ಪರಮಾಣು ಖನಿಜ ನಿರ್ದೇಶನಾಲಯದಲ್ಲಿವೆ 134 ಹುದ್ದೆಗಳು: ಎಸ್‌ಎಸ್‌ಎಲ್‌ಸಿ ಆದವರೂ ಅರ್ಹರು

jobs
Published on

ಪರಮಾಣು ಖನಿಜಗಳ ಉತ್ಖನನ ಹಾಗೂ ಸಂಶೋಧನಾ ನಿರ್ದೇಶನಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವೈಜ್ಞಾನಿಕ, ತಾಂತ್ರಿಕ ಹಾಗೂ ಗುಮಾಸ್ತ, ಚಾಲಕರನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಒಟ್ಟು ಹುದ್ದೆಗಳು: 134

*ಸೈಂಟಿಫಿಕ್ ಅಸಿಸ್ಟೆಂಟ್ ಬಿ- 36 ಹುದ್ದೆಗಳು

ಫಿಜಿಕ್ಸ್, ಕೆಮಿಸ್ಟ್ರಿ, ಜಿಯಾಲಜಿ, ಎಲೆಕ್ಟ್ರಾನಿಕ್ಸ್/ಇನ್​ಸ್ಟ್ರುಮೆಂಟೇಷನ್, ಕಂಪ್ಯೂಟರ್ ಸೈನ್ಸ್/ಇನ್ಪಮೇಷನ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಹಾಗೂ ಸಿವಿಲ್ ವಿಭಾಗದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ಬಿ ಹುದ್ದೆಗಳಾಗಿದ್ದು, 35,400 ರೂ.ಗಳೊಂದಿಗೆ ಇತರ ಭತ್ಯೆಗಳನ್ನು ನೀಡಲಾಗುತ್ತದೆ.

ಆಯಾ ವಿಷಯದಲ್ಲಿ ಬಿಎಸ್​ಸಿ ಪದವಿಯನ್ನು ಶೇ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಹಾಗೂ ಇನ್​ಸ್ಟ್ರುಮೆಂಟೇಷನ್, ಎಲೆಕ್ಟ್ರಿಕ್ ಸಿವಿಲ್ ವಿಷಯದಲ್ಲಿ ಡಿಪ್ಲೊಮಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

*ಟೆಕ್ನಿಕಲ್ ಬಿ- 41 ಸ್ಥಾನಗಳು

ಫಿಜಿಕ್ಸ್/ಎಲೆಕ್ಟ್ರಾನಿಕ್ಸ್/ಇನ್​ಸ್ಟ್ರುಮೆಂಟೇಷನ್ ವಿಭಾಗ, ಲ್ಯಾಬೋರೇಟರಿ, ಪ್ಲಂಬರ್, ಬೈಂಡಿಂಗ್, ಪ್ರಿಂಟಿಂಗ್, ಡ್ರಿಲ್ಲಿಂಗ್​ನಲ್ಲಿ ಸಿಬ್ಬಂದಿ ಬೇಕಾಗಿದ್ದಾರೆ. ಇವುಗಳು ಗ್ರೂಪ್ ಸಿ ಹುದ್ದೆಗಳಾಗಿದ್ದು, ಮಾಸಿಕ 21,700 ರೂ. ವೇತನ ಹಾಗೂ ಇತರ ಭತ್ಯೆಗಳನ್ನು ನೀಡಲಾಗುತ್ತದೆ. ಇದಕ್ಕೆ 10ನೇ ತರಗತಿ ಉತ್ತೀರ್ಣರಾಗಿದ್ದು, ಆಯಾ ಟ್ರೇಡ್​ನಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಕೋರ್ಸ್ ಪೂರೈಸಿರಬೇಕು. ಅನುಭವವಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

*ಅಪ್ಪರ್ ಡಿವಿಷನಲ್ ಕ್ಲರ್ಕ್-16

ಗ್ರೂಪ್ ಸಿ ಹುದ್ದೆಯಾಗಿದ್ದು, ಶೇ.50 ಅಂಕಗಳೊಂದಿಗೆ ಪದವಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಜತೆಗೆ, ಇಂಗ್ಲಿಷ್​ನಲ್ಲಿ ಪ್ರತಿ ನಿಮಿಷಕ್ಕೆ 30 ಪದ ಟೈಪಿಂಗ್ ವೇಗ ಮಾಡಬೇಕು. . ಕಂಪ್ಯೂಟರ್ ಜ್ಞಾನ, ಡೇಟಾ ಎಂಟ್ರಿ, ಡೇಟಾ ಪ್ರೊಸೆಸಿಂಗ್ ಗೊತ್ತಿರಬೇಕು. ಆಯ್ಕೆಯಾದವರು 25,500 ರೂ. ವೇತನ ಹಾಗೂ ಇತರ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ.

