ರಾಯಚೂರು ಎಣ್ಣೇಬಿಜ ಬೆಳೆಗಾರರ ಸಂಘದಿಂದ ವಿವಿಧ ಉದ್ಯೋಗಗಳಿಗೆ ಆಹ್ವಾನ

udyogamitra-oil
Published on

ರಾಯಚೂರು ಪ್ರಾದೇಶಿಕ ಎಣ್ಣೇಬಿಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ದಾಖಲೆಗಳ ಆಧಾರದ ಮೇಲೆ ಶಾರ್ಟ್​ಲಿಸ್ಟ್​ ಮಾಡಿ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಹುದ್ದೆ ವಿವರ

* ಸಹಾಯಕ ವ್ಯವಸ್ಥಾಪಕರು (ಬೀಜ-1, ವಿತ್ತ-1) - 2

* ಮಾರಾಟ ಸಹಾಯಕರು - 12

* ಟೆಕ್ನಿಕಲ್​ ಅಸಿಸ್ಟೆಂಟ್​ - 1

* ಬೆರಳಚ್ಚುಗಾರ - 1

* ಚಾಲಕರು - 1

ವಿದ್ಯಾರ್ಹತೆ: ಸಹಾಯಕ ವ್ಯವಸ್ಥಾಪಕ (ಬೀಜ) ಹುದ್ದೆಗೆ ಬೀಜತಂತ್ರಜ್ಞಾನ/ ಪ್ಲಾಂಟ್​ ಬ್ರಿಡಿಂಗ್​ ಆ್ಯಂಡ್​ ಜೆನೆಟಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದು, ಬೀಜೋತ್ಪಾದನೆಯಲ್ಲಿ 2 ವರ್ಷದ ವೃತ್ತಿ ಅನುಭವ ಹೊಂದಿದ್ದು, ಕಂಪ್ಯೂಟರ್​ ಜ್ಞಾನ ಅವಶ್ಯ. ಸಹಾಯಕ ವ್ಯವಸ್ಥಾಪಕ (ವಿತ್ತ) ಹುದ್ದೆಗೆ ಎಂಕಾಂ/ ಎಂಬಿಎ (ಫಫೈನಾನ್ಸ್​) ಪದವಿ ಪಡೆದಿದ್ದು, 2 ವರ್ಷದ ವೃತ್ತಿ ಅನುಭವದ ಜತೆ ಕಂಪ್ಯೂಟರ್​ ಆಪರೇಷನ್ಸ್​ ಮತ್ತು ಅಪ್ಲಿಕೇಷನ್ಸ್​ ಜ್ಞಾನದ ಜತೆ ಟ್ಯಾಲಿ ಕೋರ್ಸ್​ ತೇರ್ಗಡೆ ಪತ್ರ ಹೊಂದಿರಬೇಕು. ಮಾರಾಟ ಸಹಾಯಕ ಹುದ್ದೆಗೆ ಮಾರುಕಟ್ಟೆ ವಿಷಯದಲ್ಲಿ ಬಿಕಾಂ/ ಬಿಬಿಎಂ ಪದವಿ ಪಡೆದಿದ್ದು, ಒಂದು ವರ್ಷದ ವೃತ್ತಿ ಅನುಭವ ಜತೆ ಕಂಪ್ಯೂಟರ್​ ಜ್ಞಾನ ಅವಶ್ಯ. ಟೆಕ್ನಿಕಲ್​ ಅಸಿಸ್ಟೆಂಟ್​ ಹುದ್ದೆಗೆ ಐಟಿಐ ಫಿಟ್ಟರ್​ ಉತ್ತೀರ್ಣ, ಬೆರಳಚ್ಚುಗಾರ ಹುದ್ದೆಗೆ ಯಾವುದೇ ಪದವಿ/ 3 ವರ್ಷದ ಡಿಪ್ಲೊಮಾ ಇನ್​ ಕಮಷಿರ್ಯಲ್​ ಪ್ರಾಕ್ಟೀಸ್​ನಲ್ಲಿ ಉತ್ತೀರ್ಣ, ಕಂಪ್ಯೂಟರ್​ ಜ್ಞಾನದ ಜತೆ ಕನ್ನಡ ಮತ್ತು ಇಂಗ್ಲಿಷ್​ ಟೈಪಿಂಗ್​ ಪರಿಣತಿ ಹೊಂದಿರಬೇಕು. ಚಾಲಕ ಹುದ್ದೆಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು, ಚಾಲನಾ ಪರವಾನಗಿ ಹೊಂದಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ ಮೀಸಲಾತಿಗೆ ಅನುಸಾರವಾಗಿ 35, 38, 40 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ., ಉಳಿದ ಅಭ್ಯರ್ಥಿಗಳಿಗೆ 1,000 ರೂ. ಅರ್ಜಿ ಶುಲ್ಕ ಇದ್ದು, ಹಲವು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕ ಅರ್ಜಿ ಹಾಗೂ ಶುಲ್ಕ ಪಾವತಿಸತಕ್ಕದ್ದು.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 11 ಸ್ಥಾನ, ಎಸ್ಸಿಗೆ 1, ಎಸ್ಟಿಗೆ 1, ಪ್ರವರ್ಗ 1ಕ್ಕೆ 1, ಪ್ರವರ್ಗ 2ಎಗೆ 1, ಪ್ರವರ್ಗ 2ಬಿಗೆ 1, ಪ್ರವರ್ಗ 3ಎಗೆ 1 ಸ್ಥಾನ ಮೀಸಲಿರಿಸಲಾಗಿದೆ.

