

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಧನಸಹಾಯದಲ್ಲಿ ಪ್ರಾರಂಭಿಸುತ್ತಿರುವ “Integrating Training and Supervision in Psychosocial and Mental Health Care for One Stop Centre (OSC) staff to support Women Facing Violence” ಎಂಬ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಹಲವು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲ ಹುದ್ದೆಗಳ ಕಾರ್ಯಕ್ಷೇತ್ರ ಬೆಂಗಳೂರು ಆಗಿರುತ್ತದೆ.
ಒಟ್ಟು ಹುದ್ದೆಗಳು: 10
ಹುದ್ದೆ ವಿವರ
* ಅಸಿಸ್ಟೆಂಟ್ ಪ್ರೊಫೆಸರ್ (ಸೈಕಿಯಾಟ್ರಿ) - 1
* ಪ್ರೋಗ್ರಾಮ್ ಮ್ಯಾನೇಜರ್ - 1
* ಪ್ರೋಗ್ರಾಮ್ ಅಸಿಸ್ಟೆಂಟ್: ಟೆನರ್ - 5
* ಕೋ ಆಡಿರ್ನೇಟರ್ - 1
* ಮೀಡಿಯಾ ಕೋ ಆಡಿರ್ನೇಟರ್ - 1
* ಐಟಿ ಮ್ಯಾನೇಜರ್ - 1
ಶೈಕ್ಷಣಿಕ ಅರ್ಹತೆ: ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್/ ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂಫಿಲ್, ಎಂಎಸ್ಡಬ್ಲು, ಮಾಸ್ ಮೀಡಿಯಾ ಆ್ಯಂಡ್ ಕಮ್ಯುನಿಕೇಷನ್/ ರ್ಜನಲಿಸಂನಲ್ಲಿ ಪದವಿ, ಎಂಸಿಎ/ ಬಿಇ/ ಬಿಟೆಕ್, ಸೈಕಿಯಾಟ್ರಿಯಲ್ಲಿ ಎಂಡಿ, ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್/ ಸೈಕಾಲಜಿಯಲ್ಲಿ ಪಿಎಚ್.ಡಿ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಲ್ಲ ಹುದ್ದೆಗಳಿಗೂ ಕನಿಷ್ಠ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಪ್ರೋಗ್ರಾಮ್ ಮ್ಯಾನೇಜರ್ಗೆ ಗರಿಷ್ಠ 40 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ಅಸಿಸ್ಟೆಂಟ್ ಪ್ರೊಫೆಸರ್ಗೆ ಮಾಸಿಕ 1 ಲಕ್ಷ ರೂ., ಪ್ರೋಗ್ರಾಮ್ ಮ್ಯಾನೇಜರ್ಗೆ ಮಾಸಿಕ 75,000 ರೂ., ಪ್ರೋಗ್ರಾಮ್ ಅಸಿಸ್ಟೆಂಟ್ಗೆ ಮಾಸಿಕ 55,000 ರೂ., ಉಳಿದ ಹುದ್ದೆಗಳಿಗೆ ಮಾಸಿಕ 35,000 ರೂ. ವೇತನ ನಿಗದಿಪಡಿಸಲಾಗಿದೆ.
ಸೂಚನೆ: ಪ್ರತಿ ಹುದ್ದೆಗೂ ಅರ್ಜಿ ಸಲ್ಲಿಸಲು ಪ್ರತ್ಯೇಕ ಅರ್ಜಿ ಸಲ್ಲಿಕೆ ಲಿಂಕ್ ನೀಡಲಾಗಿದ್ದು, ಅಭ್ಯರ್ಥಿಗಳು ಆಯಾಯ ಹುದ್ದೆಗೆ ಆಯಾಯ ಲಿಂಕ್ ಮೂಲಕವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಕೌಶಲ ಪರೀಕ್ಷೆ/ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನವನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಸಲಾಗುವುದು. ಸಂದರ್ಶನದ ದಿನಾಂಕವನ್ನು ಆಯ್ದ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 5.7.2021
ಅಧಿಸೂಚನೆಗೆ: https://bit.ly/3doSKKI
ಮಾಹಿತಿಗೆ: http://nimhans.ac.in