ನೌಕಾದಳದಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೆ ಉದ್ಯೋಗ: 350 ಹುದ್ದೆಗಳಿಗೆ ಆಹ್ವಾನ

udyoga-nouka
Published on

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನೌಕಾದಳದ ಡೊಮೆಸ್ಟಿಕ್ ವಿಭಾಗದಲ್ಲಿ ಖಾಲಿ ಇರುವ ಕುಕ್, ಸ್ಟೀವರ್ಡ್ ಮತ್ತು ಹೈಜಿನಿಸ್ಟ್ ಹುದ್ದೆಗಳಿಗೆ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 350

ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 2021 ರಿಂದ ತರಬೇತಿ ಆರಂಭವಾಗಲಿದ್ದು, ಸೆ.21ರ ನಂತರ ಮೆರಿಟ್ ಲಿಸ್ಟ್ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. 12 ವಾರಗಳ ಆರಂಭದ ಬೇಸಿಕ್ ತರಬೇತಿಯ ಚಿಲ್ಕಾದ ಐಎನ್‌ಎಸ್‌ನಲ್ಲಿ ನಡೆಯಲಿದೆ. ಆರಂಭದಲ್ಲಿ 15 ವರ್ಷಗಳ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಕರೊನಾ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗುವಾಗ ಅಭ್ಯರ್ಥಿಗಳು ಕಡ್ಡಾಯವಾಗಿ 72 ಗಂಟೆಗಳ ಮುಂಚೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಹುದ್ದೆ ವಿವರ

* ಚೆಫ್: ನಿಗದಿತ ಮೆನು ಅನುಸಾರ ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆಗಳನ್ನು ಸಿದ್ಧಪಡಿಸಬೇಕು ಮತ್ತು ಪಡಿತರ ಲೆಕ್ಕಪತ್ರ ನಿರ್ವಹಣೆ ಮಾಡಬೇಕು. ಹೆಚ್ಚುವರಿಯಾಗಿ ಸಂಸ್ಥೆಯ ಸಮರ್ಥ ನಿರ್ವಹಣೆಗಾಗಿ ಇತರ ಕರ್ತವ್ಯಗಳನ್ನು ನೀಡಲಾಗುವುದು.

* ವ್ಯವಸ್ಥಾಪಕ (ಸ್ಟೀವರ್ಡ್): ಅಧಿಕಾರಿಗಳಿಗೆ ಊಟ ನೀಡುವುದು, ಮನೆಗೆಲಸ, ಹಣದ ಲೆಕ್ಕಪತ್ರ ನಿರ್ವಹಣೆ, ವೈನ್ ಮತ್ತು ಮಳಿಗೆಗಳ ನಿರ್ವಹಣೆ, ಮೆನು ಸಿದ್ಧಪಡಿಸುವುದರ ಜತೆಗೆ ಇತರ ಜವಾಬ್ದಾರಿಗಳನ್ನು ನೀಡಲಾಗುವುದು.

* ಹೈಜಿನಿಸ್ಟ್: ವಾಶ್‌ರೂಂ, ಶವರ್ ಸ್ಥಳ ಹಾಗೂ ಇತರ ಪ್ರದೇಶಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಇತರ ಜವಾಬ್ದಾರಿಗಳನ್ನು ನೀಡಲಾಗುವುದು.

ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರಬೇಕು.

ವಯೋಮಿತಿ: 1.4.2001 ರಿಂದ 2004ರ ಸೆ.30ರ ನಡುವೆ ಜನಿಸಿರಬೇಕು.

ವೇತನ: ಆರಂಭದ ತರಬೇತಿ ಹಂತದಲ್ಲಿ ಮಾಸಿಕ 14,600 ರೂ. ಸ್ಟೈಪೆಂಡ್ ನೀಡಲಾಗುವುದು. ತರಬೇತಿ ಪೂರ್ಣಗೊಳಿಸಿದ ನಂತರ 21,700 - 69,100 ರೂ. ವೇತನ ಜತೆ ಎಂಎಸ್‌ಪಿ, ಡಿಎ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು. ಅಧ್ಯಯನ ಸಾಮಗ್ರಿ, ಯೂನಿಾರ್ಮ್, ಆಹಾರ, ವಸತಿಗಳನ್ನು ನಿಯಮಾನುಸಾರ ನೀಡಲಾಗುವುದು. ಅಲ್ಲದೇ 50 ಲಕ್ಷರೂ.ನ ಇನ್‌ಶುರೆನ್ಸ್ ಒಳಗೊಂಡಿರುತ್ತದೆ. ವೈದ್ಯಕೀಯ ಸೇವೆ ಒದಗಿಸಲಾಗುವುದು. ನಿವೃತ್ತಿ ನಂತರ ಪಿಂಚಣಿ, ಗ್ರಾಜುಟಿ ಮತ್ತು ಇಸಿಎಚ್‌ಎಸ್ ವೈದ್ಯಕೀಯ ಸೌಲಭ್ಯ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ ಆಧರಿಸಿ 1750 ಆಯ್ದ ಅಭ್ಯರ್ಥಿಗಳನ್ನು ಬಹುಮಾದರಿ ಆಯ್ಕೆ ಮಾದರಿಯ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಪರೀಕ್ಷೆಲ್ಲಿ ವಿಜ್ಞಾನ,ಗಣಿತ, ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಫಿಜಿಕಲ್ ಫಿಟ್ನೆಸ್ ಪರೀಕ್ಷೆ ಮಾಡಲಾಗುವುದು. ರೆನ್‌ಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 23.7.2021

ಅಧಿಸೂಚನೆಗೆ: https://bit.ly/3hUFIpL

ಮಾಹಿತಿಗೆ: www.joinindiancoastguard.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net