

ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಹುಚ್ಚುಮಂಗವೊಂದು ಜನರನ್ನು ಅಡ್ಡಾಡಿಸಿಕೊಂಡು ಹೋಗುತ್ತಿದ್ದು, ಇದರ ಕಾಟಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.
ಪೆಟ್ರೋಲ್ ಬಂಕ್ಗೆ ಬರುವ ಜನರ ಮೇಲೆ ಮಂಗ ಎಗರುತ್ತಿದ್ದು, ಈ ದೃಶ್ಯ ಪೆಟ್ರೋಲ್ ಬಂಕ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಹಬೂಬ್ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಅಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬರುವ ಸಿಬ್ಬಂದಿಗೆ ಉಪಟಳ ಕೊಡುತ್ತಿದ್ದು, ಜನರು ಪೆಟ್ರೋಲ್ ಬಂಕ್ಗೆ ಹೋಗಲು ಭಯಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪೆಟ್ರೋಲ್ ಬಂಕ್ನ ಸಿಬ್ಬಂದಿಯ ಗೋಳಂತೂ ಹೇಳತೀರದಾಗಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಇಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿ ಸಿಕ್ಕಸಿಕ್ಕವರ ಮೇಲೆ ಮಂಗ ದಾಳಿ ನಡೆಸುತ್ತಿದೆ.
ನೀವೂ ನೋಡಿ ಈ ವಿಡಿಯೋ: