಿಗೆ ಅವಕಾಶ?

* ಅಥ್ಲೆಟಿಕ್ಸ್

- 400 ಮೀ. ಹರ್ಡಲ್ಸ್ - 1

- ಲಾಂಗ್ ಜಂಪ್ - 2

- 5000/10000 ಮೀ - 1

- 800/ 1500 ಮೀ. - 1

* ಬ್ಯಾಡ್ಮಿಂಟನ್

- ಸಿಂಗಲ್/ಡಬಲ್ - 2

* ಕ್ರಿಕೆಟ್

- ಆಫ್ ಸ್ಪಿನ್ನರ್ ವಿತ್ ಬ್ಯಾಟ್ಸ್‍ಮೆನ್ - 1

- ಮಿಡಲ್ ಆರ್ಡರ್ ಬ್ಯಾಟ್ಸ್‍ಮೆನ್ - 1

- ಮೀಡಿಯಂ ಪೇಸರ್ - 1

*ವೇಟ್‍ಲಿಫ್ಟಿಂಗ್

- 55 ಕೆಜಿ - 1

- 102 ಕೆಜಿ - 1

* ಟೇಬಲ್ ಟೆನಿಸ್

-ಸಿಂಗಲ್/ ಡಬಲ್ -1

* ಹಾಕಿ

- ಹಾಫ್​ ಬ್ಯಾಕ್ - 2

- ಫುಲ್ ಬ್ಯಾಕ್ - 1

- ಫಾರ್ವಡ್ - 1

* ಸ್ವಿಮಿಂಗ್

- 50/100/200 ಮೀ. ಫ್ರೀಸ್ಟೈಲ್ - 1

- 50/100/200 ಮೀ. ಬ್ಯಾಕ್‍ಸ್ಟ್ರೋಕ್ - 1

* ಗಾಲ್ಫ್ - 2

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪೆÇ್ಲಮಾ ಜತೆ ಕ್ರೀಡಾ ಸಾಧನೆಗಳು ಅವಶ್ಯ.

ವಯೋಮಿತಿ: 1.1.2021ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.

ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಮಾಜಿ ಸೈನಿಕ, ಅಂಗವಿಕಲ, ಮಹಿಳಾ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 250 ರೂ. ನಿಗದಿಪಡಿಸಿದ್ದು, ಇತರ ಅಭ್ಯರ್ಥಿಗಳಿಗೆ 500 ರೂ. ಭರಿಸಬೇಕು. ಟ್ರಯಲ್‍ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮೊತ್ತವನ್ನು ಹಿಂತಿರುಗಿಸಲಾಗುವುದು.

ಯಾವ ಸಾಧನೆ ಪರಿಗಣನೆ?

* ಕೆಟಗರಿ ಎ, ಬಿ, ಸಿ ಎಂದು ವಿಭಾಗ ಮಾಡಿದ್ದು, ಒಲಿಂಪಿಕ್ ಗೇಮ್, ವರ್ಲ್ಡ್ ಕಪ್, ವರ್ಲ್ಡ್ ಚಾಂಪಿಯನ್‍ಷಿಪ್, ಏಷಿಯನ್ ಗೇಮ್ಸ್, ಕಾಮನ್‍ವೆಲ್ತ್ ಗೇಮ್ಸ್, ಯೂಥ್ ಒಲಿಂಪಿಕ್ಸ್, ಡೇವಿಸ್ ಕಪ್, ಚಾಂಪಿಯನ್ಸ್ ಟ್ರೋಫಿ, ಥಾಮಸ್/ಊಬರ್ ಕಪ್, ಕಾಮನ್‍ವೆಲ್ತ್ ಚಾಂಪಿಯನ್‍ಷಿಪ್, ಏಷಿಯನ್ ಚಾಂಪಿಯನ್‍ಷಿಪ್/ ಏಷಿಯಾ ಕಪ್, ಸೌತ್ ಏಷಿಯಾ ಫೆಡರೇಷನ್ ಗೇಮ್ಸ್, ಯುಎಸ್‍ಐಸಿ (ವರ್ಲ್ಡ್ ರೈಲ್ವೆ) ಚಾಂಪಿಯನ್‍ಷಿಪ್, ವರ್ಲ್ಡ್ ಯನಿವರ್ಸಿಟಿ ಗೇಮ್ಸ್‍ಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿರಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 28.12.2020

ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ : https://bit.ly/37JgNAr

ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ:  http://www.rrchubli.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net