ನೌಕಾದಳದಲ್ಲಿ ಸಂಗೀತಗಾರರಿಗೆ ಉದ್ಯೋಗಾವಕಾಶ: 33 ಹುದ್ದೆಗಳಿಗೆ ಆಹ್ವಾನ

udyoga-noukadala
Published on

ನೌಕಾದಳದ ಸೇಲರ್ ವಿಭಾಗದಲ್ಲಿ ಖಾಲಿ ಇರುವ ಮ್ಯುಸಿಷಿಯನ್ (ಸಂಗೀತಕಾರ) ಹುದ್ದೆಗೆ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2021ರ ಅಕ್ಟೋಬರ್​ನಲ್ಲಿ ಪ್ರಾರಂಭವಾಗುವ ಹೊಸ ಬ್ಯಾಚ್​ಗೆ 33 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು. 300 ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಪರೀಕ್ಷೆಗೆ ಆಹ್ವಾನಿಸಲಾಗುವುದು ಎಂದು ತಿಳಿಸಲಾಗಿದೆ.

ವಿದ್ಯಾರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದಿರುವ ಸಂಗೀತ ಶಾಲೆ/ ಸಂಸ್ಥೆಯಿಂದ ಹಿಂದೂಸ್ತಾನಿ/ ಶಾಸ್ತ್ರೀಯ ಸಂಗೀತದಲ್ಲಿ ಪ್ರಾವಿಣ್ಯತೆ ಹೊಂದಿರುವ ಪ್ರಮಾಣಪತ್ರ ಅವಶ್ಯ.

ಸಂಗೀತದ ಅರ್ಹತೆ: ಒಂದು ಸಂಪೂರ್ಣ ಹಾಡಿನ ಟೆಂಪೋ, ಪಿಚ್ ಹಾಗೂ ಇತರ ಅಂಶಗಳ ಬಗ್ಗೆ ಜ್ಞಾನ ಹೊಂದಿರಬೇಕು. ಭಾರತೀಯ ಅಥವಾ ವಿದೇಶಿ ಮೂಲದ ಯಾವುದೇ ಸಂಗೀತ ಉಪಕರಣದಲ್ಲಿ ಕೌಶಲ ಹೊಂದಿರಬೇಕು. ವಾದ್ಯವನ್ನು ಶ್ರುತಿಗೊಳಿಸುವಲ್ಲಿ ಪ್ರಾವೀಣ್ಯತೆ, ಅಪರಿಚಿತ ಟಿಪ್ಪಣಿಗಳನ್ನು ವಾದ್ಯಗಳೊಂದಿಗೆ ಹೊಂದಿಸುವುದು, ಭಾರತೀಯ ಶಾಸ್ತ್ರೀಯ ಸಂಗೀತ, ರಾಗ, ತಾಳ, ಭಾರತೀಯ ಅಥವಾ ಅಂತಾರಾಷ್ಟ್ರೀಯ ಸಂಗೀತದ ಮೂಲ ಸಿದ್ಧಾಂತದ ಬಗ್ಗೆ ಜ್ಞಾನ ಹೊಂದಿರಬೇಕು. ವಿಂಡ್ ಇನ್​ಸ್ಟ್ರುಮೆಂಟ್​ನಲ್ಲಿ ಪಾಶ್ಚಾತ್ಯ/ ದೇಶೀಯ ಸಂಗೀತ ಪ್ರದರ್ಶಿಸುವ ಅಭ್ಯರ್ಥಿಗಳು ಲಂಡನ್​ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ಅಥವಾ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್​ನಲ್ಲಿ ಕನಿಷ್ಠ ಆರಂಭಿಕ ದರ್ಜೆಯ ಪ್ರಮಾಣಪತ್ರ ಹೊಂದಿದ್ದರೆ ಆದ್ಯತೆ ನೀಡಲಾಗುತ್ತದೆ.