ಚಾಲಕರು-13

10ನೇ ತರಗತಿ ಪಾಸಾಗಿದ್ದು, ಲಘು ಹಾಗೂ ಭಾರಿ ವಾಹನಗಳ ಚಾಲನಾ ಪರವಾನಗಿ ಹೊಂದಿರಬೇಕು. ಹಿಂದಿ, ಇಂಗ್ಲಿಷ್​ನಲ್ಲಿರುವ ಫಾರಂ ಭರ್ತಿ ಮಾಡಲು ತಿಳಿದಿರುವವರಿಗೆ ಆದ್ಯತೆ. 19,900 ರೂ. ವೇತನ, ಇತರ ಭತ್ಯೆಗಳಿವೆ.

ಸೆಕ್ಯುರಿಟಿ ಗಾರ್ಡ್-18

10ನೇ ತರಗತಿ ಪಾಸಾಗಿರಬೇಕು. ಮಾಜಿ ಸೈನಿಕರಿಗೆ ಸೇನಾಪಡೆಯಿಂದ ನೀಡಲಾಗುವ ಮಾಜಿ ಸೈನಿಕ ಪ್ರಮಾಣಪತ್ರ ಪರಿಗಣಿಸಲಾಗುತ್ತದೆ. ನಿಗದಿತ ದೈಹಿಕ ಅರ್ಹತೆ ಹೊಂದಿರಬೇಕು. ಇವರಿಗೆ 18,000 ರೂ. ಸಂಬಳ ನೀಡಲಾಗುತ್ತದೆ. ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

*ವಯೋಮಿತಿ

ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯರಿಗೆ 35, ಎಸ್​ಸಿ- ಎಸ್​ಟಿ 40, ಒಬಿಸಿಯವರಿಗೆ 38 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಇದರ ಹೊರತಾಗಿಯೂ ಮೀಸಲಾತಿಯನ್ವಯ ವಯೋಮಿತಿ ಸಡಿಲಿಕೆ ಇರಲಿದೆ.

*ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಬಳಿಕ ಸಂದರ್ಶನ ನಡೆಸಲಾಗುತ್ತದೆ. ಗುಮಾಸ್ತ ಹಾಗೂ ತಾಂತ್ರಿಕ ಹುದ್ದೆಗಳಿಗೆ ಕೌಶಲ ಪರೀಕ್ಷೆಯೂ ಇರಲಿದೆ. ಸೈಂಟಿಸ್ಟ್ ಬಿ ಹುದ್ದೆಗಳಿಗೆ 200 ರೂ. ಹಾಗೂ ಉಳಿದ ಹುದ್ದೆಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. ಎಸ್​ಸಿ, ಎಸ್​ಟಿ, ಅಂಗವಿಕಲ ಹಾಗೂ ಮಹಿಳೆಯರಿಗೆ ಶುಲ್ಕ ವಿನಾಯ್ತಿ ಇದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 24.10.2021

ಅಧಿಸೂಚನೆಗೆ: https://bit.ly/305KxHk

ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ: https://bit.ly/3BzU8Eq

*ಸಂಸ್ಥೆ ಪರಿಚಯ

ಅಣುಶಕ್ತಿ ಯೋಜನೆಗಳಿಗೆ ಅಗತ್ಯವಾದ ಯುರೇನಿಯಂ ನಿಕ್ಷೇಪಗಳನ್ನು ಪತ್ತೆ ಹಚ್ಚುವುದು ಈ ಸಂಸ್ಥೆಯ ಪ್ರ ಮುಖ ಉದ್ದೇಶವಾಗಿದೆ. ಬೆಂಗಳೂರು, ನವದೆಹಲಿ, ಜೆಮ್ೆಡ್​ಪುರ್, ಶಿಲ್ಲಾಂಗ್, ಜೈಪುರ, ನಾಗ್ಪುರ್ ಹಾಗೂ ಹೈದರಾಬಾದ್​ನಲ್ಲಿ ಕೇಂದ್ರಗಳನ್ನು ಹೊಂದಿದೆ. ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಸಂಶೋಧನೆ ನಡೆಸುತ್ತಿದೆ. ಕಡಲ ತೀರ, ಕರಾವಳಿ ಮರಳು ಪ್ರದೇಶ, ಅಪರೂಪದ ಖನಿಜಗಳ ಅನ್ವೇಷಣೆಗೂ ತಂಡಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net