

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾನಲ್ಲಿ (ಎಸ್ಎಐ) ಅಸಿಸ್ಟೆಂಟ್ ಕೋಚ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಎಸ್ಎಐನಲ್ಲಿ ನೇಮಕ ಮಾಡಿಕೊಳ್ಳಲಾಗುವ ಅಸಿಸ್ಟೆಂಟ್ ಕೋಚ್ ಹುದ್ದೆಯು ಆರಂಭದಲ್ಲಿ 4 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಪ್ರತಿವರ್ಷದ ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. 220 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯಥಿರ್ಗೆ 90 ಸ್ಥಾನ, ಎಸ್ಸಿಗೆ 33, ಎಸ್ಟಿಗೆ 16, ಇತರ ಹಿಂದುಳಿದ ವರ್ಗಕ್ಕೆ 59, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗೆ 22 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಯಾವ ವಿಭಾಗಗಳಲ್ಲಿ ಹುದ್ದೆ?
*ಅರ್ಚರಿ - 13
*ಅಥ್ಲೆಟಿಕ್ಸ್ - 20
*ಬಾಸ್ಕೆಟ್ ಬಾಲ್ - 6
*ಬಾಕ್ಸಿಂಗ್ - 13
*ಸೈಕ್ಲಿಂಗ್ - 13
*ಫೆನ್ಸಿಂಗ್ - 13
*ಫುಟ್ಬಾಲ್- 10
*ಜಿಮ್ನಾಸ್ಟಿಕ್ಸ್ - 6
*ಹ್ಯಾಂಡ್ಬಾಲ್ - 3
*ಹಾಕಿ - 13
*ಜೂಡೋ- 13
*ಕಬಡ್ಡಿ -5
*ಕರಾಟೆ - 4
*ಕಯಾಕಿಂಗ್ ಆ್ಯಂಡ್ ಕನೋಯಿಂಗ್ - 6
*ಖೋ-ಖೋ - 2
*ರೋಯಿಂಗ್- 13
*ಸೆಪಕ್ ಟಕ್ರಾ - 5
*ಶೂಟಿಂಗ್ - 3
*ಸ್ಟಾಫ್‌ಬಾಲ್ - 1
*ಸ್ವಿಮ್ಮಿಂಗ್ - 7
*ಟೇಬಲ್ ಟೆನಿಸ್ - 7
*ಟೆಕ್ವಾಂಡೋ - 6
*ವಾಲಿಬಾಲ್ - 6
*ವೇಟ್ಲಿಫ್ಟಿಂಗ್ - 13
*ಕುಸ್ತಿ- 13 ಹಾಗೂ
*ವುಶು ವಿಭಾಗದಲ್ಲಿ 6 ಹುದ್ದೆಗಳಿವೆ.
ವಿದ್ಯಾರ್ಹತೆ: ಎಸ್ಎಐ, ಎನ್ಎಸ್ ಎನ್ಐಎಸ್ ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೋಚಿಂಗ್ನಲ್ಲಿ ಡಿಪ್ಲೊಮಾ ಮಾಡಿರಬೇಕು. ಒಲಿಂಪಿಕ್/ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಅಭ್ಯಥಿರ್ಗಳು ಅರ್ಹರು.
ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 40 ವರ್ಷ. ಮೀಸಲಾತಿ ಅಭ್ಯಥಿರ್ಗಳಿಗೆ ವಯೋಸಡಿಲಿಕೆ ಇದೆ.
ವೇತನ: ಮಾಸಿಕ 41,420 ರೂ. ನಿಂದ 1,12,400 ರೂ. ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಶಾರ್ಟ್ಲಿಸ್ಟ್ ಮಾಡಲಾದ ಅಭ್ಯಥಿರ್ಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನ ದಿನಾಂಕ, ಸ್ಥಳ, ಸಮಯವನ್ನು ಎಸ್ಎಐ ವೆಬ್ಸೈಟ್ನಲ್ಲಿ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 10.10.2021
ಅಧಿಸೂಚನೆಗೆ: https://bit.ly/3yn9nhp
ಮಾಹಿತಿಗೆ: https://sportsauthorityofindia.nic.in