ಈ ವಾದ್ಯಗಳಲ್ಲಿ ಪ್ರಾವಿಣ್ಯತೆ ಅವಶ್ಯ: ಕೀಬೋರ್ಡ್, ಸ್ಟ್ರಿಂಗ್, ವಿಂಡ್ ಇನ್​ಸ್ಟ್ರುಮೆಂಟ್ಸ್ ಅಥವಾ ಭಾರತೀಯ/ ವಿದೇಶಿ ಮೂಲದ ಯಾವುದೇ ವಾದ್ಯಗಳಲ್ಲಿ ಪರಿಣಿತ ಹೊಂದಿದ್ದು, ನುಡಿಸುವಂತಿರಬೇಕು. ಅನಿರ್ದಿಷ್ಟ ಪಿಚ್ ಹೊಂದಿರುವ ಜಾಜ್ ಡ್ರಮ್್ಸ ಸೆಟ್, ಬೇಸ್ ಡ್ರಮ್ ಸ್ನೇರ್ ಡ್ರಮ್ ಸೈಡ್ ಡ್ರಮ್ ಸಿಂಬಲ್ಸ್, ಕ್ರೋಮ್ಯಾಟಿಕ್ ಅಲ್ಲದ ಉಪಕರಣಗಳನ್ನು ನುಡಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ವಯೋಮಿತಿ: 1996ರ ಅಕ್ಟೋಬರ್ 1 ರಿಂದ 2004ರ ಸೆಪ್ಟೆಂಬರ್ 30ರ ನಡುವೆ ಜನಿಸಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ನೀಡಲಾಗುವುದು.

ವೇತನ: ಆರಂಭಿಕ ತರಬೇತಿ ಹಂತದಲ್ಲಿ ಮಾಸಿಕ 14,600 ರೂ. ಗೌರವಧನ ನೀಡಲಾಗುವುದು. ತರಬೇತಿ ಪೂರ್ಣಗೊಂಡ ಬಳಿಕ ಮಾಸಿಕ 21,700-69,100 ರೂ. ವೇತನ ನೀಡಲಾಗುವುದು. ಇದರ ಜತೆಗೆ ಎಸ್​ಆರ್​ಪಿ 5,200 ರೂ. ಹಾಗೂ ಡಿಎ ಭತ್ಯೆ ನೀಡಲಾಗುವುದು. ಈ ಹುದ್ದೆಯಲ್ಲಿ ಪ್ರಮೋಷನ್​ಗೂ ಅವಕಾಶ ಇದ್ದು, ಆಗ ಮಾಸಿಕ 47,600-1,51,100 ರೂ. ವೇತನ ಇದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಸಂಗೀತ ಅರ್ಹತೆ (ಡಿಪ್ಲೊಮಾ, ಪದವಿ, ಪ್ರಮಾಣಪತ್ರ, ಪ್ರಶಸ್ತಿ, ಕಾರ್ಯಕ್ರಮದಲ್ಲಿನ ಪಾಲ್ಗೊಳ್ಳುವಿಕೆ) ಆಧರಿಸಿ ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಸಂಗೀತ ಪರೀಕ್ಷೆ ಹಾಗೂ ಫಿಜಿಕಲ್ ಫಿಟ್​ನೆಸ್ ಪರೀಕ್ಷೆ (ಪಿಎಫ್​ಟಿ) ನಡೆಸಲಾಗುವುದು. ನಂತರ ಒಡಿಶಾದ ಚಿಲ್ಕಾದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.

ತರಬೇತಿ: 2021ರ ಅಕ್ಟೋಬರ್​ನಲ್ಲಿ ಆರಂಭವಾಗುವ ತರಬೇತಿಯಲ್ಲಿ ಮೊದಲು ಚಿಲ್ಕಾದಲ್ಲಿ 15 ವಾರ ಬೇಸಿಕ್ ತರಬೇತಿ ನೀಡಲಾಗುವುದು. ನಂತರ ಮುಂಬೈನ ಮಿಲಿಟರಿ ಮ್ಯೂಸಿಕ್​ನಲ್ಲಿ 26 ವಾರಗಳ ವಿಶೇಷ ತರಬೇತಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 6.8.2021 (ಅರ್ಜಿ ಸಲ್ಲಿಕೆ ಆರಂಭ ಆ.2ರಿಂದ)

ಅಧಿಸೂಚನೆಗೆ: https://bit.ly/3BDvEdH

ಮಾಹಿತಿಗೆ:http://www.joinindiannavy.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net