ವೇತನ: ಸಹಾಯಕ ವ್ಯವಸ್ಥಾಪಕರಿಗೆ ಮಾಸಿಕ 40,900-78,200 ರೂ. ವೇತನ ಇದೆ, ಉಳಿದ ಹುದ್ದೆಗಳಿಗೆ ಮಾಸಿಕ 21,400 ರಿಂದ 42,000 ರೂ. ಇದೆ.

ಸೂಚನೆ: ಅಧಿಸೂಚನೆ ಜತೆ ನೀಡಲಾದ ಅರ್ಜಿ ನಮೂನೆಯನ್ನು ಬೆರಳಚ್ಚು ಮಾಡಿಸಿ ಪೂರ್ಣ ವಿವರಗಳೊಂದಿಗೆ ಭತಿರ್ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸತಕ್ಕದ್ದು. ಪ್ರಮಾಣಪತ್ರಗಳ ಜೆರಾಕ್ಸ್​ ಪ್ರತಿಗಳಿಗೆ ಗೆಜೆಟೆಡ್​ ಅಧಿಕಾರಿಯಿಂದ ದೃಢೀಕರಿಣವಿರಬೇಕು. ಆನ್​ಲೈನ್​ ಅರ್ಜಿಗಳಿಗೆ ಮಾನ್ಯತೆ ಇಲ್ಲ.

ಭರ್ತಿ ಮಾಡಿದ ಅರ್ಜಿಗಳನ್ನು ವ್ಯವಸ್ಥಾಪಕ ನಿರ್ದೇಶಕರು, ಪ್ರಾದೇಶಿಕ ಎಣ್ಣೇಬಿಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಪೋಸ್ಟ್​ ಬಾಕ್ಸ್​ ಸಂಖ್ಯೆ 328, ಇಂಡಸ್ಟ್ರಿಯಲ್​ ಏರಿಯಾ, ಹೈದರಾಬಾದ್​ ರೋಡ್​, ರಾಯಚೂರು - 584 102 ವಿಳಾಸಕ್ಕೆ ಸಲ್ಲಿಸತಕ್ಕದು ಎಂದು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 23.7.2021

ಅಧಿಸೂಚನೆಗೆ: https://bit.ly/3ymZCAf

ಮಾಹಿತಿಗೆ:http://kofraichur.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net