

ಇ-ಆಡಳಿತ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಸ್ಮಾರ್ಟ್ ಗೌವರ್ನೆನ್ಸ್ (ಸಿಎಸ್‌ಜಿ) ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲ ಹುದ್ದೆಗಳು 3 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು. ವೇತನವನ್ನು ಸಂದರ್ಶನದ ವೇಳೆ ಚರ್ಚಿಸಲು ಅವಕಾಶ ನೀಡಲಾಗಿದೆ.
ಒಟ್ಟು ಹುದ್ದೆಗಳು: 50
ಹುದ್ದೆ ವಿವರ
* ಎಚ್.ಆರ್. ಮ್ಯಾನೇಜರ್ - 1
* ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ - 7
* ಸಾಫ್ಟ್ವೇರ್ ಇಂಜಿನಿಯರ್ - 42
ಶೈಕ್ಷಣಿಕ ಅರ್ಹತೆ: ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ/ ಬಿ.ಟೆಕ್/ ಎಂಸಿಎ/ ಎಂಎಸ್ಸಿ, ಎಂಬಿಎ (ಎಚ್‌ಆರ್) ಮಾಡಿರಬೇಕು. ಪ್ರತಿ ಹುದ್ದೆಗೂ ವೃತ್ತಿ ಅನುಭವ ಕೇಳಲಾಗಿದೆ. ಕಂಪ್ಯೂಟರ್ ಜ್ಞಾನ ಅವಶ್ಯ. ಕನ್ನಡ ಭಾಷೆಯಲ್ಲಿ ಬರೆಯಲು, ಓದಲು, ಮಾತನಾಡಲು ತಿಳಿದಿರಬೇಕು.
ಇತರ ಅರ್ಹತೆಗಳು: ನೆಟ್ ಅಥವಾ ಜಾವಾ ಬಳಸಿ ಅಪ್ಲಿಕೇಷನ್ ಅಭಿವೃದ್ಧಿ, ನಿರ್ವಹಣೆಯಲ್ಲಿ ಅನುಭವ, ಜಾವಾಸ್ಕ್ರಿಪ್ಟ್, ಎಂಎಸ್‌ಎಸ್‌ಕ್ಯುಎಲ್ ಸರ್ವರ್‌ನಲ್ಲಿ ಉತ್ತಮ ಜ್ಞಾನ, ಎಂವಿಸಿ ವಾಸ್ತುಶಿಲ್ಪ ಅಥವಾ ಅಭಿವೃದ್ಧಿಗೆ ವಳಸುವ ವಾಸ್ತುಶಿಲ್ಪದ ಬಗ್ಗೆ ಉತ್ತಮ ಜ್ಞಾನ, ಎಸ್‌ಕ್ಯುಎಲ್ ಪ್ರಶ್ನೆಗಳ ಮೂಲಕ ಉದ್ಯಮ ವರದಿಗಳ ವಿನ್ಯಾಸ, ಅಭಿವೃದ್ಧಿ, ಅನುಷ್ಠಾನ ಮತ್ತು ಬೆಂಗಲದ ಜವಾಬ್ದಾರಿ ವಹಿಸಿಕೊಳ್ಳುವುದು ಹಾಗೂ ಇತರ ಅರ್ಹತೆಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ವ್ಯಕ್ತಿಗತ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನಕ್ಕೆ ಹಾಜರಾಗುವಾಗ ಎಲ್ಲ ದಾಖಲೆ, ಪ್ರಮಾಣ ಪತ್ರಗಳ 2 ಪ್ರತಿ ತರಲು ಸೂಚಿಸಲಾಗಿದೆ.
ಸೂಚನೆ: ಅಭ್ಯರ್ಥಿಗಳಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದ್ದು, ಎಲ್ಲ ಅಗತ್ಯ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ careerscsg@karnataka.gov.inಮೇಲ್‌ಗೆ ಕಳುಹಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 30.7.2021
ಅಧಿಸೂಚನೆಗೆ: https://bit.ly/3yN2cQq
ಮಾಹಿತಿಗೆ: csg.karnataka.gov.in